Monday, September 23, 2013

ಅರ್ಥವಿದೆ ಗೆಳತಿನಿನ್ನ ನೆನಪಲ್ಲೇ ಕಳೆದ ಒಂದೊಂದು ದಿನಕೂ ಎಷ್ಟೊಂದು ಅರ್ಥವಿದೆ ಗೆಳತಿ !!

ನೀರ ಮೇಲಿನ ಗುಳ್ಳೆಯಂತೆ ಬಂದ ಆಸೆ ನೀನು
ನೆರಳ ಬಯಸಿದ ಒಂಟಿ ಹೆಮ್ಮರದಂತೆ ನಾನು
ಮರುಳುಗಾಡಿನಲಿ ಬಿದ್ದ ಮಳೆಯಂತೆ ಬೇಟಿ ನಮ್ಮದು !!

ಗೂಡಿನ ದಾರಿ ಮರೆತ ತಾಯಿ ಹಕ್ಕಿಯಂತೆ ವೇತನೆ
ಬದುಕಿನ ಆಸೆ ಅರಳಿಸಿದ ನಿನ್ನಯ ಸವಿಯಾದ ವರ್ತನೆ
ತಿಳಿಯದು ಅಂದು ಯಾಕೆ ಸಂದಿಸಿದೆವು ನಾವು ಸುಮ್ಮನೆ !!

ಪ್ರತಿ ಸಂಭಾಷಣೆಗೂ ಮನದಲ್ಲಿ ಆಗು ಹೋಗುಗಳ ಚಿಂತನೆ
ದಿನ ಮುಂಜಾವಿನಲೇ ನಿನ್ನ ನೊಡಲು ಕಾರಣಗಳ ಸಮರ್ತನೆ
ಆದರೂ ತಿಳಿಯದು ನನಗೆ ನಿನ್ನ ಮೂಖಳಾಗಿಸಿದ ಮನಃ ಪರಿವರ್ತನೆ !!

 ನಿನ್ನ ನೆನಪಲ್ಲೇ ಕಳೆದ ಒಂದೊಂದು ದಿನಕೂ ಎಷ್ಟೊಂದು ಅರ್ಥವಿದೆ ಗೆಳತಿ !!


Wednesday, September 18, 2013

ಗಣಪ

 
 
ಭಕ್ತಿಯಿಂದ ಬೇಡಿದ್ದು
ಕೊಡಲೊಲ್ಲೆ ಅನ್ನುವವನಲ್ಲ
ನಮ್ಮ ಗಣಪ...

ಮೊನ್ನೆ ಕೇಳಿದ್ದೆ ಅವನಿಗೆ
ಗಜಮುಖ ವಕ್ರತುಂಡ
ಬಿಡ ಬೇಡ ನನ್ನ ಕೈಯನೆಂದು !

ಭಕ್ತ ಪರಾದೀನ ವಿನಾಯಕ
ವಿಸರ್ಜನೆಯ ದಿನ ನದಿಯಲ್ಲಿ
ಹಿಡಿದೆ ಬಿಡಬೇಕೇ ನನ್ನ ಕೈಯಿ !!!

Thursday, September 12, 2013

ನನ್ನೊಂದಿಗೆ ಕೊನೆಯಾಗುವುದಲ್ಲ

ಮರೆತರು ಮರೆಯಲಾಗದ ನೆನಪೊಂದು
ಮರೆತ ಮನಸನ್ನು ಕೊರೆದು
ಮರೆಯಲಾಗದಂತೆ ನೆನಪಿಸುತಿದೆಯಲ್ಲ !!

ಒಡಲಾಳದ ತಳದಲ್ಲಿ ಕಣ್ಮರೆಯಾಗಿದ್ದ
ನಿನ್ನ ಕುಡಿ ನೋಟವೊಂದು
ಕಡಲಿನಾಳದ ಮುತ್ತಿನಂತೆ ಮಿನುಗುತಿದೆಯಲ್ಲ !!

ಮಾತಿನ ಮರುಕ್ಷಣದಲಿ ನೆನಪೊಂದು
ನಿನ್ನ ಮಾತನ್ನೇ ನೆನಪಿಸಿ
ನನ್ನ ಅಸ್ತಿತ್ವವ ಮರೆಯಾಗಿಸುತಿದೆಯಲ್ಲ !!

ಮರೆತರು ಕರೆದರೂ ನೆನೆದರು ಎಂದೆಂದೂ
ಬರಲಾರದ ಊರಲ್ಲಿ ನೀನಿರುವೆ

ನಿನ್ನ ನೆನಪು ಮರೆಯಲಾರದಂತೆ ಬದುಕಲು
ನಾ ಅನುದಿನವು ಹವಣಿಸುತಲಿರುವೆ
ನೆನಪಲ್ಲಿ ಮನಸಲ್ಲಿ ಕನಸಲ್ಲಿ ನನ್ನ ಕಾಡುವ
ಆ ಸವಿಕ್ಷಣಗಳು ನನ್ನೊಂದಿಗೆ ಕೊನೆಯಾಗುವುದಲ್ಲ
ಎನ್ನುವ  ಕೊರಗೆ ನನ್ನನಿಂದು  ಕೊನೆಯಾಗಿಸುತಿದೆ !!

ಯೋಚಿಸು ಮನುಜ

ನಾ ಬರೆದ ಕಾದಂಬರಿಯ
ಅಂತಿಮ ಪುಟದ ಕೊನೆಯ ಅಕ್ಷರಕೆ
ಮರೆಯಾಗುವ ಕಥೆಯ ಮೇಲಿನ ಮೋಹ

ನೀ ಮುಡಿದ ಮಲ್ಲಿಗೆಯ
ಬಾಡಿದ ಪುಷ್ಪದ ಪ್ರತಿ ಎಸಳಿಗೂ ...

ನಾಳೆ ಕಸದ ಪಾಲಾಗುವ ನೋವಿನ ಬಾವ

ಪರರ ಮೆಚ್ಚಿಸಲು ಶೃಂಗಾರ
ಸೌಂದರ್ಯ ವೃದ್ದಿಸಲು ಬೆಳ್ಳಿ ಬಂಗಾರ
ಕಾಲ ಬಂದಾಗ ನಡುಗುವುದು ಈ ಮರುಳು ದೇಹ

ಮೂರು ದಿನದ ಬಾಳ್ವೆಗೆ ಬಡಿದಾಟ
ದ್ವೇಷ ಅಸೂಯೆಗಳ ಜೊತೆ ಹೊಡೆದಾಟ
ಯೋಚಿಸು ಮನುಜ ನೀ ಸದಾ ಸವೆಯುತ್ತಿರುವ ಜೀವ
ಇಂದಲ್ಲ ನಾಳೆಗೆ ನಿನಗೂ ಕೊನೆ ಬರೆದಿಹನು ನೋಡು ಆ ದೇವ !!