Tuesday, December 31, 2013

ಸಂಸಾರಿಯ ಪರಿತಾಪ


ಅರಗಿಣಿ ನಿನ್ನಯ ಮೋಹಕ ನೋಟ
ಹಿಡಿದಿಟ್ಟಿತು ನನ್ನಯ ದೃಷ್ಟಿಯ ಓಟ
ಶೃಂಗಾರದ ಒಡತಿಯ ಆ ಮೈಮಾಟ
ಮರೆತೇ ನಾನಲ್ಲಿ ಬ್ರಹ್ಮಚರ್ಯದ ಪಾಠ  !!

ನೋಡಿದೆ ನಿನ್ನ ವೈಯಾರದ ನಡಿಗೆ
ಓಡಿತು ಮನಸದು ನಿನ್ನಯ ಬಳಿಗೆ
ಬಯಸಿತು ನಿನ್ನನು ಕ್ಷಣಗಳ ಒಳಗೆ
ಮರೆಯೆನು ಅದುವೇ ಅಮೃತ ಘಳಿಗೆ  !!

ನೆನೆಯುವೆ ನಿನ್ನ ಮುಗ್ದ ನಗುವನು
ತಪ್ಪಿಸಿರಲಾರದ ಕಣ್ ಸೆಳೆತವನು
ಬಯಸಿದೆ ಕದ್ದು ನೋಡಲು ನಿನ್ನನು
ಮೆಚ್ಚಿದ ಮನಕೆ ಅಲ್ಲಿ ತಂಪನೀಯುವೆನು !!


--ಶ್ರೀಧರ ಐತಾಳ ದೇವಳಿ 

 

No comments:

Post a Comment