Thursday, August 29, 2013

ಕೃಷ್ಣ

ಕೃಷ್ಣನ ಕಂಡೆ ನಾ ಮುದ್ದು ಕೃಷ್ಣನ ಕಂಡೆ

ದೇವಕಿ  ಕಂದನ  ಕಂಡೆ
ನಂದ  ಕಿಶೋರನ  ಕಂಡೆ

॥ಕೃಷ್ಣನ ಕಂಡೆ ನಾ ಮುದ್ದು ಕೃಷ್ಣನ ಕಂಡೆ॥

ಮಂದ ಹಾಸವ ಬೀರುತ
ಪುಟ್ಟ ಹೆಜ್ಜೆಯನಿಕ್ಕುತ
ಕಳ್ಳ ನೋಟವ ಹರಿಸುತ್ತಾ
ಬೆಣ್ಣೆ ಕುಡಿಕೆಯ ಹುಡುಕುತ್ತ
ಬಂದ ಕೃಷ್ಣ ನನ್ನ ತುಂಟ ಕೃಷ್ಣ

||ಕೃಷ್ಣನ ಕಂಡೆ ನಾ ಮುದ್ದು ಕೃಷ್ಣನ ಕಂಡೆ||

ರಾಧೆಯ ಕನಸಲ್ಲಿ ಕಾಡುತ್ತ 
ಗೋಪಿಕ ಸ್ತ್ರೀಯರ ಪೀಡಿಸುತ
ಗೋವರ್ಧನ ಗಿರಿಯನೆ ತಿರುಗಿಸುವ
ಮೋಹನ ಮುರಳಿಯು ನಾದವ ಚೆಲ್ಲಿ 
ಬಂದ ಕೃಷ್ಣ ನನ್ನ ಚೆಲುವ ಕೃಷ್ಣ

||ಕೃಷ್ಣನ ಕಂಡೆ ನಾ ಮುದ್ದು ಕೃಷ್ಣನ ಕಂಡೆ||

ನಿತ್ಯ ಪವಾಡವ ತಾ ಮಾಡುತ
ದುಷ್ಟ ಪೂತನಿಯ ಕೊನೆಯಾಗಿಸುತ
ಕೆಟ್ಟ ಕಂಸನ ತೊಡೆ ಮುರಿದಿಹ
ಬಲರಾಮನ ಈ ತಮ್ಮನ ನೋಡಿರೆ
ಬಂದ ಕೃಷ್ಣ ನನ್ನ ದೇವರ ದೇವ ಕೃಷ್ಣ

||ಕೃಷ್ಣನ ಕಂಡೆ ನಾ ಮುದ್ದು ಕೃಷ್ಣನ ಕಂಡೆ||

ಕಾಯಕವ ಬದಲಿಸಿ

 ಆಳದ ಬಿತ್ತಳಿಕೆಯಲ್ಲಿ
 ಬಾಡಿದ ಬಿಲ್ಲನ್ನು
 ಮೋಡದ ಗುರಿಯ ಹಿಡಿದು
 ನೋಡದೆ ಬಿಟ್ಟರೆ
 ಕಾಡದೆ ಬಿಡುವುದೆ ಮೆಘಮಳೆ ?

 ಬಾಳಿನ ಹೊಸ್ತಿಲಲಿ
 ಸೋಲಿನ ಮಾಲೆ ಹಿಡಿದು
 ತೀರದ ಬಯಕೆ ಹೊತ್ತು
 ಕಾಯಕವ ಬದಲಿಸಿದರೆ
 ಜಯಸದೆ ಇರುವುದೇ ಜೀವಕಳೆ ?

 

Saturday, August 10, 2013

ತ್ವರಿತ ತಿಂಡಿ


ತಂಪಾದ ತಂಗಾಳಿಯ ವಾತಾವರಣ
ಉದರದಲ್ಲಿ ತಿನ್ನುವ ಆಸೆಯ ಅವತರಣ  
ತ್ವರಿತ ತಿಂಡಿಗೆ ಮನದಲ್ಲಿ ಬಯಕೆಯ ಹೂರಣ
ಮನೆಮುಂದೆ ನಿಂತಿರುವ ಅಂಗಡಿಯೇ ಇದಕೆಲ್ಲ ಕಾರಣ !

ಸಿಹಿಯ ಸ್ವಾದವನ್ನು ಅನುಭವಿಸಿ
ನೀರಿನ ರೂಪವನ್ನು ಮರೆಯಾಗಿಸಿ
ಖಾರದ ಘಾಟಿನಿಂದ ಅವತರಿಸಿ
ಪಾನಿಪುರಿ ನಾಮದಿ ಹೆಸರುವಾಸಿ !

ಪೂರಿಯ ಜೊತೆ ಖಾರದ ಸಮ್ಮಿಶ್ರಣ
ತಟ್ಟೆಯ ಮೇಲೆ ಮಸಾಲೆಯ ನರ್ತನ
ನೀರುಳ್ಳಿ ಟೊಮೇಟೊಗೂ ಆಮಂತ್ರಣ
ಅಲ್ಲಿಯೇ ಈ ಮಸಾಲಪುರಿಯ ಜನನ !

ಒಂದೇ ಎರೆಡೆ ತಿಂಡಿ ತಿನಿಸುಗಳು
ಪೇಟೆಯ ಮಂದಿಯ ನಿತ್ಯ ಖಾದ್ಯಗಳು
ಕೇಳಿಸದು ಇವರಿಗೆ ವೈದ್ಯನ ವಾದ್ಯಗಳು
ಸಂಜೆಯಾಗುತ್ತಲೇ ಕಾಡುವ ಈ ಸಮಸ್ಯೆಗಳು  !!

!! ನೀವೇನಂತೀರಿ ?

Friday, August 9, 2013

ಪ್ರವಾಹ

ಉತ್ತರ ಭಾರತದಲ್ಲಿ ಬಂದಿದೆ ಭಾರಿ ಪ್ರವಾಹ ಕೊಚ್ಚಿ ಹೋಗಿದೆ ಅದೆಷ್ಟೋ ಅಮಾಯಕರ ಗ್ರಹ ಇಳೆಗೆ ಸುರಿಯುತ್ತಿದೆ ಧಾರಾಕಾರ ಮಹಾಮಳೆ ಭೂಮಿ ತಾಯಿ ಸಂರಕ್ಷಿಸುವಳೇ ತನ್ನ ಜೀವಕಳೆ ? ಮೇಘಗಳ ಸಂಘರ್ಷಕ್ಕೆ ಬೆಚ್ಚಿದೆ ನೋಡು ಮುಗಿಲು ಆಕಾಶರಾಜ ಸೂರ್ಯನಿಗೂ ಬಿಡಲಿಲ್ಲ ಇನ್ನಿಲ್ಲದ ದಿಗಿಲು ಹೆದರಿ ಕಣ್ಮರೆಯಾಗುತ್ತಿದ್ದಾನೆ ಅವನು ದಿನದ ಹಗಲು ಮತ್ತೆ ಮರುಕಳಿಸದಿರಲಿ ಅವನಿಗೆ ಇಂತಹ ಸವಾಲು !!

ನೀರು

ಸುರಿಯುವ ಮಳೆಯ ನೀರು 
ನನ್ನ ಹೆಂಡತಿಯ ಕಣ್ಣಲ್ಲಿ ಸೇರು 
ಕಷ್ಟ ಕಾಲದಲ್ಲಿ ಯೋಚಿಸದೆ ಹಾರು
ನಷ್ಟವಾಗದೆ ಹೋದರೆ ನನ್ನಾಕೆ ಪಾರು !

ಪ್ರೀತಿಯಿಂದ ಕೇಳಿದ್ರೆ ಮಾತು
ಸಹನೆ ಮೀರಿ ವರ್ತಿಸಿದರೆ ಮುಗೀತು
ಅದೆಷ್ಟೇ ಕಣ್ಣೀರಿಗೂ ಬೆದರಲ್ಲ ಆ ಹೊತ್ತು
ಸೋಲಿಸಬಹುದು ಬರಿ ನಿನ್ನ ಆ ಸಿಹಿ ಮುತ್ತು !!