Monday, October 21, 2013

ಆಪ್ಯಾಯಕಲ್ಮಶ ತುಂಬಿದ ಮನಸಲ್ಲಿ
ಇರುವುದೆಲ್ಲವೂ ಅಪಾಯ
ನಿಸ್ವಾರ್ಥದಿಂದಾದ ಸೇವೆಯ
ಭಾವನೆಯೇ ಆಪ್ಯಾಯ !!

ಕಪಟ ತುಂಬಿದ ಮನದಲಿ
ಇರುವುದು ಹಲವು ಉಪಾಯ
ಮುಗ್ಧ  ಹೃದಯದಲ್ಲಿರದು ಪರರ
ವಂಚಿಸುವಂತಹ ಸಹಾಯ !!

ಕಠೋರ ಶಬ್ದದ ಮಾತಿನಲ್ಲಿ
ಇರಬಹುದು ಒಳ್ಳೆಯ ವಿಷಯ
ತಾಳ್ಮೆಯಿಂದ ಯೋಚಿಸಿ ತಿಳಿಯಲು 
ಬೇಕು ನಮಗೆ ಸ್ವಲ್ಪ ಸಮಯ !!

Friday, October 18, 2013

ಯನ್ನ ಒಡಲಿನ ನೋವ

ನನ್ನಲ್ಲಡಗಿದ ಕವಿಯೊಬ್ಬ
ಬರೆಸಿದ್ದ ನೂರಾರು ಕವನವ
ಎಷ್ಟೇ ಅರ್ಥ ಬಿಡಿಸಿ ನೋಡಿದರೂ
ತಿಳಿಯಲಾಗದು ಯನ್ನ ಒಡಲಿನ ನೋವ !!

ಬರೆದ ಅಕ್ಷರಗಳಲಿ ಮಿನುಗುತಿತ್ತು
ಬರಿ ವರ್ಣನೆಯ ಪದ ಪುಂಜಗಳು
ನೈಜ ಬದುಕಿನಲಿ ಸುತ್ತಿಕೊಂಡಿತ್ತು 
ಹತ್ತು ಹಲವು ಕಷ್ಟ ಕಾರ್ಪಣ್ಯಗಳು  !!

ಮನಸು ಸದಾ ಮಿಡಿಯುತಿತ್ತು
ಇಂದಲ್ಲ ನಾಳೆಯ ಬದಲಾವಣೆಗೆ
ಕನಸಾದರೂ ನನಸಾಗುವುದೆಂಬ
ಹುಚ್ಚು ಆಸೆಯ ಬೆನ್ನಲ್ಲಿ ಹೊತ್ತು !!

ಭಾವನೆಯ ಪ್ರಪಂಚವೇ ಹಾಗೆ
ಅಲ್ಲಿ ಯಾರು ಅಂಕುಶಹಾಕುವವರಿಲ್ಲ
ನಿರ್ಧಾರಕೆ ಜಗವೇ ತಲೆಬಾಗುತಿತ್ತು
ನಿತ್ಯ ನೂತನ ವಿಷಯ ತುಂಬಿಕೊಂಡಿತ್ತು  !!

ಆದರೆ ಕಾಲಿ ಹೊಟ್ಟೆಯು ಕಾಲಿಯೇ ಆಗಿತ್ತು
ನಾಳೆಯ ಬದುಕಿನ ಆಸೆಯ ಮರೆತಿತ್ತು
ಚಿಗುರಿದ ಕನಸನು ಅಕ್ಷರದಿ ಹೊಂದಿಸಿತ್ತು
ತನ್ನೆಯ ಪಾಲಿಗೆ ಬರಿ ಹೆಸರನು ಪಡೆದಿತ್ತು !!

--Sridhar

Wednesday, October 16, 2013

ಹೇಳವ್ವಾ

 
 
ಹೇಳೇ ನನ್ನ ಹಡೆದವ್ವಾ
ನಿನ್ನಲೇನಿದೆ ಹೇಳವ್ವಾ
ನೋವಲು ನಲಿವಲು ನಿನ್ನದೇ ನೆನಪು
ಹೇಳೇ ನನ್ನ ಹಡೆದವ್ವಾ, ಹೇಳೇ ನನ್ನ ಹಡೆದವ್ವಾ !!

ನವಮಾಸ ನನ್ನ ಹೊತ್ತಿರುವೆ
ನರಕ ಯಾತನೆಯ ಪಟ್ಟಿರುವೆ
ಹರುಷದಿ ಜೀವವ ಕೊಟ್ಟಿರುವೆ
ಲಾಲಿಸಿ ಪಾಲಿಸಿ ಬೆಳೆಸಿರುವೆ !! ಪ !!

ಅದೆಷ್ಟೋ ರಾತ್ರಿ ನಾ ಅತ್ತಿರುವೆ
ನಿದ್ದೆಯಲ್ಲೂ ನಿನ್ನ ಬಲು ಕಾಡಿರುವೆ
ಅದೆಂತಹ ಕರುಣಾಮಯಿ ನೀನವ್ವ
ಹಾಲುಣಿಸಿ ಮಲಗಿಸಿರುವ ನನ್ನವ್ವ !! ಪ !!

ಯಾತನೆ ಪಡುವ ವಿಷಯವೇ ಬರಲಿ
ನಿನ್ನಲಿ ಚರ್ಚಿಸಿ ಮರೆಯುವೆನು
ನಿನ್ನಯ ಮೊಗದಿ ನಗುವನು ಕಂಡು
ಧೈರ್ಯದಿ ಗೆಲುವನು ಪಡೆಯುವೆನು !! ಪ !!

ಹೇಳೇ ನನ್ನ ಹಡೆದವ್ವಾ ನಿನ್ನಲೇನಿದೆ ಹೇಳವ್ವಾ !!

-- Sridhar Aithal D

Monday, October 14, 2013

ಮಧ್ಯಾಹ್ನ್ನದ ಕನಸಿನ ನಿದ್ದೆ
ಅಂದು ಕೊಂಡಿದ್ದೆ ಇಂದು ಹೀಗೆ ಆಗುವುದೆಂದು
ಗೋಡೆಯ ಮೇಲೆ ಹಲ್ಲಿಯ ಕಂಡಾಗ
ಮಾತಿನ ನಡುವೆ ಲುಚ್ ಗುಟ್ಟುವ ಸದ್ದು
ಹೊರಗಡೆ ಬಂದರೆ ಕಪ್ಪು ಬೆಕ್ಕಿನ ಕ್ರಾಸ್ಸಿಂಗ್ !!

ಅಯ್ಯೋ ಇಂದು ಏನೋ ಕೆಡಕು ಆಗುವುದೆಂದು
ಭಯದಿಂದ ನಾ ಮುಂದೆ ಸಾಗುತಲಿದ್ದೆ
ಎದುರಿಗೆ ಬಂದಳು ಕಾಲಿ ಮಡಿಕೆ ಹೊತ್ತ ನಾರಿ
ಸರ್ರನೆ ಮಿಡಿಯಿತು ನೋಡಿ ನನ್ನ ಎಡ ಕಣ್ಣಿನ ಹುಬ್ಬು!!

ಮುಂದೇನೋ ಕಾದಿದೆ ಎಂದು ಯೋಚಿಸುತಲಿದ್ದೆ 
ನೆನಪಾಗಿತು ಮುಂಜಾನೆ ಎದ್ದಿರುವ ದಿಕ್ಕು
ಕೂಡಲೇ ತಿರುಗಿದೆ ನನ್ನಯ ಬಲಬದಿಗೆ ನಾನು
ಬಿದ್ದೇನು ನೊಡಿ ಮಂಚದಿಂದ ಕನಸಿನ ನಿದ್ದೆಯ ಮಧ್ಯೆ !!

ಅಯ್ಯೋ ಅಯ್ಯೋ ಅಯ್ಯೋ .... 

--Sridhar

ಬಾಳಸಂಗಾತಿಯ ಬಹಳ ಪ್ರೇಮಿಸಿರುವೆ

ಬಾಳಸಂಗಾತಿಯೇ ಬಹಳ ಪ್ರೇಮಿಸಿರುವೆ , ನಾ ಬಹಳ ಪ್ರೇಮಿಸಿರುವೆ...
ಬದುಕಿನ ಜೀವ ನೀನೆಂದು
ನಾಳೆಯ ಬಾಳು ನಿನದೆಂದು
ನಮ್ಮಯ ಪ್ರೀತಿ ಸದಾ ಹೀಗಿರಲೆಂದು !!

ಪ್ರೀತಿಯ ಗೋಪುರವ ಕಟ್ಟ ಬಯಸಿರುವೆ
ನಿನ್ನನು ಪಡೆದು ನಾ ಧನ್ಯನೆಂದು  
ಪ್ರೀತಿಗೆ ನೀನೆ ಯೋಗ್ಯಳೆಂದು
ನನ್ನಯ ಹೃದಯಕೆ ತುಂಬಾ ಸನಿಹಬಂದು !!

ಕಣ್ಣಿನ ರೆಪ್ಪೆಯ ಸನಿಹವೇ ಸುಳಿಯುವೆ
ಅತ್ತರು ನೀರು ಬರದಿರಲೆಂದು
ಕತ್ತಲು ನಿನಗೆ ಬಯವಾಗದಿರಲೆಂದು
ನಿನ್ನಯ ಪ್ರತಿ ಹೆಜ್ಜೆಯ ಧ್ವನಿಯಾಗಿರುವೆನೆಂದು !!

ಪ್ರೀತಿಗೆ ನನ್ನದೇ ಅರ್ಥ ಕಲ್ಪಿಸಿರುವೆ
ನಿನ್ನಲಿ ಒಬ್ಬ ಗುರುವಿರುವನೆಂದು
ಅವ ಕಲಿಸಿದ ನೂರಾರು ಬಯಕೆಯ ಬಿಂದು
ಅರ್ಪಿಸಿಹ ನಿನ್ನಯ ತನುವಿನ ಅಮೃತ ಸಿಂಧು !!

ಬಾಳಸಂಗಾತಿಯೇ ಬಹಳ ಪ್ರೆಮಿಸಿರುವೆ ನಾ ಬಹಳ ಪ್ರೇಮಿಸಿರುವೆ !!

--Sridhar Aithal D

Dedicated to my wife on our marriage anniversary "Oct-28th"

Friday, October 11, 2013

ನಾನೇ ಇಂಜಿನಿಯರ್
ಅನುದಿನದ ಬಾಳಿದುವೆ
ಬಂಧನದ ಅನುಭವವೇ
ಸುತ್ತಲೂ ಗೋಡೆಗಳು
ಮೌನದ ಕರಿ ನೆರಳು !!

ಕಾಣಿಸದ ಗುರಿಗಳನು
ಲೆಕ್ಕಿಸದೆ ಕೊಟ್ಟವನು
ಹೆಸರಿಗೆ ಸಾಹುಕಾರನು
ನಮ್ಮಂತೆಯ ಕೂಲಿಯವನು !!

ತಂಪಿನ ಗಾಳಿಯದುವೆ
ಕೊಂಕಿನ ಮಾತುಗಳೊಡನೆ
ನೆಚ್ಚಿದ ಉದ್ಯೋಗವನ್ನು
ಮೆಚ್ಚದೆ ಮಾಡಿಸುವುದು !!

ತಿಂಗಳಿಗೊಮ್ಮೆ ನಗುವುದು 
ವಾರದ ಕೊನೆಗೆ ಕೊರಗುವುದು 
ಜನರ ಕಣ್ಣಿಗೆ ಮಾತ್ರ ಸಿರಿವಂತ
ತಿಳಿದವನಿಗೆ ಗೊತ್ತು ಇವನೆನಂತ !!