Wednesday, February 20, 2013

ವರ್ಣಿಸಲು



ನಾನಿಂದು  ಕಂಡ ಸುಖ
ಸ್ವರ್ಗ ಸುಖವೆಂದು ಬಾವಿಸಿರಲು
ನನ್ನಾಕೆ ಬಂದ್ ಅರುಹಿದಳದುವೆ ಕ್ಷಣಿಕವೆಂದು !

ನಾನಿಂದು ಕೊಂಡ ಘಟ
ತುಂಬಾ ಸುಂದರವೆಂದು ಚಿತ್ರಿಸಲು
ನನ್ನೆದುರೇ ಪುಡಿಯಾಗಿದದುವೆ ಮೋಸವೆಂದು !

ನಾನಿಂದು ಉಂಡ ಊಟ
ಭೂರಿ ಭೋಜನವೆಂದು ವರ್ಣಿಸಲು
ನನ್ ಉದರ ಕೂಗಿಹುದದುವೆ ಅಜೀರ್ಣವೆಂದು !

ನಾನಿನ್ನ ಗಂಡ ಅಂದು
ಹಿಡಿಯ ಹೋದಾಗ ನೆನಪಿಸಿದಳು
ತಿಂಗಳಿಗೆ ಮೂರುದಿನವದುವೆ ಮಡಿಶಿಕ್ಷೆಯೆಂದು !!

Thursday, February 14, 2013

ಶ್ರೀಗಂಧ

ಶ್ರೀಗಂಧದ ಮರದ ತೊಗಟೆಯ
ಸುಗಂಧದ ಬಿಂದುವೇ
ಒಣ ರೆಂಬೆಗಳಲ್ಲೂ ಸುಮಧುರ
ಮಕರಂದವ ನೀ ಚೆಲ್ಲುವೆ !!

ಗಣಪನ ಹಣೆಯಲಿ ಕಂಗೊಳಿಸಿ
ಭಕ್ತನಿಗೆ ಸಲ್ಲುವೆ
ಅಂದದ ಚೆಲುವೆಯ ಮೊಗದಲಿ
ಮಂದಹಾಸ ನೀ ತರುವೆ !!

ಕಲ್ಲಲ್ಲಿ ತಿಕ್ಕಿ ತೇಯ್ದರು ಬೇಸರಿಸದೆ
ಪರಿಮಳ ಪಸರಿಸುವೆ
ನಿನ್ನ ಮರ್ಧಿಸುವ ಕಳ್ಳಕಾಕರಿಗೂ
ಸುವಾಸನೆಯ ಗಯ್ಯುವೆ ನೀ !!

ಅದೆಂತಹಾ ಕರುಣಾಮಯೀ ನೀನು
ನಶಿಸಿ ರಮಿಸುವೆ
ಕೊನೆ ತನಕ ಪರರ ಅತ್ಯಮೂಲ್ಯ
ಸ್ವತ್ತಾಗಿ ವಿಜ್ರಂಭಿಸುವೆ ನೀ !!


Tuesday, February 12, 2013

ಅನುಭವಿ



ಪದಗಳಲಿ ವರ್ಣಿಸಲಾರದ ಪರಮಾತ್ಮ
ಪಿತೃ ಪಾದಗಳಲಿ ಸಿಗುವ  ಪುಣ್ಯದಂತೆ
ಮೋಕ್ಷ ಬೇಕೆಂದರೆ ನೀ ನಡೆ ಭಕ್ತಿ ಮಾರ್ಗ
ನರಕದಲಿ ಸಿಗುವ ಪರಮ ಸ್ವರ್ಗದಂತೆ !!

ಒಮ್ಮೊಮ್ಮೆ ಬರುವ ಹಬ್ಬ ಹರಿದಿನಗಳು
ಮತ್ತೊಮ್ಮೆ ಸಿಗಲಾರದ ಸಿಹಿ ಭಕ್ಷ್ಯಗಳಂತೆ
ಉದರದಿ ಉದ್ಬವಿಸಿದ ಆತ್ಮತೃಪ್ತಿಯದುವೆ
ದೀರ್ಘ ಕಾಲದಿ ಅನುಭವಿಸಲಾರದಂತೆ !!

ಇರುವ ನಮ್ಮ ಸುತ್ತ ಪರಮ ಸತ್ಯಮೂರ್ತಿ
ಹರಿವ ನೀರಿನಲಿ ನಮ್ಮ ಜೀವ ಉಸಿರಿನಲಿ
ನುಡಿವ ಮಾತಿನಲಿ ನಡೆವ ಸನ್ಮಾರ್ಗದಲಿ
ಪರಿಸರದಿ ಕಾಣುವ ಅಗೋಚರ ಪಕ್ಷಿಯಂತೆ !!

ಕೊಡು ನೀ ದಾನಧರ್ಮವನು ಕೈಲಾದಷ್ಟು
ಸಲುಹುವನು ಪರಮಾತ್ಮ ಪರಲೋಕದಲಿ
ಇಷ್ಟವಾದುದನು ಕೊಟ್ಟು ಕಷ್ಟಕಾಲದಲಾಗು
ಸ್ಪಷ್ಟವಾಗಿ ಲಭಿಸುವುದು ನಿನಗೆ ಪರಮಹಂಸ !!

Monday, February 11, 2013

ಮನದಾಕೆ




ಮೇಘ ಮಂದಾರ
ಬಾಳ ಬಂಗಾರ   
ಒಲವಿನ ಸಿಂಗಾರ
ನಿನ್ನಯ ವೈಯ್ಯಾರ !!

ವಜ್ರ ಕಾಟಿಣ್ಯ
ಶುಭ್ರ ಸೌಜನ್ಯ
ಸರ್ವೇ ಸಾಮಾನ್ಯ
ನಿನ್ನಯ ತಾರುಣ್ಯ !!

ಪ್ರೀತಿಯ ತೋರಿಕೆ
ಬಯಕೆಯ ಹಾರೈಕೆ
ಹೇಳುವೆನು ಕೋರಿಕೆ
ಕೇಳು ನನ್ನ ಮನದಾಕೆ !! 

ನಿರುದ್ಯೋಗ


ಅವಕಾಶ ಸಿಗುವುದೆಂಬ ಆಸೆಯಲಿ
ಸದಾ ಈಡೇರಬೇಕೆಂಬ ಬಯಕೆಗಳು
ನೂರಾರು ಸುಳಿದಾಡುವುದು ಬೆನ್ನ ಹಿಂದೆ !!

ಮನಸ್ಸಿಗೆ ತೋಚಿದ ಉದ್ಯೋಗವು
ವಯಸ್ಸು ಮೀರಿದರೂ ಕೈ ಸಿಗಲಾಗದು
ಹತ್ತಾರು ಜಾತಿಪಂಗಡಗಳ ಮೀಸಲಾತಿಗಾಗಿ !!

ಗಗನಕ್ಕೇರುವ ಪ್ರತಿ ವಸ್ತುವಿನ ಮೌಲ್ಯ
ಸಂಬಳವನ್ನು ನೊಡಲಾಗದ ದೌರ್ಭಾಗ್ಯ
ದಿನದಿನವೂ ಪರಾವಲಂಬನೆಯ ಹಿಡಿಶಾಪ !!

ವಿಧಿಯ ಆಟವದು ಬಗೆಹರಿಸಲಾಗದು
ಅಂಜಿಕೆಯ ಜೀವನವ ತಡೆಹಿಡಿಯಲಾಗದು
ಕ್ಷಣಕ್ಷಣದ ಸಾವನ್ನು ಅಕ್ಷರದಿ ವರ್ಣಿಸಲೂ ಆಗದ್ದು !!

Tuesday, February 5, 2013

ಒಲವು



ಉತ್ತರ ಧ್ರುವದಿಂದ ಹರಿಯುವ
ಗಂಗೆ ನಾಚಿದಂತಹ ಸೌಂದರ್ಯ
ಬಾನಲ್ಲಿ ಮಿನುಗುವ ಅನಂತ ನಕ್ಷತ್ರ
ಜ್ಯೋತಿಯು ನಿನಗೆ ಮಾತ್ರ ಸೀಮಿತ !! 

ಹಿಮಾಲಯ ಪರ್ವತ ಶ್ರೇಣಿಯ
ಮರೆಮಾಡುವ ನಿನ್ನಯ ಕೇಶವೇಣಿ 
ಮರೆಯಲಾಗದು ನಿನ್ನ ಅಮೃತವಾಣಿ
ಸ್ತಬ್ದನಾದೆನು ನಾನೊಬ್ಬ ಮೂಕಪ್ರಾಣಿ !!

ನಿನಗೆ ಕರೆಯಲಾರದಷ್ಟು ಹೆಸರು
ನನಗೆ ನಿನ್ನಲ್ಲೇ ಅಡಗಿದೆ ಜೀವಉಸಿರು
ನಿನ್ನದೋ ಬಲು ಪ್ರಶಾಂತತೆಯ ನಿಲುವು
ಅದಕೆಯೇನೋ ನಿನ್ನಲ್ಲರಳಿದೆ ನನ್ನ ಒಲವು !!