Tuesday, December 31, 2013

ಹೃದಯ ಪ್ರೀತಿ ಸಂಪನ್ನ


ಎಲ್ಲೆಂದು ಹುಡುಕಲಿ ನಿನ್ನ
ಬರಿ ಕನಸಲ್ಲೇ ಕಾಡುತಿರುವೆ ಯನ್ನ
ಕೊಡಬಾರದೇ ಮುನ್ಸೂಚನೆ ನೀ ಬರುವ ಮುನ್ನ !!

                                                                     ಕಲ್ಲೆಂದು ಕರೆದರು ನನ್ನ
                                                                     ಹೃದಯ ವೇದನೆಯ ಪಟ್ಟಿತ್ತು ಚಿನ್ನ
                                                                     ಕೂಡಬಾರದೇ ನೀ ಇಂದಾದರೂ ನನ್ನ ಪ್ರೀತಿಯನ್ನ !!

ಇನ್ನೆಂದು ಸೇರುವಿಯೇ ನನ್ನನ್ನ
ನೀ ನನ್ನ ಹೃದಯಕ್ಕೆ ಇಟ್ಟೆಯಲ್ಲ ಕನ್ನ
ಕೆಡಬಾರದು ನಿನ್ನ ವಿನಃ ನಾನು ಹೃದಯ ಪ್ರೀತಿ ಸಂಪನ್ನ !!

--ಶ್ರೀಧರ ಐತಾಳ ದೇವಳಿ

ಸಂಸಾರಿಯ ಪರಿತಾಪ






ಅರಗಿಣಿ ನಿನ್ನಯ ಮೋಹಕ ನೋಟ
ಹಿಡಿದಿಟ್ಟಿತು ನನ್ನಯ ದೃಷ್ಟಿಯ ಓಟ
ಶೃಂಗಾರದ ಒಡತಿಯ ಆ ಮೈಮಾಟ
ಮರೆತೇ ನಾನಲ್ಲಿ ಬ್ರಹ್ಮಚರ್ಯದ ಪಾಠ  !!

ನೋಡಿದೆ ನಿನ್ನ ವೈಯಾರದ ನಡಿಗೆ
ಓಡಿತು ಮನಸದು ನಿನ್ನಯ ಬಳಿಗೆ
ಬಯಸಿತು ನಿನ್ನನು ಕ್ಷಣಗಳ ಒಳಗೆ
ಮರೆಯೆನು ಅದುವೇ ಅಮೃತ ಘಳಿಗೆ  !!

ನೆನೆಯುವೆ ನಿನ್ನ ಮುಗ್ದ ನಗುವನು
ತಪ್ಪಿಸಿರಲಾರದ ಕಣ್ ಸೆಳೆತವನು
ಬಯಸಿದೆ ಕದ್ದು ನೋಡಲು ನಿನ್ನನು
ಮೆಚ್ಚಿದ ಮನಕೆ ಅಲ್ಲಿ ತಂಪನೀಯುವೆನು !!


--ಶ್ರೀಧರ ಐತಾಳ ದೇವಳಿ 

 

Monday, December 30, 2013

ಆಮ್ ಆದ್ಮಿ



ಚುನಾವಣೆಯಲ್ಲಿ ಕಾಂಗ್ರೆಸ್ಸ್ ದ್ವೇಷ
ಅಧಿಕಾರಕ್ಕೆ ಬರಲು ಅದೇ ಕಾಂಗ್ರೆಸ್ಸ್ ಸಖ್ಯ
ಎಲ್ಲಿದೆ ನಿಮಗೆ ನೈತಿಕತೆ
ಗದ್ದುಗೆ ಪಡೆಯಲು ಮಾಡಿದ ಸಾಹಸಕತೆ ??

ಸದ್ದಿಲ್ಲದೇ ವಿದೇಶದಿಂದ ಹರಿದು ಬಂತು
ಕಪ್ಪೋ ಬಿಳುಪಿನ ರಾಶಿ ಹಣ
ಇಂದಲ್ಲ ನಾಳೆಗೆ ಕಾದಿದೆ ನಿಮ್ಮಯ ಹೊಸ ಹಗರಣ !!

ಹೆಸರು ಪಡೆಯಲು ಬೇಕಾಗಿತ್ತು ಅಣ್ಣನ ಕೃಪೆ
ಹೋರಾಟದ ಹೆಸರಿನಲ್ಲಿ
ನಡೆಯಿತು ಹೊಸ ರಾಜಕೀಯ ಪಕ್ಷದ ನೀಚ ಅರಾಜಕತೆ !!

ಬಡವನ ಹೆಸರಲಿ ಬೇಕಾಗಿತ್ತೆ ಬಂಡಾಯ
ಅಹಂಕಾರದ ಗುಂಪಿಗೆ
ಅವಶ್ಯಕವಾಗಿತ್ತು ಅಧಿಕಾರದ ಆಸೆಯ ರಾಜಕೀಯ ಜಯ !!

-- ಶ್ರೀಧರ ಐತಾಳ ದೇವಳಿ

Sunday, December 29, 2013

ಅನಂತ




ಅನಂತ "ಭಯ" ವ ಪಟ್ಟಾಗ
"ಅಭಯ" ಸಿಗುವುದು
ಅನಂತ "ಜಯ" ವ ಪಡೆದರೆ
"ಅಜೇಯ" ರಾಗುವರು  !!

ಅನಂತ "ಗೌರವ" ವ ಪಡೆದರೆ
"ಅಗೌರವ" ಹೋಗುವುದು
ಅನಂತ "ಮೌಲ್ಯ" ವ ಕಲಿತರೆ
"ಅಮೂಲ್ಯ" ವಾಗುವುದು  !!
 
ಅನಂತ "ಪಾಪ"ವ  ಮಾಡಿದರೆ
"ಅಪಾಯ" ವಾಗುವುದು
ಅನಂತ "ತಂತ್ರ" ವ ಮಾಡಿದರೆ
"ಅತಂತ್ರ" ವಾಗುವುದು !!

ಅನಂತ "ಧರ್ಮ" ವ ಪಾಲಿಸಿದರೆ
"ಅಧರ್ಮ" ವಾದೀತು
ಅನಂತ  "ಅರ್ಥ" ವ ಸಂಪಾದಿಸಿ
"ಅನರ್ಥ" ವಾದೀತು !!

ಅನಂತ "ನಾಥ" ರಿಗೆ ಹುಟ್ಟಿದರೆ
"ಅನಾಥ" ರಾಗುವರು 
"ಅನಂತ ಶಯನ" ನ ಬೇಡಿದರೆ
"ಆನಂದ" ದೊರಕುವುದು !!

--ಶ್ರೀಧರ ಐತಾಳ ದೇವಳಿ


Friday, December 27, 2013

ಅಗಲಿಕೆ



ನೀ ಯನ್ನ ತೊರೆದರು
ನಿನ್ನ ನಾ ಮರೆಯದಿರುವೆ
ನಿನ್ನ ಅಗಲಿಕೆಯ ಶಿಕ್ಷೆಯನು
ಸದಾ ಅನುಭವಿಸುತಲಿರುವೆ !!

ನೀ ಮೊನ್ನೆ ಹೋದಾಗ
ನಿನ್ನ ಆ ಹೆಜ್ಜೆ ಗುರುತುಗಳು
ಬಿರುಗಾಳಿ ಮಳೆಗೂ ಅಳಿಸದೆ 
ನಿನ್ನೆಡೆಗೆ ಕೈಬೀಸಿ ತಳ್ಳುತಲಿದೆ !!

ನೀ ಒಮ್ಮೆ ಕರಗಿದರೆ 
ಮರೆಯದೆ ಕರೆಯನ್ನನು 
ಮರುಕ್ಷಣದಿ ನಿನ್ನೊಡಲ ಸೇರಿ
ಮುಂದೆಂದು ಬಿಡಲಾರೆ ನಿನ್ನನು !!

-- ಶ್ರೀಧರ ಐತಾಳ ದೇವಳಿ

Tuesday, December 24, 2013

ನಂಬದಿರು



ನಂಬದಿರು ನಂಬದಿರು ಪರರ ಮನವ
ನಿಮ್ಮ ಹಿತೈಷಿಯೆಂದು  ಭ್ರಮಿಸಿ ಮನಕೆ ಘಾತಿಸುವರು
ನಂಬದಿರು ನಂಬದಿರು ಪರರ ಮನವ !!

ವಂಚನೆಯ ಎಂದಾದರು ಸಹಿಸಬಹುದು
ವಂಚಕನ ಸೇರಿಸಲಾರೆವು
ನಿಂದನೆಯ ಎಷ್ಟಾದರೂ ಮರೆಯಬಹುದು
ನಿಂದಕನ ಮರೆಯಲಾರೆವು !!

ನಂಬದಿರು ನಂಬದಿರು ಪರರ ಮನವ
ನಿಮ್ಮ ಆಪ್ತನೆಂದು ಕರೆಸಿಕೊಂಡು ಕ್ಷಣಕೆ ಬದಲಾಗುವರು
ನಂಬದಿರು ನಂಬದಿರು ಪರರ ಮನವ !!

ಸಮಯಸಾಧಕನ ಕಪಟ ವರ್ಣನೆಯ
ಬಣ್ಣದ ಮಾತನು ಮೆಚ್ಚಲಾರೆವು
ವಿಶ್ವಾಸಘಾತಕನ ಕುಟುಕು ಸಲ್ಲಾಪದ
ಚುಚ್ಚುಮಾತನ್ನು ಇಚ್ಚಿಸಲಾರೆವು !!

ನಂಬದಿರು ನಂಬದಿರು ಪರರ ಮನವ
ನಂಬಿಸಿ ಮೋಸಮಾಡುವವ "ಈ ಮಾನವ" 
ನಂಬದಿರು ನಂಬದಿರು ಪರರ ಮನವ !!


Tuesday, December 10, 2013

ಗೆಳೆಯರಿಬ್ಬರು




ಗಿಡಗಳೆರಡು ಬೆಳೆದಾವು
ಬರಿ ನೀರು ಮಣ್ಣಿನ ಬಲದಲ್ಲಿ
ಆಸೆಗಳೆರಡು ಸುಳಿದಾವು
ಹೆಣ್ಣು ಗಂಡಿನ ಸಹವಾಸದಲ್ಲಿ !!

ಕಷ್ಟಗಳೆರಡು ಬಂದಾವು
ಸುಖ ದುಖದ ಈ ಜೀವನದಲ್ಲಿ
ಮೋಸಗಳೆರಡು ಆದಾವು
ಲಾಭ ನಷ್ಟದ ವ್ಯವಹಾರದಲ್ಲಿ !!

ಒಡಕುಗಳೆರಡು ಕಂಡಾವು
ಗಂಡ ಹೆಂಡಿರ ಸಂಸಾರದಲ್ಲಿ
ಗೆಳೆಯರಿಬ್ಬರು ಬದಲಾಗರು
ಕೃಷ್ಣ ಸುಧಾಮರ ಈ ತವರಲ್ಲಿ !!

ಶ್ರೀಧರ ಐತಾಳ ದೇವಳಿ

Friday, December 6, 2013

ಓ ಕನಸೇ ನೀ ಎಷ್ಟೊಂದು ಸುಂದರ




"ಓ ಕನಸೇ ನೀ ಎಷ್ಟೊಂದು ಸುಂದರ"

ರಾತ್ರಿ ನಿದ್ರೆಯಲ್ಲಿ ಬಂದು
ಮನಕೆ ಮುದ ನೀಡುವೆ
ಬೆಳಿಗ್ಗೆ ನಿನ್ನ ನೆನೆಯಲು
ನೀ ಮರತೆ ಹೋಗಿರುವೆ
ಓ ಕನಸೇ ನೀ ಎಷ್ಟೊಂದು ಸುಂದರ !!


ಮಕ್ಕಳ ಸವಿ ನಿದ್ರೆಯಲ್ಲೂ
ನೀ ತಪ್ಪದೆ ಬರುವಿಯಂತೆ
ಕುಶಿಯಕೊಟ್ಟು ನೀ ನಗಿಸುವೆ
ಕಂದನ ಮುಕವನು ಅರಳಿಸುವೆ
ಓ ಕನಸೇ ನೀ ಎಷ್ಟೊಂದು ಸುಂದರ !!


ಕನಸಲಿ ಆಶಾ ಗೋಪುರ ಕಟ್ಟಿ
ಕ್ಷಣಿಕ ಸಾಧನೆಗೆ ಗೆಲ್ಲಿಸಿರುವೆ
ಕನಸಲ್ಲಾದರೂ ತೃಪ್ತಿ ಕೊಡುವೆ
ಮನಕೆ ಕೊಂಚ ತಂಪನೀಯುವೆ
ಓ ಕನಸೇ ನೀ ಎಷ್ಟೊಂದು ಸುಂದರ !!


ಒಮ್ಮೆ ಬಂದ ಕನಸು ಮತ್ತೆ ಬಾರದು
ನಮ್ಮ ಆಪ್ತರನ್ನು ಎಂದೂ ಮರೆಯದು
ಭಯಾನಕವಾದರೆ ಮೊಟಕಾಗುವುದು
ಸೋಗಸಾದರೆ ದೀರ್ಘವಾಗಿರುವುದು
ಓ ಕನಸೇ ನೀ ಎಷ್ಟೊಂದು ಸುಂದರ !!

ಶ್ರೀಧರ ಐತಾಳ ದೇವಳಿ

Wednesday, December 4, 2013

ಎನಿತು ಭಾಗ್ಯ ತಾಯೆ ನಿನದು







ತಾನು ಹೆತ್ತ ಮಗುವಲ್ಲದಿದ್ದರು
ಎದೆ ಹಾಲು ಉಣಿಸುವ ಭಾಗ್ಯ
ನಿನ್ನದಾಯಿತಲ್ಲೇ ಯಶೋದೆ...
ಎನಿತು ಭಾಗ್ಯ ತಾಯೆ ನಿನದು ?

ಮೂರು ಲೋಕದ ಒಡೆಯನಿಗೆ
ನಿನ್ನ ಕೈಯಾರೆ ತುತ್ತು ತೆತ್ತಿರುವೆ
ಗೊಲ್ಲ ಕೇರಿಯ ಬೆಣ್ಣೆಯಿತ್ತಿರುವೆ 
ಎನಿತು ಭಾಗ್ಯ ತಾಯೆ ನಿನದು ?

ತೊಟ್ಟಿಲ ಕಂದನ ಲೀಲೆಯ ಕಂಡೆ 
ಬಾಯೊಳು ಸಮಸ್ತ ಲೋಕವ ಕಂಡೆ
ದೇವರ ದೇವನ ಮಮತೆಯ ತಾಯಿ 
ಎನಿತು ಭಾಗ್ಯ ತಾಯೆ ನಿನದು ?

ಪುರುಷ ಸಿಂಹನ ತೊಳಲಿ ಆಡಿಸಿ
ವಿರಾಟ ರೂಪವ ಕಣ್ಣಲಿ ನೊಡಲು
ಹಲವು ಜನ್ಮದ ಪುಣ್ಯವು ಸಾಲದು 
ಎನಿತು ಭಾಗ್ಯ ತಾಯೆ ನಿನದು ? 

ಯಶೋದೆ...
ಎನಿತು ಭಾಗ್ಯ ತಾಯೆ ನಿನದು?

--Sridhar Aithal Devali

Friday, November 29, 2013

ಮಾನಿನಿ

ಮನದನಿಯನ ಮನಸಿಗೆ ಸವಿಯಾದ
ಮುದ ನೀಡುವಳೇ ಮಾನಿನಿಯು ?

ಇನಿಯನ ಈರ್ಷೆಯ ಅರಿತು
ಕ್ಷಣದಲಿ ಮನವನೆ ಬೆರೆತು
ಸನಿಹದಿ ನಿಂತು ಕಲಹವ ಮರೆತು
ಸರಸದಿ ಪ್ರೀತಿಯ ಮಳೆಗೈಯುವಳು ।।

ನೂರಾರು ಬಯಕೆಯ ಹೊತ್ತು
ಮನಸಾರೆ ಕೆಲಸವ ತೆತ್ತು
ಮನೆಮಂದಿಯ ಪ್ರೀತಿಯ ವಸ್ತು 
ಮನದೊಡೆಯನಿಗೆ ಸ್ವಂತದ ಸ್ವತ್ತು !!

ತನ್ನೆಯ ತಾಯಿತಂದೆಯ ತೊರೆದು
ನಾಳೆಯ ಬದುಕನು ನೆನೆದು 
ಸರ್ವರ ಪ್ರೀತಿಗೆ ಬಾಜನಳು, ಈಕೆ
ತವರೂರಿನ ಕೀರ್ತಿಯ ಬೆಳಗುವವಳು !!

ಶ್ರೀಧರ ಐತಾಳ ದೇವಳಿ 

Wednesday, November 13, 2013

ಕನ್ನಡ

ಕನ್ನಡವೇ ನೀನೊಂದು ರಾಜ್ಯವಾದರೆ,
ನಾನಲ್ಲಿ ಸೇವಕ
ಕನ್ನಡವೇ ನೀನೊಂದು ನದಿಯಾದರೆ,
ನಾನಲ್ಲಿ ನಾವಿಕ

ಕನ್ನಡವೇ ನೀನೊಂದು ಉಸಿರಾದರೆ,
ನಾನಲ್ಲಿ ನಾಸಿಕ
ಕನ್ನಡವೇ ನೀನೊಂದು ಬಾಷೆಯಾದರೆ,
ನಾನದರ ಉಪಾಸಕ

ಕನ್ನಡವೇ ನೀನೊಂದು ಪದವಾದರೆ,
ನಾನಲ್ಲಿ ಅಕ್ಷರವು
ಕನ್ನಡವೇ ನೀನೊಂದು ತಾಯಾದರೆ,
ನಾನಿನ್ನ ಕಂದನು

ನೂರಾರು ಜನ್ಮಕ್ಕೂ ಬೇಡುವೆನು
ನಿನ್ನ ಮಡಿಲ ಸೇರಲು
ಮನಸಾರೆ ಹಾಡುವೆನು ತಾಯೆ
ನಿನ್ನ ನಾ ಅರಾದಿಸಲು  !!

Monday, October 21, 2013

ಆಪ್ಯಾಯ



ಕಲ್ಮಶ ತುಂಬಿದ ಮನಸಲ್ಲಿ
ಇರುವುದೆಲ್ಲವೂ ಅಪಾಯ
ನಿಸ್ವಾರ್ಥದಿಂದಾದ ಸೇವೆಯ
ಭಾವನೆಯೇ ಆಪ್ಯಾಯ !!

ಕಪಟ ತುಂಬಿದ ಮನದಲಿ
ಇರುವುದು ಹಲವು ಉಪಾಯ
ಮುಗ್ಧ  ಹೃದಯದಲ್ಲಿರದು ಪರರ
ವಂಚಿಸುವಂತಹ ಸಹಾಯ !!

ಕಠೋರ ಶಬ್ದದ ಮಾತಿನಲ್ಲಿ
ಇರಬಹುದು ಒಳ್ಳೆಯ ವಿಷಯ
ತಾಳ್ಮೆಯಿಂದ ಯೋಚಿಸಿ ತಿಳಿಯಲು 
ಬೇಕು ನಮಗೆ ಸ್ವಲ್ಪ ಸಮಯ !!

Friday, October 18, 2013

ಯನ್ನ ಒಡಲಿನ ನೋವ





ನನ್ನಲ್ಲಡಗಿದ ಕವಿಯೊಬ್ಬ
ಬರೆಸಿದ್ದ ನೂರಾರು ಕವನವ
ಎಷ್ಟೇ ಅರ್ಥ ಬಿಡಿಸಿ ನೋಡಿದರೂ
ತಿಳಿಯಲಾಗದು ಯನ್ನ ಒಡಲಿನ ನೋವ !!

ಬರೆದ ಅಕ್ಷರಗಳಲಿ ಮಿನುಗುತಿತ್ತು
ಬರಿ ವರ್ಣನೆಯ ಪದ ಪುಂಜಗಳು
ನೈಜ ಬದುಕಿನಲಿ ಸುತ್ತಿಕೊಂಡಿತ್ತು 
ಹತ್ತು ಹಲವು ಕಷ್ಟ ಕಾರ್ಪಣ್ಯಗಳು  !!

ಮನಸು ಸದಾ ಮಿಡಿಯುತಿತ್ತು
ಇಂದಲ್ಲ ನಾಳೆಯ ಬದಲಾವಣೆಗೆ
ಕನಸಾದರೂ ನನಸಾಗುವುದೆಂಬ
ಹುಚ್ಚು ಆಸೆಯ ಬೆನ್ನಲ್ಲಿ ಹೊತ್ತು !!

ಭಾವನೆಯ ಪ್ರಪಂಚವೇ ಹಾಗೆ
ಅಲ್ಲಿ ಯಾರು ಅಂಕುಶಹಾಕುವವರಿಲ್ಲ
ನಿರ್ಧಾರಕೆ ಜಗವೇ ತಲೆಬಾಗುತಿತ್ತು
ನಿತ್ಯ ನೂತನ ವಿಷಯ ತುಂಬಿಕೊಂಡಿತ್ತು  !!

ಆದರೆ ಕಾಲಿ ಹೊಟ್ಟೆಯು ಕಾಲಿಯೇ ಆಗಿತ್ತು
ನಾಳೆಯ ಬದುಕಿನ ಆಸೆಯ ಮರೆತಿತ್ತು
ಚಿಗುರಿದ ಕನಸನು ಅಕ್ಷರದಿ ಹೊಂದಿಸಿತ್ತು
ತನ್ನೆಯ ಪಾಲಿಗೆ ಬರಿ ಹೆಸರನು ಪಡೆದಿತ್ತು !!

--Sridhar

Wednesday, October 16, 2013

ಹೇಳವ್ವಾ

 
 
ಹೇಳೇ ನನ್ನ ಹಡೆದವ್ವಾ
ನಿನ್ನಲೇನಿದೆ ಹೇಳವ್ವಾ
ನೋವಲು ನಲಿವಲು ನಿನ್ನದೇ ನೆನಪು
ಹೇಳೇ ನನ್ನ ಹಡೆದವ್ವಾ, ಹೇಳೇ ನನ್ನ ಹಡೆದವ್ವಾ !!

ನವಮಾಸ ನನ್ನ ಹೊತ್ತಿರುವೆ
ನರಕ ಯಾತನೆಯ ಪಟ್ಟಿರುವೆ
ಹರುಷದಿ ಜೀವವ ಕೊಟ್ಟಿರುವೆ
ಲಾಲಿಸಿ ಪಾಲಿಸಿ ಬೆಳೆಸಿರುವೆ !! ಪ !!

ಅದೆಷ್ಟೋ ರಾತ್ರಿ ನಾ ಅತ್ತಿರುವೆ
ನಿದ್ದೆಯಲ್ಲೂ ನಿನ್ನ ಬಲು ಕಾಡಿರುವೆ
ಅದೆಂತಹ ಕರುಣಾಮಯಿ ನೀನವ್ವ
ಹಾಲುಣಿಸಿ ಮಲಗಿಸಿರುವ ನನ್ನವ್ವ !! ಪ !!

ಯಾತನೆ ಪಡುವ ವಿಷಯವೇ ಬರಲಿ
ನಿನ್ನಲಿ ಚರ್ಚಿಸಿ ಮರೆಯುವೆನು
ನಿನ್ನಯ ಮೊಗದಿ ನಗುವನು ಕಂಡು
ಧೈರ್ಯದಿ ಗೆಲುವನು ಪಡೆಯುವೆನು !! ಪ !!

ಹೇಳೇ ನನ್ನ ಹಡೆದವ್ವಾ ನಿನ್ನಲೇನಿದೆ ಹೇಳವ್ವಾ !!

-- Sridhar Aithal D

Monday, October 14, 2013

ಮಧ್ಯಾಹ್ನ್ನದ ಕನಸಿನ ನಿದ್ದೆ




ಅಂದು ಕೊಂಡಿದ್ದೆ ಇಂದು ಹೀಗೆ ಆಗುವುದೆಂದು
ಗೋಡೆಯ ಮೇಲೆ ಹಲ್ಲಿಯ ಕಂಡಾಗ
ಮಾತಿನ ನಡುವೆ ಲುಚ್ ಗುಟ್ಟುವ ಸದ್ದು
ಹೊರಗಡೆ ಬಂದರೆ ಕಪ್ಪು ಬೆಕ್ಕಿನ ಕ್ರಾಸ್ಸಿಂಗ್ !!

ಅಯ್ಯೋ ಇಂದು ಏನೋ ಕೆಡಕು ಆಗುವುದೆಂದು
ಭಯದಿಂದ ನಾ ಮುಂದೆ ಸಾಗುತಲಿದ್ದೆ
ಎದುರಿಗೆ ಬಂದಳು ಕಾಲಿ ಮಡಿಕೆ ಹೊತ್ತ ನಾರಿ
ಸರ್ರನೆ ಮಿಡಿಯಿತು ನೋಡಿ ನನ್ನ ಎಡ ಕಣ್ಣಿನ ಹುಬ್ಬು!!

ಮುಂದೇನೋ ಕಾದಿದೆ ಎಂದು ಯೋಚಿಸುತಲಿದ್ದೆ 
ನೆನಪಾಗಿತು ಮುಂಜಾನೆ ಎದ್ದಿರುವ ದಿಕ್ಕು
ಕೂಡಲೇ ತಿರುಗಿದೆ ನನ್ನಯ ಬಲಬದಿಗೆ ನಾನು
ಬಿದ್ದೇನು ನೊಡಿ ಮಂಚದಿಂದ ಕನಸಿನ ನಿದ್ದೆಯ ಮಧ್ಯೆ !!

ಅಯ್ಯೋ ಅಯ್ಯೋ ಅಯ್ಯೋ .... 

--Sridhar

ಬಾಳಸಂಗಾತಿಯ ಬಹಳ ಪ್ರೇಮಿಸಿರುವೆ

ಬಾಳಸಂಗಾತಿಯೇ ಬಹಳ ಪ್ರೇಮಿಸಿರುವೆ , ನಾ ಬಹಳ ಪ್ರೇಮಿಸಿರುವೆ...
ಬದುಕಿನ ಜೀವ ನೀನೆಂದು
ನಾಳೆಯ ಬಾಳು ನಿನದೆಂದು
ನಮ್ಮಯ ಪ್ರೀತಿ ಸದಾ ಹೀಗಿರಲೆಂದು !!

ಪ್ರೀತಿಯ ಗೋಪುರವ ಕಟ್ಟ ಬಯಸಿರುವೆ
ನಿನ್ನನು ಪಡೆದು ನಾ ಧನ್ಯನೆಂದು  
ಪ್ರೀತಿಗೆ ನೀನೆ ಯೋಗ್ಯಳೆಂದು
ನನ್ನಯ ಹೃದಯಕೆ ತುಂಬಾ ಸನಿಹಬಂದು !!

ಕಣ್ಣಿನ ರೆಪ್ಪೆಯ ಸನಿಹವೇ ಸುಳಿಯುವೆ
ಅತ್ತರು ನೀರು ಬರದಿರಲೆಂದು
ಕತ್ತಲು ನಿನಗೆ ಬಯವಾಗದಿರಲೆಂದು
ನಿನ್ನಯ ಪ್ರತಿ ಹೆಜ್ಜೆಯ ಧ್ವನಿಯಾಗಿರುವೆನೆಂದು !!

ಪ್ರೀತಿಗೆ ನನ್ನದೇ ಅರ್ಥ ಕಲ್ಪಿಸಿರುವೆ
ನಿನ್ನಲಿ ಒಬ್ಬ ಗುರುವಿರುವನೆಂದು
ಅವ ಕಲಿಸಿದ ನೂರಾರು ಬಯಕೆಯ ಬಿಂದು
ಅರ್ಪಿಸಿಹ ನಿನ್ನಯ ತನುವಿನ ಅಮೃತ ಸಿಂಧು !!

ಬಾಳಸಂಗಾತಿಯೇ ಬಹಳ ಪ್ರೆಮಿಸಿರುವೆ ನಾ ಬಹಳ ಪ್ರೇಮಿಸಿರುವೆ !!

--Sridhar Aithal D

Dedicated to my wife on our marriage anniversary "Oct-28th"

Friday, October 11, 2013

ನಾನೇ ಇಂಜಿನಿಯರ್




ಅನುದಿನದ ಬಾಳಿದುವೆ
ಬಂಧನದ ಅನುಭವವೇ
ಸುತ್ತಲೂ ಗೋಡೆಗಳು
ಮೌನದ ಕರಿ ನೆರಳು !!

ಕಾಣಿಸದ ಗುರಿಗಳನು
ಲೆಕ್ಕಿಸದೆ ಕೊಟ್ಟವನು
ಹೆಸರಿಗೆ ಸಾಹುಕಾರನು
ನಮ್ಮಂತೆಯ ಕೂಲಿಯವನು !!

ತಂಪಿನ ಗಾಳಿಯದುವೆ
ಕೊಂಕಿನ ಮಾತುಗಳೊಡನೆ
ನೆಚ್ಚಿದ ಉದ್ಯೋಗವನ್ನು
ಮೆಚ್ಚದೆ ಮಾಡಿಸುವುದು !!

ತಿಂಗಳಿಗೊಮ್ಮೆ ನಗುವುದು 
ವಾರದ ಕೊನೆಗೆ ಕೊರಗುವುದು 
ಜನರ ಕಣ್ಣಿಗೆ ಮಾತ್ರ ಸಿರಿವಂತ
ತಿಳಿದವನಿಗೆ ಗೊತ್ತು ಇವನೆನಂತ !!

Monday, September 23, 2013

ಅರ್ಥವಿದೆ ಗೆಳತಿ



ನಿನ್ನ ನೆನಪಲ್ಲೇ ಕಳೆದ ಒಂದೊಂದು ದಿನಕೂ ಎಷ್ಟೊಂದು ಅರ್ಥವಿದೆ ಗೆಳತಿ !!

ನೀರ ಮೇಲಿನ ಗುಳ್ಳೆಯಂತೆ ಬಂದ ಆಸೆ ನೀನು
ನೆರಳ ಬಯಸಿದ ಒಂಟಿ ಹೆಮ್ಮರದಂತೆ ನಾನು
ಮರುಳುಗಾಡಿನಲಿ ಬಿದ್ದ ಮಳೆಯಂತೆ ಬೇಟಿ ನಮ್ಮದು !!

ಗೂಡಿನ ದಾರಿ ಮರೆತ ತಾಯಿ ಹಕ್ಕಿಯಂತೆ ವೇತನೆ
ಬದುಕಿನ ಆಸೆ ಅರಳಿಸಿದ ನಿನ್ನಯ ಸವಿಯಾದ ವರ್ತನೆ
ತಿಳಿಯದು ಅಂದು ಯಾಕೆ ಸಂದಿಸಿದೆವು ನಾವು ಸುಮ್ಮನೆ !!

ಪ್ರತಿ ಸಂಭಾಷಣೆಗೂ ಮನದಲ್ಲಿ ಆಗು ಹೋಗುಗಳ ಚಿಂತನೆ
ದಿನ ಮುಂಜಾವಿನಲೇ ನಿನ್ನ ನೊಡಲು ಕಾರಣಗಳ ಸಮರ್ತನೆ
ಆದರೂ ತಿಳಿಯದು ನನಗೆ ನಿನ್ನ ಮೂಖಳಾಗಿಸಿದ ಮನಃ ಪರಿವರ್ತನೆ !!

 ನಿನ್ನ ನೆನಪಲ್ಲೇ ಕಳೆದ ಒಂದೊಂದು ದಿನಕೂ ಎಷ್ಟೊಂದು ಅರ್ಥವಿದೆ ಗೆಳತಿ !!


Wednesday, September 18, 2013

ಗಣಪ

 
 
ಭಕ್ತಿಯಿಂದ ಬೇಡಿದ್ದು
ಕೊಡಲೊಲ್ಲೆ ಅನ್ನುವವನಲ್ಲ
ನಮ್ಮ ಗಣಪ...

ಮೊನ್ನೆ ಕೇಳಿದ್ದೆ ಅವನಿಗೆ
ಗಜಮುಖ ವಕ್ರತುಂಡ
ಬಿಡ ಬೇಡ ನನ್ನ ಕೈಯನೆಂದು !

ಭಕ್ತ ಪರಾದೀನ ವಿನಾಯಕ
ವಿಸರ್ಜನೆಯ ದಿನ ನದಿಯಲ್ಲಿ
ಹಿಡಿದೆ ಬಿಡಬೇಕೇ ನನ್ನ ಕೈಯಿ !!!

Thursday, September 12, 2013

ನನ್ನೊಂದಿಗೆ ಕೊನೆಯಾಗುವುದಲ್ಲ





ಮರೆತರು ಮರೆಯಲಾಗದ ನೆನಪೊಂದು
ಮರೆತ ಮನಸನ್ನು ಕೊರೆದು
ಮರೆಯಲಾಗದಂತೆ ನೆನಪಿಸುತಿದೆಯಲ್ಲ !!

ಒಡಲಾಳದ ತಳದಲ್ಲಿ ಕಣ್ಮರೆಯಾಗಿದ್ದ
ನಿನ್ನ ಕುಡಿ ನೋಟವೊಂದು
ಕಡಲಿನಾಳದ ಮುತ್ತಿನಂತೆ ಮಿನುಗುತಿದೆಯಲ್ಲ !!

ಮಾತಿನ ಮರುಕ್ಷಣದಲಿ ನೆನಪೊಂದು
ನಿನ್ನ ಮಾತನ್ನೇ ನೆನಪಿಸಿ
ನನ್ನ ಅಸ್ತಿತ್ವವ ಮರೆಯಾಗಿಸುತಿದೆಯಲ್ಲ !!

ಮರೆತರು ಕರೆದರೂ ನೆನೆದರು ಎಂದೆಂದೂ
ಬರಲಾರದ ಊರಲ್ಲಿ ನೀನಿರುವೆ

ನಿನ್ನ ನೆನಪು ಮರೆಯಲಾರದಂತೆ ಬದುಕಲು
ನಾ ಅನುದಿನವು ಹವಣಿಸುತಲಿರುವೆ
ನೆನಪಲ್ಲಿ ಮನಸಲ್ಲಿ ಕನಸಲ್ಲಿ ನನ್ನ ಕಾಡುವ
ಆ ಸವಿಕ್ಷಣಗಳು ನನ್ನೊಂದಿಗೆ ಕೊನೆಯಾಗುವುದಲ್ಲ
ಎನ್ನುವ  ಕೊರಗೆ ನನ್ನನಿಂದು  ಕೊನೆಯಾಗಿಸುತಿದೆ !!

ಯೋಚಿಸು ಮನುಜ

ನಾ ಬರೆದ ಕಾದಂಬರಿಯ
ಅಂತಿಮ ಪುಟದ ಕೊನೆಯ ಅಕ್ಷರಕೆ
ಮರೆಯಾಗುವ ಕಥೆಯ ಮೇಲಿನ ಮೋಹ

ನೀ ಮುಡಿದ ಮಲ್ಲಿಗೆಯ
ಬಾಡಿದ ಪುಷ್ಪದ ಪ್ರತಿ ಎಸಳಿಗೂ ...

ನಾಳೆ ಕಸದ ಪಾಲಾಗುವ ನೋವಿನ ಬಾವ

ಪರರ ಮೆಚ್ಚಿಸಲು ಶೃಂಗಾರ
ಸೌಂದರ್ಯ ವೃದ್ದಿಸಲು ಬೆಳ್ಳಿ ಬಂಗಾರ
ಕಾಲ ಬಂದಾಗ ನಡುಗುವುದು ಈ ಮರುಳು ದೇಹ

ಮೂರು ದಿನದ ಬಾಳ್ವೆಗೆ ಬಡಿದಾಟ
ದ್ವೇಷ ಅಸೂಯೆಗಳ ಜೊತೆ ಹೊಡೆದಾಟ
ಯೋಚಿಸು ಮನುಜ ನೀ ಸದಾ ಸವೆಯುತ್ತಿರುವ ಜೀವ
ಇಂದಲ್ಲ ನಾಳೆಗೆ ನಿನಗೂ ಕೊನೆ ಬರೆದಿಹನು ನೋಡು ಆ ದೇವ !!
 
 

Thursday, August 29, 2013

ಕೃಷ್ಣ

ಕೃಷ್ಣನ ಕಂಡೆ ನಾ ಮುದ್ದು ಕೃಷ್ಣನ ಕಂಡೆ

ದೇವಕಿ  ಕಂದನ  ಕಂಡೆ
ನಂದ  ಕಿಶೋರನ  ಕಂಡೆ

॥ಕೃಷ್ಣನ ಕಂಡೆ ನಾ ಮುದ್ದು ಕೃಷ್ಣನ ಕಂಡೆ॥

ಮಂದ ಹಾಸವ ಬೀರುತ
ಪುಟ್ಟ ಹೆಜ್ಜೆಯನಿಕ್ಕುತ
ಕಳ್ಳ ನೋಟವ ಹರಿಸುತ್ತಾ
ಬೆಣ್ಣೆ ಕುಡಿಕೆಯ ಹುಡುಕುತ್ತ
ಬಂದ ಕೃಷ್ಣ ನನ್ನ ತುಂಟ ಕೃಷ್ಣ

||ಕೃಷ್ಣನ ಕಂಡೆ ನಾ ಮುದ್ದು ಕೃಷ್ಣನ ಕಂಡೆ||

ರಾಧೆಯ ಕನಸಲ್ಲಿ ಕಾಡುತ್ತ 
ಗೋಪಿಕ ಸ್ತ್ರೀಯರ ಪೀಡಿಸುತ
ಗೋವರ್ಧನ ಗಿರಿಯನೆ ತಿರುಗಿಸುವ
ಮೋಹನ ಮುರಳಿಯು ನಾದವ ಚೆಲ್ಲಿ 
ಬಂದ ಕೃಷ್ಣ ನನ್ನ ಚೆಲುವ ಕೃಷ್ಣ

||ಕೃಷ್ಣನ ಕಂಡೆ ನಾ ಮುದ್ದು ಕೃಷ್ಣನ ಕಂಡೆ||

ನಿತ್ಯ ಪವಾಡವ ತಾ ಮಾಡುತ
ದುಷ್ಟ ಪೂತನಿಯ ಕೊನೆಯಾಗಿಸುತ
ಕೆಟ್ಟ ಕಂಸನ ತೊಡೆ ಮುರಿದಿಹ
ಬಲರಾಮನ ಈ ತಮ್ಮನ ನೋಡಿರೆ
ಬಂದ ಕೃಷ್ಣ ನನ್ನ ದೇವರ ದೇವ ಕೃಷ್ಣ

||ಕೃಷ್ಣನ ಕಂಡೆ ನಾ ಮುದ್ದು ಕೃಷ್ಣನ ಕಂಡೆ||

ಕಾಯಕವ ಬದಲಿಸಿ

 ಆಳದ ಬಿತ್ತಳಿಕೆಯಲ್ಲಿ
 ಬಾಡಿದ ಬಿಲ್ಲನ್ನು
 ಮೋಡದ ಗುರಿಯ ಹಿಡಿದು
 ನೋಡದೆ ಬಿಟ್ಟರೆ
 ಕಾಡದೆ ಬಿಡುವುದೆ ಮೆಘಮಳೆ ?

 ಬಾಳಿನ ಹೊಸ್ತಿಲಲಿ
 ಸೋಲಿನ ಮಾಲೆ ಹಿಡಿದು
 ತೀರದ ಬಯಕೆ ಹೊತ್ತು
 ಕಾಯಕವ ಬದಲಿಸಿದರೆ
 ಜಯಸದೆ ಇರುವುದೇ ಜೀವಕಳೆ ?

 

Saturday, August 10, 2013

ತ್ವರಿತ ತಿಂಡಿ


ತಂಪಾದ ತಂಗಾಳಿಯ ವಾತಾವರಣ
ಉದರದಲ್ಲಿ ತಿನ್ನುವ ಆಸೆಯ ಅವತರಣ  
ತ್ವರಿತ ತಿಂಡಿಗೆ ಮನದಲ್ಲಿ ಬಯಕೆಯ ಹೂರಣ
ಮನೆಮುಂದೆ ನಿಂತಿರುವ ಅಂಗಡಿಯೇ ಇದಕೆಲ್ಲ ಕಾರಣ !

ಸಿಹಿಯ ಸ್ವಾದವನ್ನು ಅನುಭವಿಸಿ
ನೀರಿನ ರೂಪವನ್ನು ಮರೆಯಾಗಿಸಿ
ಖಾರದ ಘಾಟಿನಿಂದ ಅವತರಿಸಿ
ಪಾನಿಪುರಿ ನಾಮದಿ ಹೆಸರುವಾಸಿ !

ಪೂರಿಯ ಜೊತೆ ಖಾರದ ಸಮ್ಮಿಶ್ರಣ
ತಟ್ಟೆಯ ಮೇಲೆ ಮಸಾಲೆಯ ನರ್ತನ
ನೀರುಳ್ಳಿ ಟೊಮೇಟೊಗೂ ಆಮಂತ್ರಣ
ಅಲ್ಲಿಯೇ ಈ ಮಸಾಲಪುರಿಯ ಜನನ !

ಒಂದೇ ಎರೆಡೆ ತಿಂಡಿ ತಿನಿಸುಗಳು
ಪೇಟೆಯ ಮಂದಿಯ ನಿತ್ಯ ಖಾದ್ಯಗಳು
ಕೇಳಿಸದು ಇವರಿಗೆ ವೈದ್ಯನ ವಾದ್ಯಗಳು
ಸಂಜೆಯಾಗುತ್ತಲೇ ಕಾಡುವ ಈ ಸಮಸ್ಯೆಗಳು  !!

!! ನೀವೇನಂತೀರಿ ?

Friday, August 9, 2013

ಪ್ರವಾಹ

ಉತ್ತರ ಭಾರತದಲ್ಲಿ ಬಂದಿದೆ ಭಾರಿ ಪ್ರವಾಹ ಕೊಚ್ಚಿ ಹೋಗಿದೆ ಅದೆಷ್ಟೋ ಅಮಾಯಕರ ಗ್ರಹ ಇಳೆಗೆ ಸುರಿಯುತ್ತಿದೆ ಧಾರಾಕಾರ ಮಹಾಮಳೆ ಭೂಮಿ ತಾಯಿ ಸಂರಕ್ಷಿಸುವಳೇ ತನ್ನ ಜೀವಕಳೆ ? ಮೇಘಗಳ ಸಂಘರ್ಷಕ್ಕೆ ಬೆಚ್ಚಿದೆ ನೋಡು ಮುಗಿಲು ಆಕಾಶರಾಜ ಸೂರ್ಯನಿಗೂ ಬಿಡಲಿಲ್ಲ ಇನ್ನಿಲ್ಲದ ದಿಗಿಲು ಹೆದರಿ ಕಣ್ಮರೆಯಾಗುತ್ತಿದ್ದಾನೆ ಅವನು ದಿನದ ಹಗಲು ಮತ್ತೆ ಮರುಕಳಿಸದಿರಲಿ ಅವನಿಗೆ ಇಂತಹ ಸವಾಲು !!

ನೀರು

ಸುರಿಯುವ ಮಳೆಯ ನೀರು 
ನನ್ನ ಹೆಂಡತಿಯ ಕಣ್ಣಲ್ಲಿ ಸೇರು 
ಕಷ್ಟ ಕಾಲದಲ್ಲಿ ಯೋಚಿಸದೆ ಹಾರು
ನಷ್ಟವಾಗದೆ ಹೋದರೆ ನನ್ನಾಕೆ ಪಾರು !

ಪ್ರೀತಿಯಿಂದ ಕೇಳಿದ್ರೆ ಮಾತು
ಸಹನೆ ಮೀರಿ ವರ್ತಿಸಿದರೆ ಮುಗೀತು
ಅದೆಷ್ಟೇ ಕಣ್ಣೀರಿಗೂ ಬೆದರಲ್ಲ ಆ ಹೊತ್ತು
ಸೋಲಿಸಬಹುದು ಬರಿ ನಿನ್ನ ಆ ಸಿಹಿ ಮುತ್ತು !!

Tuesday, May 28, 2013

ತ್ಯಾಗಿ

ನಿನ್ನ ಹಾಡ ದಾಟಿಯಲ್ಲಿ
ನಾನು ರಾಗವಾದೆನು
ನಿನ್ನ ಬಾಳ ಬಂಡಿಯಲ್ಲಿ
ನಾನು ಗಾಲಿಯಾದೆನು !!

ನಿನ್ನ ಮಧುರ ಸ್ವರಗಳಲಿ  
ನಾನು ತಂತಿಯಾದೆನು
ನಿನ್ನ ಕಂಠ ಮಾಧುರ್ಯಕೆ
ನಾನು ಬಂದಿಯಾದೆನು

ನಿನ್ನ ಉಸಿರು ನನ್ನದೆಂದು
ನನ್ನ ಮನಸು ಮಿಡಿದಿದೆ 
ನಿನ್ನ ಹೆಸರು ಕೇಳಲೆಂದು
ನನ್ನ ಕಿವಿಯು ತೆರೆದಿದೆ !!

ನೀನೆ ಇರದ ಬದುಕಿಗಿನ್ನು
ಅರ್ಥವೆಲ್ಲಿ ಹುಡುಕಲಿ
ನಿನ್ನ ಮರೆತು ಬಾಳಲಾರದೆ
ಸರ್ವವನ್ನು ತ್ಯಜಿಸುವೆ !!

Saturday, May 25, 2013

ಯಾರರಿಯರು ಸ್ವಾಮೀ

ಕಾವೇರಿ ನಾಮಧೇಯ
ಬೆಂಗಳೂರಿಗರ ಜೀವಜಲ
ಕಾರ್ಪೋರೇಶನ್ ಕೊಳ
ಯಾರರಿಯರು ಸ್ವಾಮೀ ಇದರ ಮೂಲ ?

ಉದ್ಯಾನ ನಗರಿಯ ಗರಿ
ಕಸದ ತೊಟ್ಟಿ ವಿಲೇವಾರಿ ಪರಿ
ಸರ್ವನಾಶವಾಗುತಿದೆ ಸ್ವಾಸ್ತ್ಯದ ಸಿರಿ
ಇನ್ನೆಲ್ಲಿದೆ ಸ್ವಾಮೀ ಇದಕೆ ಪರಿಹಾರದ ಗುರಿ ?

ತಲೆಯತ್ತುತ್ತಿದೆ  ಬಹುಮಹಡಿ
ಬೆಲೆಯೇರಿದೆ ಪ್ರತಿ ಮನೆಕೊಠಡಿ
ಐಟಿ ಬಿಟಿ ವಿನಃ ಬದುಕು ಬಲು ದುಸ್ತರ
ಹೇಗಿರುವುದು ಸ್ವಾಮೀ ಸಾಮಾನ್ಯರ ದಿನಚರಿ ?

Tuesday, May 14, 2013

ಮುಗಿಯದು



ಕಣ್ಣಿನ ಕುಡಿನೋಟ
ಹೆಣ್ಣಿನ ಮೈಮಾಟ
ತಣ್ಣನೆ ಉಸಿರಾಟ !!

ಪ್ರೀತಿಯ ಪವಾಡ
ಮೋಸದ ಕೈವಾಡ
ಆಸೆಯ ಮುಖವಾಡ !!

ನಲ್ಲೆಯ ಸಹವಾಸ
ಸುಮ್ಮನೆ ಉಪವಾಸ
ಮುಗಿಯದು ಮನಸ್ತಾಪ !!

ಚಿಗುರೊಡೆದ ಬಾವನೆ
ಸುಂದರವಾದ ಕಲ್ಪನೆ
ಮರೆಯಲಾರೆನು ನಿನ್ನನೆ !!

Thursday, May 9, 2013

ಭ್ರಷ್ಟ



ಗೆದ್ದೇ ಗೆಲ್ಲುವೆಯಂಬ ವಿಶ್ವಾಸ
ಮಣ್ಣಾಗಿ ಹೋಗಿತಲ್ಲಾ !
ಪಕ್ಷ ಕಟ್ಟುವ ಘೋಷಣೆ ಮಾಡಿದ್ದು
ತಪ್ಪಾಗಿ ಹೋಯಿತಲ್ಲಾ !!

ಗೆದ್ದಾಗ ಗದ್ದುಗೆ ಏರಿದ್ದು ಏಕಾಗಿ
ಗಳಿಸಿದ್ದು ತಮಗಾಗಿ !
ಮನೆ ಮಂದಿಯ ಸಿರಿವಂತಿಕೆಗಾಗಿ
ಆಸ್ತಿಪಾಸ್ತಿಗಳ ವೃದ್ದಿಗಾಗಿ !!

ಮಾಡಿದ್ದು ಅನಾಚಾರ ಹೇಳಲಸಾದ್ಯ
ರಾಜಕಾರಣ ಹಳಿಸಿತು !
ಮರೆಯಲಸಾದ್ಯ ರಾಜ್ಯಜನತೆ ಇದನು  
ವಿನಾಕಾರಣದ ಕಚ್ಚಾಟವ !!

ಹೊಸ ಪಡೆಯ ಕಟ್ಟಿದ್ದು ತಪ್ಪಾಯಿತು
ಕಾಂಚಾಣ ಬರಿದಾಯಿತು !
ಭ್ರಷ್ಟರ ಗುಂಪಿನ ನಾಯಕನಿಗೆನಾಯಿತು
ಸನ್ಯಾಸ ಬಂದು ಸಮೀಪಿಸಿತು !!

Tuesday, May 7, 2013

ಮಾಯಾ ಜಿಂಕೆಯೇ




ನನ್ನ ಮನದ ಬಯಕೆ
ತೇಲಿ ಬಂದು ಅದಾಗಿದೆ ಅಮೃತ ಬಿಂದು

ನನ್ನ ನಿರ್ಮಲ ಹೃದಯದಿ
ಆಸೆಯೊಂದು ಚಿಗುರಿ ಹಾಡಿ ನಲಿಯುತಲಿದೆ

ನನ್ನ ಪ್ರತಿ ಕ್ಷಣದ ಬಿನ್ನಹ
ತಂಗಾಳಿಯ ಹಿತವದು ಮೌನ ಮಾತಾಗಿಸಿದೆ

ನನ್ನ ತನು ಮನದ ಕೋರಿಕೆ
ನಿನ್ನದೊಂದು ಹೂ ನಗುವನ್ನು ಬಯಸುತಲಿದೆ

ಪ್ರೀತಿಗೆ ನೀ ಬರುವೆ,
ಕೋರಿಕೆಗೆ ನೀ ನಗುವೆ,
ಆಸೆಯ ನೀ ತರುವೆ,
ಸದಾ ನನ್ನ ಕಾಡಿಸುವೆ !! ಮಾಯಾ ಜಿಂಕೆಯೇ !!


Friday, April 19, 2013

ಧನ

ಸಂಪಾದಿಸಲು ಬಲು ನಿದಾನ
ವ್ಯಯವಾಗುವುದು ನೀ ಧನ
ಕೊಡದಿದ್ದರೆ ಎಂದೂ ನೀ ದಾನ
ಬಹುಬೇಗ ಆಗುವುದು ನಿಧನ

Tuesday, April 9, 2013

ಉಗಾದಿ

ಯುಗಾದಿ ಅನ್ನಲೋ ಉಗಾದಿ ಎನ್ನಲೋ
ಹೊಸ ಸಂವತ್ಸರದ ಬುನಾದಿ ಎಂತಲೋ  !!

ಮನೆ ಮಂದಿಗೆಲ್ಲ ಬೇವು ಬೆಲ್ಲ
ಬೇವಿನ ನೋವು ಅಲ್ಲಿ ಕ್ಷಣಕಾಲ
ಬೆಲ್ಲದ ನಲಿವು ಇರಲಿ ಚಿರಕಾಲ
ಹಾರೈಸುವುದು ಈ ಪರ್ವಕಾಲ !!

ಕಳೆದ ನಂದನದ ಶ್ರೇಯಸ್ಸು
ಬರುವ ವಿಜಯದಲ್ಲಿ ಹುಮ್ಮಸ್ಸು
ವೃದ್ಧಿಸಲಿ ನಿಮ್ಮೆಲ್ಲರ ಆಯುಸ್ಸು
ಸರ್ವರಿಗೊ ಉಗಾದಿಯ 'ವಿಶ್'ಸ್ಸು !!!

ಯುಗಾದಿ ಅನ್ನಲೋ ಉಗಾದಿ ಎನ್ನಲೋ
ಹೊಸ ಸಂವತ್ಸರದ ಬುನಾದಿ ಎಂತಲೋ  !!

Wednesday, March 27, 2013

ಜನುಮದಿನ


 
 
 
ಇನಿಯನ ಜೀವನದ ಪ್ರತಿ ಕ್ಷಣದಲಿ
ಸುಖದಲ್ಲಾಗಲಿ ದುಃಖದಲ್ಲಾಗಲಿ
ನಗುವಲ್ಲಾಗಲಿ ಅಳುವಲ್ಲಾಗಲಿ
ಪಾಲು ಪಡೆಯುವವಳು ನೀನಲ್ಲವೇ !!!

ಪತಿಯ ಬದುಕಿನ ಪ್ರತಿ ಹೆಜ್ಜೆಯಲಿ
ಜೊತೆಯಾಗಿ ಪ್ರಿಯ ಸಖಿಯಾಗಿ
ಹೆಗಲಾಗಿ ಬಾಳಿನ ಗುರಿಯಾಗಿ
ಕಾಲು ಇಟ್ಟವಳು ನೀನೆಯಲ್ಲವೇ !!!

ಕಷ್ಟಗಳು ಹನಿಯಾಗಿ ನಿನ್ನ ಕಣ್ಣಿನಲಿ
ಕಾಣಿಸದಾದವು ನನ್ನ ಮೆಚ್ಚಿಸಲು
ಹೇಳಲಾರದನು ಮರೆಯಾಗಿಸಲು
ಮೆತ್ತಗೆ ನಗುವವಳು ನೀನಲ್ಲವೇ !!!

ಸಂಸಾರದ ಜವಾಬ್ದಾರಿಯ ಹೊತ್ತು
ಸಂಬಂಧದ ಬೆಸುಗೆಯನು ಕೊಟ್ಟು
ಸಂತೋಷವ ಉಣಬಡಿಸುವ ನಿನಗೆ
ಮರಳಿ ಬರುತಲಿರಲಿ ಈ "ಜನುಮದಿನ" !!!

Friday, March 22, 2013

ಮತದಾನ

ಮತ್ತೇ ಬಂದಿದೆ ಸಾರ್ವತ್ರಿಕ ಮತದಾನ
ಪುಂಡ ಪುಕಾರಿಗಳಿಗದುವೆ ಬಲಪ್ರದರ್ಶನ
ಜಿದ್ದಾ ಜಿದ್ದಿನ ಹೋರಾಟಕ್ಕಾಗಿ ಕ್ಷಣಗಣನ !!!

ಪಕ್ಷದಿಂದ ಪಕ್ಷಕ್ಕೆ ಜಿಗಿವುದು ಸರ್ವೇಸಾಮಾನ್ಯ
ಕರಡು ನೀತಿ ಸಂಹಿತೆ ಹೇಳಲು ಮಾತ್ರ ಸೀಮಿತ
ಅಶ್ವ ಕರೀದಿಗೆ ಬೇಕಿಲ್ಲ ಕಿಂಚಿತ್ತೂ ಮೌಲ್ಯ ಮಾಪನ !!!

ಅಪ್ಪನಿಂದ ಮಗನಿಗೆ ಸಿಗುವುದು ಪಕ್ಷದ ಹಸ್ತಾಂತರ 
ಕಣ್ಣುಮುಚ್ಚಿ ಬೆಂಬಲಿಸುವುದು ಮೂಡ ಕಾರ್ಯಕರ್ತಾರ
ಇನ್ನೆಲ್ಲಿ ಸಾಗುವುದು ಇಂತಹ ನಮ್ಮ ರಾಜಕೀಯ ಭವಿಷ್ಯ !!!

ಜಾತಿ ಜಾತಿಗಳಿಗೊಂದು ಪಕ್ಷ ಇದನ್ನ ಕೇಳುವವರಾರು
ಹೆಂಡ ಸರಾಯಿ ಕೊಟ್ಟರೆ ಸಾಕು ಮರೆಯಲಾರರಿವರು ?
ಮುಂದೆ ಏಷ್ಟೇ ದುಡ್ಡು ಕೊಳ್ಳೆಹೊಡೆದರು ಕೊರಗುವವರಾರು  !!!

ಮಂತ್ರಿಗಿರಿಗಾಗಿ ನಡೆಯುವುದು ಒಳಗೊಳಗೆ ಕರಾಮತ್ತು
ಮಠಾಧಿಪತಿಗಳು ಸಹ ಹಿಡಿಯುವರು ನೀಚರ ವಕಾಲತ್ತು
ದುಡ್ಡು ಜಾಸ್ತಿ ಇದ್ದರೆ ಸಾಕು ಒಲಿಯುವುದು ಅಪ್ಪನಮನೆಯ ಸ್ವತ್ತು !!!


ಮೈಸೂರ

ನಿತ್ಯ ಬದುಕಿನ ಜಂಜಾಟದಲಿ
ವಾರಾಂತ್ಯದ ಈ ಬಿಡುವಿನಲಿ
ಚಾಮುಂಡಿಯ  ಸಾನಿಧ್ಯದಲಿ
ಮೈಸೂರಿನ ಆಕರ್ಷಣೆಯಲಿ
ಅರಮನೆಯ ರಾಜಾಂಗಣದಲಿ
ಮೈಮರೆತಿದ್ದೆ ನಾ ಆನಂದದಲಿ!!

ನಿಮಿಶಾಂಭೆಯ ದರ್ಶನವನ್ನು
ರಂಗನಾಥಸ್ವಾಮಿ ಭಂಗಿಯನ್ನು
ನಂದಿಯ ವಿಹಂಗಮ ನೋಟವನ್ನು
ಶ್ರೀಕಂಠೇಶ್ವರನ ಆಶೀರ್ವಾದವನ್ನು
ಕಾವೇರಿ ನೀರಾವರಿ ಭೂಮಿಯನ್ನು 
ಸವಿಯುತ್ತಿದ್ದೆ ನಾ ಸಾಂಸ್ಕೃತಿಕ ನಗರವನ್ನು !!



Wednesday, February 20, 2013

ವರ್ಣಿಸಲು



ನಾನಿಂದು  ಕಂಡ ಸುಖ
ಸ್ವರ್ಗ ಸುಖವೆಂದು ಬಾವಿಸಿರಲು
ನನ್ನಾಕೆ ಬಂದ್ ಅರುಹಿದಳದುವೆ ಕ್ಷಣಿಕವೆಂದು !

ನಾನಿಂದು ಕೊಂಡ ಘಟ
ತುಂಬಾ ಸುಂದರವೆಂದು ಚಿತ್ರಿಸಲು
ನನ್ನೆದುರೇ ಪುಡಿಯಾಗಿದದುವೆ ಮೋಸವೆಂದು !

ನಾನಿಂದು ಉಂಡ ಊಟ
ಭೂರಿ ಭೋಜನವೆಂದು ವರ್ಣಿಸಲು
ನನ್ ಉದರ ಕೂಗಿಹುದದುವೆ ಅಜೀರ್ಣವೆಂದು !

ನಾನಿನ್ನ ಗಂಡ ಅಂದು
ಹಿಡಿಯ ಹೋದಾಗ ನೆನಪಿಸಿದಳು
ತಿಂಗಳಿಗೆ ಮೂರುದಿನವದುವೆ ಮಡಿಶಿಕ್ಷೆಯೆಂದು !!

Thursday, February 14, 2013

ಶ್ರೀಗಂಧ

ಶ್ರೀಗಂಧದ ಮರದ ತೊಗಟೆಯ
ಸುಗಂಧದ ಬಿಂದುವೇ
ಒಣ ರೆಂಬೆಗಳಲ್ಲೂ ಸುಮಧುರ
ಮಕರಂದವ ನೀ ಚೆಲ್ಲುವೆ !!

ಗಣಪನ ಹಣೆಯಲಿ ಕಂಗೊಳಿಸಿ
ಭಕ್ತನಿಗೆ ಸಲ್ಲುವೆ
ಅಂದದ ಚೆಲುವೆಯ ಮೊಗದಲಿ
ಮಂದಹಾಸ ನೀ ತರುವೆ !!

ಕಲ್ಲಲ್ಲಿ ತಿಕ್ಕಿ ತೇಯ್ದರು ಬೇಸರಿಸದೆ
ಪರಿಮಳ ಪಸರಿಸುವೆ
ನಿನ್ನ ಮರ್ಧಿಸುವ ಕಳ್ಳಕಾಕರಿಗೂ
ಸುವಾಸನೆಯ ಗಯ್ಯುವೆ ನೀ !!

ಅದೆಂತಹಾ ಕರುಣಾಮಯೀ ನೀನು
ನಶಿಸಿ ರಮಿಸುವೆ
ಕೊನೆ ತನಕ ಪರರ ಅತ್ಯಮೂಲ್ಯ
ಸ್ವತ್ತಾಗಿ ವಿಜ್ರಂಭಿಸುವೆ ನೀ !!


Tuesday, February 12, 2013

ಅನುಭವಿ



ಪದಗಳಲಿ ವರ್ಣಿಸಲಾರದ ಪರಮಾತ್ಮ
ಪಿತೃ ಪಾದಗಳಲಿ ಸಿಗುವ  ಪುಣ್ಯದಂತೆ
ಮೋಕ್ಷ ಬೇಕೆಂದರೆ ನೀ ನಡೆ ಭಕ್ತಿ ಮಾರ್ಗ
ನರಕದಲಿ ಸಿಗುವ ಪರಮ ಸ್ವರ್ಗದಂತೆ !!

ಒಮ್ಮೊಮ್ಮೆ ಬರುವ ಹಬ್ಬ ಹರಿದಿನಗಳು
ಮತ್ತೊಮ್ಮೆ ಸಿಗಲಾರದ ಸಿಹಿ ಭಕ್ಷ್ಯಗಳಂತೆ
ಉದರದಿ ಉದ್ಬವಿಸಿದ ಆತ್ಮತೃಪ್ತಿಯದುವೆ
ದೀರ್ಘ ಕಾಲದಿ ಅನುಭವಿಸಲಾರದಂತೆ !!

ಇರುವ ನಮ್ಮ ಸುತ್ತ ಪರಮ ಸತ್ಯಮೂರ್ತಿ
ಹರಿವ ನೀರಿನಲಿ ನಮ್ಮ ಜೀವ ಉಸಿರಿನಲಿ
ನುಡಿವ ಮಾತಿನಲಿ ನಡೆವ ಸನ್ಮಾರ್ಗದಲಿ
ಪರಿಸರದಿ ಕಾಣುವ ಅಗೋಚರ ಪಕ್ಷಿಯಂತೆ !!

ಕೊಡು ನೀ ದಾನಧರ್ಮವನು ಕೈಲಾದಷ್ಟು
ಸಲುಹುವನು ಪರಮಾತ್ಮ ಪರಲೋಕದಲಿ
ಇಷ್ಟವಾದುದನು ಕೊಟ್ಟು ಕಷ್ಟಕಾಲದಲಾಗು
ಸ್ಪಷ್ಟವಾಗಿ ಲಭಿಸುವುದು ನಿನಗೆ ಪರಮಹಂಸ !!

Monday, February 11, 2013

ಮನದಾಕೆ




ಮೇಘ ಮಂದಾರ
ಬಾಳ ಬಂಗಾರ   
ಒಲವಿನ ಸಿಂಗಾರ
ನಿನ್ನಯ ವೈಯ್ಯಾರ !!

ವಜ್ರ ಕಾಟಿಣ್ಯ
ಶುಭ್ರ ಸೌಜನ್ಯ
ಸರ್ವೇ ಸಾಮಾನ್ಯ
ನಿನ್ನಯ ತಾರುಣ್ಯ !!

ಪ್ರೀತಿಯ ತೋರಿಕೆ
ಬಯಕೆಯ ಹಾರೈಕೆ
ಹೇಳುವೆನು ಕೋರಿಕೆ
ಕೇಳು ನನ್ನ ಮನದಾಕೆ !! 

ನಿರುದ್ಯೋಗ


ಅವಕಾಶ ಸಿಗುವುದೆಂಬ ಆಸೆಯಲಿ
ಸದಾ ಈಡೇರಬೇಕೆಂಬ ಬಯಕೆಗಳು
ನೂರಾರು ಸುಳಿದಾಡುವುದು ಬೆನ್ನ ಹಿಂದೆ !!

ಮನಸ್ಸಿಗೆ ತೋಚಿದ ಉದ್ಯೋಗವು
ವಯಸ್ಸು ಮೀರಿದರೂ ಕೈ ಸಿಗಲಾಗದು
ಹತ್ತಾರು ಜಾತಿಪಂಗಡಗಳ ಮೀಸಲಾತಿಗಾಗಿ !!

ಗಗನಕ್ಕೇರುವ ಪ್ರತಿ ವಸ್ತುವಿನ ಮೌಲ್ಯ
ಸಂಬಳವನ್ನು ನೊಡಲಾಗದ ದೌರ್ಭಾಗ್ಯ
ದಿನದಿನವೂ ಪರಾವಲಂಬನೆಯ ಹಿಡಿಶಾಪ !!

ವಿಧಿಯ ಆಟವದು ಬಗೆಹರಿಸಲಾಗದು
ಅಂಜಿಕೆಯ ಜೀವನವ ತಡೆಹಿಡಿಯಲಾಗದು
ಕ್ಷಣಕ್ಷಣದ ಸಾವನ್ನು ಅಕ್ಷರದಿ ವರ್ಣಿಸಲೂ ಆಗದ್ದು !!

Tuesday, February 5, 2013

ಒಲವು



ಉತ್ತರ ಧ್ರುವದಿಂದ ಹರಿಯುವ
ಗಂಗೆ ನಾಚಿದಂತಹ ಸೌಂದರ್ಯ
ಬಾನಲ್ಲಿ ಮಿನುಗುವ ಅನಂತ ನಕ್ಷತ್ರ
ಜ್ಯೋತಿಯು ನಿನಗೆ ಮಾತ್ರ ಸೀಮಿತ !! 

ಹಿಮಾಲಯ ಪರ್ವತ ಶ್ರೇಣಿಯ
ಮರೆಮಾಡುವ ನಿನ್ನಯ ಕೇಶವೇಣಿ 
ಮರೆಯಲಾಗದು ನಿನ್ನ ಅಮೃತವಾಣಿ
ಸ್ತಬ್ದನಾದೆನು ನಾನೊಬ್ಬ ಮೂಕಪ್ರಾಣಿ !!

ನಿನಗೆ ಕರೆಯಲಾರದಷ್ಟು ಹೆಸರು
ನನಗೆ ನಿನ್ನಲ್ಲೇ ಅಡಗಿದೆ ಜೀವಉಸಿರು
ನಿನ್ನದೋ ಬಲು ಪ್ರಶಾಂತತೆಯ ನಿಲುವು
ಅದಕೆಯೇನೋ ನಿನ್ನಲ್ಲರಳಿದೆ ನನ್ನ ಒಲವು !!

Tuesday, January 29, 2013

ಅಂತಿಮ ನುಡಿ



ಮನದಾಳದ ಗುಹೆಯಲ್ಲಿ ಹೇಳಲಾರದ ನೋವೊಂದು
ಕಡಲಾಚಿನ ತೀರದಲಿ ಭೋರ್ಗರೆಯುವ ರಣಹದ್ದಿನಂತೆ
ಘೋರ ಗುಡುಗು ಮಿಂಚುಗಳ ಸೋಲಿಸುವ ತವಕದಲಿ
ಮುನ್ನುಗ್ಗಿ ಬರುತಲಿದೆ ತನ್ನ ಇಂದೇ ಕೊನೆಯಾಗಿಸಲೆಂದು !!

ರಮ್ಯ ಸೌಂದರ್ಯವ ಗುರುತಿಸಿ ನಗುವ ನನ್ನೀ ನಯನಗಳು
ರಮಣನ ಆತ್ಮದ ಕಂಪನಕ್ಕೆ ಬೆರಗಾಗಿ ಕಂಬನಿ ಸುರಿಸಿಹುದು
ಜಗವ ಬೆಳಗಿಸುವ ಸೂರ್ಯ ದೇವನಿಗೆ ಕತ್ತಲಾವರಿಸಿದಂತೆ
ಮುಸ್ಸಂಜೆ ಗಾಳಿಯಲಿ ಮೌನ ತನ್ನ ತಾಂಡವ ನರ್ತನದಲಿದೆ !!

ಕರ್ಜೂರದ ಸವಿಯುಂಡ ದೇಹವಿದು ಜರ್ಜರಿದು ನಡುಗುತಿದೆ
ಕಷ್ಟ ಸುಖಗಳನು ದಾಟಿ ಬಂದ ಕಾಲುಗಳಿಂದು ಸೊಲುತಲಿದೆ
ಚೈತನ್ಯದ ಗೂಡಾದ ಚಿಂತನೆಗಳು ಚೂರು ಚೂರಾದಂತಿದೆ
ಜೀವವಾಯು ತನ್ನ ವೇಗವ ತಗ್ಗಿಸಿದಂತೆ ಭಾಸವಾಗುತಲಿದೆ !!

ಇದೇನು ದಿಡೀರನೆ ಸಾವು ಸಮೀಪಿಸುವ ಮುನ್ಸೂಚನೆಯೋ
ಪಂಚಬೂತಗಳೊಂದಿಗೆ ದೇಹ ಲೀನವಾಗುವ ಚಲನವಲನವೋ
ದೈಹಿಕ ಜೀವನ ತಿಲಾಂಜಲಿಯ ಸ್ವಕಪೋಲಕಲ್ಪಿತ ಆಲೋಚನೆಯೋ
ಮುಂದಿನದನ್ನು ನನಗೆ ತಿಳಿಸದೇ ದಕ್ಷಿಣಾಧಿಪತಿಯ ಆಗಮನವೋ ?


Sunday, January 27, 2013

ದೇವರು



ನಮ್ಮ ನಂಬಿಕೆಗಳು ಅನಂತ 
ಮೂಡವಾಗಿದ್ದರೆ ಅದೊಂದು ದುರಂತ !!

ಅವನ ಪವಾಡಗಳು ಹಲವು 
ನಿಗೂಡವಾಗಿದ್ದರೆ ಬಲವಾಗುವುದು ನಿಲುವು !!

ಅವನಲ್ಲಿ ಒಲಿದರೆ ಮನಸ್ಸು
ಅಧಿಕವಾಗುವುದು ಭಕ್ತನೊಬ್ಬನ ಆಯುಸ್ಸು !! 

ಅವನಂತೆ ನಮ್ಮೆಲ್ಲರ 'ದೇವ'ನು
ಹರಸುವನು ಒಂದರಮೇಲೊಂದು ವರಗಳನು !!

Thursday, January 24, 2013

ಪ್ರಳಯ



ಪ್ರಳಯ ಎಂದರೆ ಇದೇ ಅಲ್ಲವೇ ಸ್ವಾಮೀ
ದಿನ ದಿನದ ಸಾವು
ಎಂದೂ ನಿಲ್ಲದ ನಿರಂತರ ಗೋಳು !!

ಕಾಶ್ಮೀರದ ಕಣಿವೆಯಲ್ಲಿ ಸಲ್ಲದ ಉಗ್ರರ ಉಪಟಳ
ಕಣ್ಣ ಮುಂದೆ ದಹನವಾಗುತಿದೆ ಯೋಧನ ಬಿಸಿದೇಹ
ಕಣ್ಣು ಮುಚ್ಚಿ ಕೂರುತಿದೆ ಸ್ವಾತಂತ್ರ್ಯ ಪಡೆದ ಸಶಕ್ತ ಭಾರತ ದೇಶ !! ಪ !!

ರಾಜ್ಯ ರಾಜ್ಯಗಳ ಮಧ್ಯೆ ಗಡಿ ಭೂಮಿಗಾಗಿ ಹಾರಾಟ
ನಿರಂತರ ಸಾಗುತಿದೆ ಕಾವೇರಿಯ ಕಾನೂನು ಕಾದಾಟ
ನಿತ್ಯ ನೀರಿಗಾಗಿ ಪರದಾಡುತಿದೆ ಬೆಂಗಳೂರಿಗನ ಜೀವನದ ಪುಟ !! ಪ !!

ಬೇಸಿಗೆ ಬಂತೆಂದರೆ ಬರಿದಾಗುವುದು ನಮ್ಮ ಆಣೆಕಟ್ಟು
ಮಳೆಗಾಲ ಬಂದರು ಬರಲಾಗದು ಹೊಸ ಮಳೆಯ ಹುಟ್ಟು
ಸತ್ಯ, ಅಂದು ನಿಂತೇ ಹೋಗುವುದು ಯಾಂತ್ರಿಕನ ಜೀವನದ ಗುಟ್ಟು !! ಪ !!

ಬೇಕೆ ಸ್ವಾಮೀ ಇತನ್ಮಧ್ಯೆ ಜಾತಿ ಮತಗಳಿಗಾಗಿ ಕಾದಾಟ
ರಾಜಕೀಯ, ಅಧಿಕಾರ, ಭಾಷೆ, ಪಂಥಗಳಿಗಾಗಿ ಹೊಡೆದಾಟ
ಎಂದೋ ನಿರ್ಧರಿಸಿಹನು ಅದಾಗಲೇ ವಿಧಿ ತಾನಾಡುವ ಕೋನೆಯ ಆಟ !!

ಪ್ರಳಯ ಎಂದರೆ ಇದೇ ಅಲ್ಲವೇ ಸ್ವಾಮೀ
ದಿನ ದಿನದ ಸಾವು
ಎಂದೂ ನಿಲ್ಲದ ನಿರಂತರ ಗೋಳು !!


Sunday, January 20, 2013

ಸೂರ್ಯ





ಸೂರ್ಯ ಕಾಂತಿಯ ರಮ್ಯ ಕಾಶಿ,
ಹೊಳೆಯುತಲಿದೆ ವನ ಸಸ್ಯ ರಾಶಿ,
ಚೈತನ್ಯದ ಝೇಂಕಾರಮಯ ಮೂರ್ತಿ
ಅಜರಾಮರವು ನಮ್ಮೀ ಬಾಸ್ಕರನ ಕೀರ್ತಿ !!

ಜಗವ ಬೆಳಗಿಪ ಸೂರ್ಯನಿಗೂ,
ಇರುಳ ಅರಸನಲ್ಲೇಕೋ ಮುನಿಸು,
ಬಿದಿಗೆ ಚಂದಿರನ ಸೌಂದರ್ಯಕೆ,
ರವಿಗೂ ತಾಳಲಾಗದ ಅಸೂಯೆ !!

ಮೂಡಣದ ದೊರೆಯ ಮನಸಿರಿಯೇ
ಅಮಾವಾಸ್ಯೆಗೆ ಕರಗುವುದು ನೀ ಸರಿಯೇ
ಬಾನ ಅಂಗಳದ ಈ ಮಧುರ ಸ್ನೇಹಕ್ಕೆ 
ಪೂರ್ಣಿಮೆಯು ಮತ್ತೆ ಮತ್ತೆ ಬರಲಾರದೇ ?