Tuesday, May 28, 2013

ತ್ಯಾಗಿ

ನಿನ್ನ ಹಾಡ ದಾಟಿಯಲ್ಲಿ
ನಾನು ರಾಗವಾದೆನು
ನಿನ್ನ ಬಾಳ ಬಂಡಿಯಲ್ಲಿ
ನಾನು ಗಾಲಿಯಾದೆನು !!

ನಿನ್ನ ಮಧುರ ಸ್ವರಗಳಲಿ  
ನಾನು ತಂತಿಯಾದೆನು
ನಿನ್ನ ಕಂಠ ಮಾಧುರ್ಯಕೆ
ನಾನು ಬಂದಿಯಾದೆನು

ನಿನ್ನ ಉಸಿರು ನನ್ನದೆಂದು
ನನ್ನ ಮನಸು ಮಿಡಿದಿದೆ 
ನಿನ್ನ ಹೆಸರು ಕೇಳಲೆಂದು
ನನ್ನ ಕಿವಿಯು ತೆರೆದಿದೆ !!

ನೀನೆ ಇರದ ಬದುಕಿಗಿನ್ನು
ಅರ್ಥವೆಲ್ಲಿ ಹುಡುಕಲಿ
ನಿನ್ನ ಮರೆತು ಬಾಳಲಾರದೆ
ಸರ್ವವನ್ನು ತ್ಯಜಿಸುವೆ !!

No comments:

Post a Comment