Tuesday, May 7, 2013

ಮಾಯಾ ಜಿಂಕೆಯೇ




ನನ್ನ ಮನದ ಬಯಕೆ
ತೇಲಿ ಬಂದು ಅದಾಗಿದೆ ಅಮೃತ ಬಿಂದು

ನನ್ನ ನಿರ್ಮಲ ಹೃದಯದಿ
ಆಸೆಯೊಂದು ಚಿಗುರಿ ಹಾಡಿ ನಲಿಯುತಲಿದೆ

ನನ್ನ ಪ್ರತಿ ಕ್ಷಣದ ಬಿನ್ನಹ
ತಂಗಾಳಿಯ ಹಿತವದು ಮೌನ ಮಾತಾಗಿಸಿದೆ

ನನ್ನ ತನು ಮನದ ಕೋರಿಕೆ
ನಿನ್ನದೊಂದು ಹೂ ನಗುವನ್ನು ಬಯಸುತಲಿದೆ

ಪ್ರೀತಿಗೆ ನೀ ಬರುವೆ,
ಕೋರಿಕೆಗೆ ನೀ ನಗುವೆ,
ಆಸೆಯ ನೀ ತರುವೆ,
ಸದಾ ನನ್ನ ಕಾಡಿಸುವೆ !! ಮಾಯಾ ಜಿಂಕೆಯೇ !!


2 comments:

  1. ಕವನವನ್ನು ಸುಲಲಿತವಾಗಿ ಭಾವತುಂಬಿ ಕಟ್ಟಿಕೊಟ್ಟಿದ್ದೀರಾ. ಇಷ್ಟವಾಯಿತು ಸಾರ್.

    http://badari-poems.blogspot.in

    ReplyDelete