Friday, November 29, 2013

ಮಾನಿನಿ

ಮನದನಿಯನ ಮನಸಿಗೆ ಸವಿಯಾದ
ಮುದ ನೀಡುವಳೇ ಮಾನಿನಿಯು ?

ಇನಿಯನ ಈರ್ಷೆಯ ಅರಿತು
ಕ್ಷಣದಲಿ ಮನವನೆ ಬೆರೆತು
ಸನಿಹದಿ ನಿಂತು ಕಲಹವ ಮರೆತು
ಸರಸದಿ ಪ್ರೀತಿಯ ಮಳೆಗೈಯುವಳು ।।

ನೂರಾರು ಬಯಕೆಯ ಹೊತ್ತು
ಮನಸಾರೆ ಕೆಲಸವ ತೆತ್ತು
ಮನೆಮಂದಿಯ ಪ್ರೀತಿಯ ವಸ್ತು 
ಮನದೊಡೆಯನಿಗೆ ಸ್ವಂತದ ಸ್ವತ್ತು !!

ತನ್ನೆಯ ತಾಯಿತಂದೆಯ ತೊರೆದು
ನಾಳೆಯ ಬದುಕನು ನೆನೆದು 
ಸರ್ವರ ಪ್ರೀತಿಗೆ ಬಾಜನಳು, ಈಕೆ
ತವರೂರಿನ ಕೀರ್ತಿಯ ಬೆಳಗುವವಳು !!

ಶ್ರೀಧರ ಐತಾಳ ದೇವಳಿ 

2 comments:

  1. ಅಂತವಳ ಸಂಗದಲಿ ಪರಸಂಗ ನೆನಪಾಗದು.
    ಸಾರ್ಥಕವು ದಾಂಪತ್ಯ ಬಂಡಿ ಆಗಲೇ.

    ReplyDelete
  2. ನಿಜ... ಅದೇ ಸಂಸಾರಿಯ ಪರಮಸ್ವರ್ಗ

    ReplyDelete