Friday, November 29, 2013

ಮಾನಿನಿ

ಮನದನಿಯನ ಮನಸಿಗೆ ಸವಿಯಾದ
ಮುದ ನೀಡುವಳೇ ಮಾನಿನಿಯು ?

ಇನಿಯನ ಈರ್ಷೆಯ ಅರಿತು
ಕ್ಷಣದಲಿ ಮನವನೆ ಬೆರೆತು
ಸನಿಹದಿ ನಿಂತು ಕಲಹವ ಮರೆತು
ಸರಸದಿ ಪ್ರೀತಿಯ ಮಳೆಗೈಯುವಳು ।।

ನೂರಾರು ಬಯಕೆಯ ಹೊತ್ತು
ಮನಸಾರೆ ಕೆಲಸವ ತೆತ್ತು
ಮನೆಮಂದಿಯ ಪ್ರೀತಿಯ ವಸ್ತು 
ಮನದೊಡೆಯನಿಗೆ ಸ್ವಂತದ ಸ್ವತ್ತು !!

ತನ್ನೆಯ ತಾಯಿತಂದೆಯ ತೊರೆದು
ನಾಳೆಯ ಬದುಕನು ನೆನೆದು 
ಸರ್ವರ ಪ್ರೀತಿಗೆ ಬಾಜನಳು, ಈಕೆ
ತವರೂರಿನ ಕೀರ್ತಿಯ ಬೆಳಗುವವಳು !!

ಶ್ರೀಧರ ಐತಾಳ ದೇವಳಿ 

Wednesday, November 13, 2013

ಕನ್ನಡ

ಕನ್ನಡವೇ ನೀನೊಂದು ರಾಜ್ಯವಾದರೆ,
ನಾನಲ್ಲಿ ಸೇವಕ
ಕನ್ನಡವೇ ನೀನೊಂದು ನದಿಯಾದರೆ,
ನಾನಲ್ಲಿ ನಾವಿಕ

ಕನ್ನಡವೇ ನೀನೊಂದು ಉಸಿರಾದರೆ,
ನಾನಲ್ಲಿ ನಾಸಿಕ
ಕನ್ನಡವೇ ನೀನೊಂದು ಬಾಷೆಯಾದರೆ,
ನಾನದರ ಉಪಾಸಕ

ಕನ್ನಡವೇ ನೀನೊಂದು ಪದವಾದರೆ,
ನಾನಲ್ಲಿ ಅಕ್ಷರವು
ಕನ್ನಡವೇ ನೀನೊಂದು ತಾಯಾದರೆ,
ನಾನಿನ್ನ ಕಂದನು

ನೂರಾರು ಜನ್ಮಕ್ಕೂ ಬೇಡುವೆನು
ನಿನ್ನ ಮಡಿಲ ಸೇರಲು
ಮನಸಾರೆ ಹಾಡುವೆನು ತಾಯೆ
ನಿನ್ನ ನಾ ಅರಾದಿಸಲು  !!