Sunday, September 30, 2012

Wednesday, September 26, 2012

ಏನು ಗೊತ್ತು

ನಲಿವ ನವಿಲಿಗೇನು ಗೊತ್ತು 
ತನ್ನ ನೃತ್ಯ ನೋಡುವ ಮನಗಳ ಭಾವನೆ
ಕಚ್ಚುವ ಹಾವಿಗೇನು ಗೊತ್ತು
ತನ್ನ ಬಾಯಲ್ಲಿರುವ ವಿಷದ ಕಾರ್ಖಾನೆ !


ಹಾಡುವ ಕೋಗಿಲೆಗೇನು ಗೊತ್ತು
ತನ್ನ ಕಂಟದ ಇಂಪಾದ ಸ್ವರ ಸಂಪತ್ತು
ಓಡುವ ಜಿಂಕೆಗೇನು ಗೊತ್ತು
ತನ್ನ ಜಿಗಿತದಲ್ ಅಡಗಿರುವ ಗಮ್ಮತ್ತು  !


ಗರ್ಜಿಸುವ ಸಿಂಹಕ್ಕೆನು ಗೊತ್ತು
ತನ್ನ ಮನದಲ್ಲಿರುವ ಪ್ರೀತಿಯ ಸ್ವತ್ತು
ಜಿಗಿವ ಮೊಲಕ್ಕೆನು ಗೊತ್ತು
ತನ್ನ ಪ್ರಾಣಕ್ಕೆ ಆಗಲಿರುವ ಆಪತ್ತು  !


ಉಳುವ ರೈತನಿಗೇನು ಗೊತ್ತು
ತನ್ನ ಹೊಲದಲ್ಲಿರುವ ಖನಿಜ ಸಂಪತ್ತು
ಅಳುವ ಕಂದನಿಗೇನು ಗೊತ್ತು
ತನ್ನ ತಾಯಿಯ ಸ್ಪರ್ಶದ ಆ ಮುತ್ತು !!


ಗುಂಯಿಗುಡುವ ಜೇನಿಗೇನು ಗೊತ್ತು 
ತನ್ನ ತುಪ್ಪಕ್ಕಿರುವ ಕಾಸಿನ ಕಿಮ್ಮತ್ತು
ಇವೆಲ್ಲವೂ ಮೊದಲೇ ಗೊತ್ತಿದ್ದರೆ
ಜಗದ ನಿಯಮವೇ ತಲೆಕೆಳಗಾಗುತಿತ್ತು!!

Tuesday, September 25, 2012

ಒಲವು

ಮಂಕಾಗಿದೆ ಈ ಮನವು
ಹಸಿವುತಣಿಸಿದ ಒಲವು
ಮನದಲ್ಲಿನ ಬಯಕೆಯು  
ತಿಳಿಯಬೇಕಿದೆ ಹಲವು
 
ಸ್ವಪ್ನ ನಿಜವಾದರಾಗಿತು
ಚಿನ್ನ ಧುಬಾರಿಯಾಗಿತು
ರತ್ನ ಕೈಸೇರಿದರಾಗಿತು
ನನ್ನದೀ ಮನ ಸಂಪತ್ತು
 
ಕಣ್ಣು ಮಿಟುಕಿಸಿದಂತೆ
ಹಣ್ಣು ಧರೆಗುರುಳಿದಂತೆ
ಮಣ್ಣು ಹಸನಾದಂತೆ
ಹೆಣ್ಣು ತಾ ಒಲಿದಳಂತೆ

Sunday, September 23, 2012

ನಾ ಹೊರಟಿರುವೆ

ಬಲು ಅಮೊಘವೋ ಇದೊಂದು ನನ್ನ ಸುಯೂಗವೋ

ನಾ ತಿಳಿಯುವ ಮೊದಲೇ ಒಪ್ಪಿರುವ
ನಾಚಿ ನನ್ನೊಂದಿಗೆ ನಿಂತಿರುವ
ಮುಂದೆ ನಮ್ಮ ಮನೆ ಬೆಳೆಗಲಿರುವ
ನನ್ನ ಮಡದಿಗೆ ಸರಿಹೊಂದುವ
ಚೆಂದದ ಉಡುಗೊರೆಯ ತರಲು
ನಾ ಹೊರಟಿರುವೆ ನಾ ಹೊರಟಿರುವೆ

ಚಿನ್ನ ತರುವೆನೆನಲು ಬೇಡ ಚಿನ್ನ ಅಂದಿಹಳು

ಸೀರೆ ತರುವೆನೆನಲು ನೀರೆ ಬಲು ನಾಚಿಹಳು
ಮಾಂಗಲ್ಯ ಸೂತ್ರ ತರಲು ಆಕೆ ಕಾದಿಹಳು
ಬಾರೆ ಮಂಟಪಕೆಯನಲು ಹೌ-ಹಾರಿಹೋಗಿಹಳು

ಆಮಂತ್ರಣವ ಹೊತ್ತು ನೆಂಟರಿಷ್ಟರ ಮನೆಯ ಕಂಡು
ಬನ್ನಿ ಮದುವೆಗೆಂದು ಹೊಟ್ಟೆ ತುಂಬುವಷ್ಟು ಉಂಡು
ಹಾರೈಸುವಿರಿಯೆಂದು ಕರೆಯ ಹೊರಟಿರುವೆನಿಂದು
ಬಾವಿಸಿರುವೆ ನೀವು ಅಂದು ಮರೆಯದೆ ಬರುವಿರೆಂದು !!

Wednesday, September 12, 2012

ಮದುವೆ

ಹೇಳುವೆನು ನಿಮಗೊಂದು ಗುಟ್ಟು,
ಆಕೆ ಬರುವಳು ಹೊಸ ಸೀರೆಯುಟ್ಟು,
ಹಣೆಯಲ್ಲಿ ಕೆಂಪು ತಿಲಕವ ನಿಟ್ಟು,
ಮುಡಿಯಲ್ಲಿ ಮಲ್ಲಿಗೆ ಜಡೆಯ ಬಿಟ್ಟು !!

ಕುಲದೇವ ಗುರುನರಸಿಂಹನ ಸ್ಮರಣ,
ಮನದಲ್ಲಿ ಸಂಭ್ರಮದ ಆ ಕ್ಷಣ,
ಬಂಧು ಬಾಂಧವರ ಆಗಮನ,
ಮನೆಯಲ್ಲಿ ಹಬ್ಬದ ವಾತಾವರಣ !!

ಬಾಗಿಲಿಗುಂಟು ತಳಿರು ತೋರಣ,
ಊಟಕ್ಕುಂಟು ಒಬ್ಬಟ್ಟಿನ ಹೂರಣ,
ಮಂಟಪದ ಮುಂದೆ ವರನ ದಿಬ್ಬಣ,
ನಮ್ಮ ಮದುವೆಯೇ ಇದಕ್ಕೆಲ್ಲ ಕಾರಣ !!

ನಮಸ್ಕರಿಸುವೆವು ಗುರುವಿನ ಚರಣ,
ಮೊಳಗಲಿದೆ ವೇದಘೋಷದ ಪಠನ,
ಕೂಡಲಿದೆ ನಮ್ಮಯ ಭಾಗ್ಯದ ಕಂಕಣ,
ಮಿತ್ರ ಬಳಗಕ್ಕೆಲ್ಲ ಇದುವೇ ಆಮಂತ್ರಣ !!

ಅಮ್ಮ

ಕದವ ತೆರೆಯ ಹೋದಾಗ
ನೂಕಿ ಬಂದ ಧ್ವನಿಯದು
"ಅಮ್ಮ" ತಾಯಿ ಭಿಕ್ಷೆ ನೀಡು

ಮನೆಯ ಬಿಟ್ಟು ಹೊರಟಾಗ
ಉಕ್ಕಿ ಬಂದ ಅಳುವದು
"ಅಮ್ಮ" ನಾ ನಿನ್ನ ಬಿಟ್ಟಿರಲಾರೆ

ಅಳುವನೊಮ್ಮೆ ಮರೆತಾಗ
ನಗುತ ಮುತ್ತು ಕೊಡುವ
"ಅಮ್ಮ" ನಿನಗೆ ಸಾಟಿ ಯಾರೆ

ತಪ್ಪುಗಳನು ಮಾಡಿದಾಗ
ಮುದ್ದು ಮಾಡಿ ತಿದ್ದುವೆ
"ಅಮ್ಮ" ನಿನ್ನಲೇನು ಅಡಗಿದೆ

ತ್ಯಾಗ ಪ್ರೀತಿ ಮಮತೆ ಕರುಣೆ
ನೀನು ಕಲಿಸಿದ ದೀಕ್ಷೆಯು
"ಅಮ್ಮ" ನನ್ನೀ ಬಾಳಿನ ಆಸ್ತಿಯು !!
See More