Thursday, August 29, 2013

ಕೃಷ್ಣ

ಕೃಷ್ಣನ ಕಂಡೆ ನಾ ಮುದ್ದು ಕೃಷ್ಣನ ಕಂಡೆ

ದೇವಕಿ  ಕಂದನ  ಕಂಡೆ
ನಂದ  ಕಿಶೋರನ  ಕಂಡೆ

॥ಕೃಷ್ಣನ ಕಂಡೆ ನಾ ಮುದ್ದು ಕೃಷ್ಣನ ಕಂಡೆ॥

ಮಂದ ಹಾಸವ ಬೀರುತ
ಪುಟ್ಟ ಹೆಜ್ಜೆಯನಿಕ್ಕುತ
ಕಳ್ಳ ನೋಟವ ಹರಿಸುತ್ತಾ
ಬೆಣ್ಣೆ ಕುಡಿಕೆಯ ಹುಡುಕುತ್ತ
ಬಂದ ಕೃಷ್ಣ ನನ್ನ ತುಂಟ ಕೃಷ್ಣ

||ಕೃಷ್ಣನ ಕಂಡೆ ನಾ ಮುದ್ದು ಕೃಷ್ಣನ ಕಂಡೆ||

ರಾಧೆಯ ಕನಸಲ್ಲಿ ಕಾಡುತ್ತ 
ಗೋಪಿಕ ಸ್ತ್ರೀಯರ ಪೀಡಿಸುತ
ಗೋವರ್ಧನ ಗಿರಿಯನೆ ತಿರುಗಿಸುವ
ಮೋಹನ ಮುರಳಿಯು ನಾದವ ಚೆಲ್ಲಿ 
ಬಂದ ಕೃಷ್ಣ ನನ್ನ ಚೆಲುವ ಕೃಷ್ಣ

||ಕೃಷ್ಣನ ಕಂಡೆ ನಾ ಮುದ್ದು ಕೃಷ್ಣನ ಕಂಡೆ||

ನಿತ್ಯ ಪವಾಡವ ತಾ ಮಾಡುತ
ದುಷ್ಟ ಪೂತನಿಯ ಕೊನೆಯಾಗಿಸುತ
ಕೆಟ್ಟ ಕಂಸನ ತೊಡೆ ಮುರಿದಿಹ
ಬಲರಾಮನ ಈ ತಮ್ಮನ ನೋಡಿರೆ
ಬಂದ ಕೃಷ್ಣ ನನ್ನ ದೇವರ ದೇವ ಕೃಷ್ಣ

||ಕೃಷ್ಣನ ಕಂಡೆ ನಾ ಮುದ್ದು ಕೃಷ್ಣನ ಕಂಡೆ||

No comments:

Post a Comment