Tuesday, December 24, 2013

ನಂಬದಿರು



ನಂಬದಿರು ನಂಬದಿರು ಪರರ ಮನವ
ನಿಮ್ಮ ಹಿತೈಷಿಯೆಂದು  ಭ್ರಮಿಸಿ ಮನಕೆ ಘಾತಿಸುವರು
ನಂಬದಿರು ನಂಬದಿರು ಪರರ ಮನವ !!

ವಂಚನೆಯ ಎಂದಾದರು ಸಹಿಸಬಹುದು
ವಂಚಕನ ಸೇರಿಸಲಾರೆವು
ನಿಂದನೆಯ ಎಷ್ಟಾದರೂ ಮರೆಯಬಹುದು
ನಿಂದಕನ ಮರೆಯಲಾರೆವು !!

ನಂಬದಿರು ನಂಬದಿರು ಪರರ ಮನವ
ನಿಮ್ಮ ಆಪ್ತನೆಂದು ಕರೆಸಿಕೊಂಡು ಕ್ಷಣಕೆ ಬದಲಾಗುವರು
ನಂಬದಿರು ನಂಬದಿರು ಪರರ ಮನವ !!

ಸಮಯಸಾಧಕನ ಕಪಟ ವರ್ಣನೆಯ
ಬಣ್ಣದ ಮಾತನು ಮೆಚ್ಚಲಾರೆವು
ವಿಶ್ವಾಸಘಾತಕನ ಕುಟುಕು ಸಲ್ಲಾಪದ
ಚುಚ್ಚುಮಾತನ್ನು ಇಚ್ಚಿಸಲಾರೆವು !!

ನಂಬದಿರು ನಂಬದಿರು ಪರರ ಮನವ
ನಂಬಿಸಿ ಮೋಸಮಾಡುವವ "ಈ ಮಾನವ" 
ನಂಬದಿರು ನಂಬದಿರು ಪರರ ಮನವ !!


2 comments:

  1. ನಂಬಿದರೆ ಮಾತ್ರ ದ್ರೊಹವೆಸಗಲು ಸಲೀಸು ಮಹಾ ಸ್ವಾಮಿ.

    ReplyDelete
  2. ಹೌದು... ನಂಬಲೂ ಜನ ಬೆದರುವ ಕಾಲ ಬರುವುದು ಮುಂದೆ

    ReplyDelete