Wednesday, May 23, 2012

ಪ್ರೇಮ ದೇವತೆ

ಬಂಗಾರದ ಹೊಳಪು ನಿನ್ನಲ್ಲೇ ಕಂಡೆ..
ಸಂಗೀತದ ಸ್ವರವು ನಿನದೇನೆ ಅಂದೆ..
ಸಿಂದೂರದ ಚೆಲುವು ಇನ್ನಿಲ್ಲ ಗೆಲುವು
ಒಂದಲ್ಲ ಎರಡಲ್ಲ ಹೇಳಲು ಹಲವು..|

ಅಪ್ಪಟ ರೀಶಿಮೆ ನಿನ್ನೆಯ ಮೈಸಿರಿ
ಕಪಟ ನೋಟವೆ ನನಗಿನ್ನು ಆಸರೆ
ಸಕಲ ಗುಣಗಳು ನಿನ್ನಲ್ಲೇ ಅಪ್ಸರೆ..
ಸೇರುವೆ ನಿನ್ನನು ಮತ್ತೆ ನೀ ಅತ್ತರೆ.... !!

ಮೊನ್ನೆಯ ತನಕವೂ ನಿಂದೇನೆ ಯೋಚನೆ...
ಕಂತೆಯ ಕೆಲಸವೂ ಮುಂದಿನ ಯಾತನೆ...
ನಿನ್ನೆಯ ಅಪ್ಪುಗೆ ಕೊಟ್ಟೆ ನೀ ಸೂಚನೆ...
ಕೆನ್ನೆಯ ತುಂಬೆಲ್ಲ ಕೊಡು ನೀ ಮಳೆಹನಿ...!!!

ಬಡತನ

ದೂರ ಸರಿ ನೀ ದುಷ್ಟ, ಬಡತನವೆ ನಮಗಿಷ್ಟ..
ಆಗದಿರು ರೋಗಿಷ್ಟ, ದುಡಿಯುವುದು ಬಲು ಕಷ್ಟ..
ಕರೆಯುವರು ಅನಿಷ್ಟ, ಅದೊಂತರಾ ವಿಶಿಷ್ಟ...
ನನ್ನಾಕೆಗೆ ಇದೇ ಇಷ್ಟ, ತಪ್ಪಿತು ನನಗೆ ಆ ಕಷ್ಟ...!!

ದೊಡ್ಡವರ ಆಡಂಬರ ನೋಡಲು ಸುಂದರ..
ಮಾಡುವರು ಶ್ರಂಗಾರ ಒಂದುದಿನದ ಸಡಗರ..
ನಮ್ಮವರ ಗಂಡಾಂತರ ಹೇಳಲು ಬಂದಿರಾ..
ಆಗುವುದು ಒಂತರಹ ಇನ್ನಿಲ್ಲದ ಮುಜುಗರಾ...!!

ಅಲ್ಪರು ನಾವೆಂದು ಸ್ವಲ್ಪವೂ ಬೇಸರಿಸು..
ದನಿಕನು ತಾನೆಂದು ದಿನದಿನವು ನೀ ಸ್ಮರಿಸು..
ಸಿರಿ ಲಕ್ಷ್ಮಿ ತಾ ಒಲಿದು ಬಂದಿರಲು ಬಲು ಸೊಗಸು..
ಆಗುವುದು ಬಾಳೆಲ್ಲ ಆನಂದದ ಹೊಂಗನಸು...!!

ಬೇಡುವೆ ನಿನ್ನೇ

-----------ನೊಂದ ಜೀವ-------------
ಒಮ್ಮೆಯೂ ಆಗದ ಬೇಸರ ಇಂದ್ಯಾಕೋ ಆಗಿದೆ...
ನಿದ್ದೆಯೂ ಬಾರದೆ ಮನವೆಲ್ಲಾ ನೊಂದಿದೆ..
ಸುತ್ತಲೂ ಕತ್ತಲೂ ಆದರೂ ಭಯವಿದೆ...
ಅತ್ತರೂ ಕರಗದ ನೋವೊಂದು ನನಗಿದೆ..
ಇಂದು ಏನೋ ಆಗಿದೆ,ಯಾಕೆ ಹೀಗೆ ಆಗಿದೆ???

ಅಮ್ಮನ ಅಕ್ಕರೆ ಬೇಕೆಂದು ಅನಿಸಿದೆ...
ಸುಮ್ಮನೆ ಕರೆಯುವೆ ಬೇಸರ ಪಡದಿರೆ..
ಮನದಲಿ ತುಂಬಿದ ಆಸೆಯ ಹೇಳುವೆ...
ಮತ್ತೆ ಮತ್ತೆ ಕಾಡಿದೆ ನನ್ನ ನೋವು ನಗುತಿದೆ..
ಇಂದು ಏನೋ ಆಗಿದೆ,ಯಾಕೆ ಹೀಗೆ ಆಗಿದೆ???

ಸುಖವ ಕಾಣುವ ಮನಸಿದೆ ದುಃಖ ದೂರ ಹೋಗದೆ...
ಜಯವು ಸಿಗುವ ಹೊತ್ತಿಗೆ ಮತ್ತೆ ಸೋಲು ಬಂದಿದೆ..
ಶಕ್ತಿ ಮೀರಿ ಚಲಿಸುವೆ ಮುಂದೆ ದಾರಿ ಕಾಣದೆ...
ಧೈರ್ಯ ಬರದೆ ಹೋಗಿದೆ ಮುಂದೆ ಏನೋ ಕಾದಿದೆ..
ಇಂದು ಏನೋ ಆಗಿದೆ,ಯಾಕೆ ಹೀಗೆ ಆಗಿದೆ???

ಹಲವು ಬಾರಿ ಬೇಡಿದೆ ಕರುಣೆ ತೋರು ದೇವಿಯೇ..
ನಿನ್ನ ಮಗನು ಬಂದಿಪೆ ಕ್ಷಮಿಸಿ ಹರಿಸು ತಾಯಿಯೇ...
ಸ್ವಲ್ಪ ನಾನು ಕುಗ್ಗಿದೆ ಮತ್ತೆ ಶಿಕ್ಷೆ ಕೊಡುವಿಯೇ...
ತಿದ್ದು ನನ್ನ ಮನವನು ಮುಂದೆ ಹೀಗೆ ಮಾಡೆನು...
ಇಂದು ಏನೋ ಆಗಿದೆ,ಯಾಕೆ ಹೀಗೆ ಆಗಿದೆ???

Monday, May 14, 2012

ಶೃಂಗಾರ

ಒಮ್ಮೆ ನೋಡಬಯಸಿದೆ ನಿನ್ನ ನಾ ಸಿಂಗರಿಸಿ..

ಮತ್ತೊಮ್ಮೆ ನೋಡಬಯಸಿದೆ ನಿನ್ನ ನಾ ಅನುಸರಿಸಿ..!

ಒಮ್ಮೊಮ್ಮೆ ಹಾಡಬಯಸಿದೆ ನಿನ್ನ ನಾ ಹೆಸರಿಸಿ..

ಮುಂದೊಮ್ಮೆ ಆಗುವೆ ನೀ ಯನ್ನ ಪಟ್ಟದರಸಿ...!!
Below 4 lines,, means a lot...

ಅಂದು ಹೇಳಿದ್ದೆ ನಿನಗಾಗಿ ನಾನು,

ಇಂದು ಹೇಳ್ತಿನಿ ನನ್ನಲ್ಲಿ ನೀನು,

ಮುಂದೆ ಹೋಗ್ತಿನಿ ನಿಂತಲ್ಲೇ ನಾನು,

ಬಂದೆ ಬರ್ತೀಯ ನನ್ನವಳು ನೀನು.!!!
ಅಂದು ಹೇಳ್ತಾ ಇದ್ದರು.. "ಶಂಖದಿಂದ ಬಂದರೆ ತೀರ್ಥ..."

ಇಂದು ಹೇಳ್ತಾ ಇದ್ದಾರೆ.. "ಶುಕ್ರವಾರ ಬಂದರೆ ತೀರ್ಥ..."

ನನ್ನ ಈ ಕನಸು

ಅಮೃತ ಸಿಂಚನ ನಿನ್ನ ಈ ಚುಂಬನ..
ವಿಸ್ತ್ರತ ಜೀವನ ನಮ್ಮ ಈ ಚಿಂತನ..
ಸರ್ವತ್ರ ಸಾದನ ಮೌನವೇ ಮಾಪನ..
ಸಮಗ್ರ ಬದುಕಿಗೆ ಶಾಂತಿಯೇ ಕಾರಣ!!

ಬಣ್ಣದ ಮಾತಿಗೆ ಬಿದ್ದೆ ನೀ ಸುಮ್ಮನೆ..
ಮೌನದ ಮಾತಲ್ಲೇ ಕದ್ದೆ ನೀ ನನ್ನನೆ..
ಸತತ ಸೋಲಲು ಬೆಂಬಲಿಸಿದೆ ನೀ ನನ್ನನೆ..
ಮತ್ತೆ ಮತ್ತೆ ಆಗುತಿದೆ ನಿನ್ನದೇ ಯೋಚನೆ!!

ಕದವ ತೆರೆಯಲು ಕೂಗುತಿದೆ ಮನಸ್ಸು..
ಹದವಾಗಿ ಬೇಯುತಿದೆ ಪ್ರೀತಿಯ ಹವಿಸ್ಸು ..
ಸದಾ ನಿನಗಾಗಿ ಮೀಸಲು ನನ್ನ ಈ ಕನಸು ..
ಮಿಂಚಿ ಮರೆಯಾಗಿ ಹೋಗಲು ಬರಬಾರದೇ ಮುನಿಸು!!

:-Sridhar Aithal D