Saturday, June 30, 2012

ಗೆಳೆಯರು

ಅಂಬಿಗನ ನೆನೆಯಲು ಹಲವರಿರುವರು,
ಕೆಲವರು ಹೇಳಲು ಬರೀ ಪರಿಚಯದವರು,
ಇನ್ನೂ ಹಲವರು ಆತ್ಮೀಯ ಗೆಳೆಯರವರು,
ನನ್ನ ಹೆಮ್ಮರದ ಚಿಗುರೆಲೆಯ ಕೊಂಬೆಗಳವರು !!

ಬಾಳ ಕಡಲಲಿ ತೀರದ ಬಯಕೆ ಮೂಡಿಸಿಹರು, 
ಜೊತೆ ಜೊತೆಯಲಿ ಸಾಗಿ ಬಂದಿರುವರು,
ಮುಸಿಕಿನ ಹಾರೈಕೆಯ ಆಶಾಕಿರಣಗಳು,
ನನ್ನ ಜೀವಿತದ ಸುಂದರ ಪುಷ್ಪ ಗೊಂಚಲುಗಳು !!

ಸೋಲಲ್ಲೂ ಗೆಲುವಿಗೆ ದಾರಿ ತೋರಿದವರು,
ಮನೆಯಲ್ಲೂ ನನ್ನನು ತಿದ್ದಿ ಬೆಳಸಿದವರು,
ಸದಾ ಏಳ್ಗೆಯನು ಬೆಂಬಲಿಸಿಹರು,ನನ್ನವರು
ಹೇಳಲು ಹಲವರಿಹರು ಈ ಪುಟ್ಟ ಹೃದಯದಲ್ಲಿಹರು !!

Friday, June 29, 2012

ನಮ್ಮಲ್ಲೇ ಪೈಪೋಟಿ

----------- ನಾನ ಇಲ್ಲ ನೀನಾ ??? -------------

ನಾನು ಪ್ರಥಮ ಬಂದರೆ ನೀನು ಅಪ್ರತಿಮೆ
ನಾನು ಪರೀಕ್ಷಕನಾದರೆ ನೀನು ಅಪರಿಚಿತೆ
ನಾನು ಮಾರೀಚನಾದರೆ ನೀನು ಮರೀಚಿಕೆ
ನಾನು ನರನಾದರೆ ನೀನು ನನ್ನ ನರನಾಡಿ !!

ನನ್ನ ಪ್ರೀತಿ ಮಿತವಾದರೆ ನಿನ್ನದು ಹಿತ
ನಾನು ಚಂಚಲನಾದರೆ ನೀನು ನಿಶ್ಚಲ
ನಂದು ಜಯವದರೆ ನಿನ್ನದೇ ವಿಜಯ
... ನಾನು ಅನುಭವಿಯಾದರೆ ನೀನೇ ಫಲಾನುಭವಿ !!!

ನಾನು ನೂರಾದರೆ ನೀನು ನೂರಾರು
ನಾನು ನಾನದಾರೆ ನೀನು ನೀನೆ
ಯಾಕೆ ಇಷ್ಟೊಂದು, ಇನ್ನಷ್ಟು ಮನನೊಂದು
ಒಂದಾಗೊಣವೇ ಇನ್ನಾದರೂ ನಾನು ನೀನು !!!!

ಕ್ರಿಕೆಟ್ ದೇವರು ವಾಮನ

ಜಗವ ಮೆಚ್ಚಿಪ ಜಯವ ಗಳಿಸಲು,
ವರುಷ ಕಳೆದಿದೆ ಹರುಷ ಮರೆಯಲು,
ಸರಣಿ ಶತಕ ಗಳಿಸಿದ ವೀರನೆನಲು,
ಸೋಲು ಶತಸಿದ್ದ ನೀನು ಶತಕಗಳಿಸಿರಲು !!

ನಮ್ಮ ನಾಡಿನ ಜನರ ನೆಚ್ಚಿನ ಕ್ರೀಡಾಳು
ಮರೆಯಲಾರಿಪೆವು ಆ ಹೊಡೆತದ ಭಂಗಿಗಳು,
ಮರಳು ಮನೆಗೆಂದು ಕೂಗಿ ಹೇಳಿರಲು,
ಹುರಿದುಂಬಿ ಉತ್ತರಿಸುವೆ ನೀನು ಚಲದೊಳು !!

ರಾಜ್ಯಸಭೆಯೋಳು ನಿನ್ನ ಆಗಮನ
ಬೇರೆ ಆಟಗಾರರಿಗೆ ಸಿಗದಿದ್ದ ಸನ್ಮಾನ
ನೋಡುವೆವು ವಾಮನನ ಚಾಣಾಕ್ಷತನ
ನೆಚ್ಚಿನ ಕ್ರಿಕೆಟ್ ದೇವರಿಗೆ ನನ್ನದೊಂದು ನಮನ !!

Monday, June 25, 2012

ವೃಂದಾವನತರು ಲತೆಗಳು ಅಂಗಳದಲ್ಲಿ,
ಸುಮ ಅರಳಿದೆ ಕಂಗಳಲ್ಲಿ,
ಘಮ ಅಂದಿದೆ ಮಕರಂದದಲಿ,
ತನು ಮನಗಳ ಸಮ್ಮಿಲನದಲಿ !!

ತಿಳಿಯಿರಿ ಪಕ್ಕ್ಷಿಗಳ ಇಂಚರ,
ಅರಿಯಿರಿ ದುಂಬಿಗಳ ಝೇಂಕಾರ,
ಒಂದಕ್ಕಿಂತ ಒಂದು ಸುಮಧುರ,
ಹಾಡಿ ನಲಿಯುತಿದೆ ನೋಡಿರ !!

ಅರಳಿದೆ ಹೂವು ಮಂದಾರ,
ಜೊತೆಗೆ ನಿಲ್ಲುವುದೇ ಶ್ರಂಗಾರ,
ಬಣ್ಣ ಬಣ್ಣದ ಚಿಟ್ಟೆಯ ಅವತಾರ,
ಜಿಗಿದು ಹಾರುವುದು ಬಲ್ಲಿರ !!

ನಮ್ಮೀ ತೋಟದ ಸಂಪತ್ತು,
ಜಾಸ್ತಿ ಮಳೆ ಬಂದರೆ ಆಪತ್ತು,
ಸೂರ್ಯ ಚಂದ್ರರಿಗೂ ಗೊತ್ತು,
ಇದು ನಮ್ಮ ಮನೆಯ ಸೊತ್ತು !!

:- Sridhar Aithal D

Friday, June 22, 2012

ಬಾಲ್ಯದ ನೆನಪು

ಮರೆತುಹೋದ ಕ್ಷಣಗಳು
ಕಳೆದ ಬಾಲ್ಯದ ದಿನಗಳು
ಹೊಸ ಹೊಸ ಆಟಗಳು
ಮನೆಯತುಂಬ ಓಡಾಟಗಳು !!

ಊರ ತುಂಬಾ ಜಾತ್ರೆಗಳು
ಹೊಟ್ಟೆ ತುಂಬ ಊಟಗಳು
ಒಂದೇ ಎರಡೆ ಘಟನೆಗಳು
ನೆನೆದರೆ ಬರುವ ನಗುಗಳು !!

ನಾವೇ ಕಟ್ಟಿದ ನಾಟಕಗಳು
ಗೆಳೆಯರೊಂದಿನ ಶಪಥಗಳು
ನಮ್ಮ ಮದ್ಯವೇ ಯುದ್ದಗಳು
ಅಪ್ಪ ಅಮ್ಮನ ಹೊಡೆತಗಳು !!

ಅಜ್ಜ ಕೊಡುವ ನೋಟುಗಳು
ಅಜ್ಜಿ ತಿನ್ನಿಸುವ ಸಿಹಿತಿಂಡಿಗಳು
ಮತ್ತೆ ಸಿಗದ ನೆನಪುಗಳು
ನನ್ನ ಬಾಲ್ಯದ ವರುಷಗಳು !!

Wednesday, June 20, 2012

ಪ್ರೇಮ ದೀಕ್ಷೀತ

ಮನಸೋತುಹೋದೆ ನಿನ್ನ ತುಂಟ ನೋಟಕ್ಕೆ
ಕೂಗಿ ಕರೆಯುವೆ ಗುಡಿಯ ಮುಂದಿನ ತೋಟಕ್ಕೆ..
ಹಾಡಿ ಹೊಗಳುವೆ ನಮ್ಮ ಮದುರ ಸ್ನೇಹಕ್ಕೆ..
ಮನೆಯವರದೇ ತೊಂದರೆ ಸದ್ಯದ ಸಮಯಕ್ಕೆ.

ಅದೆಷ್ಟೋ ಸಾಲುಗಳು ಬರೆದೆ ನಿನ್ನ ವರ್ಣಿಸಲು..
ಕಷ್ಟ ಸಾದ್ಯ ನಿನ್ನನು ಬಣ್ಣಿಸಿ ಮತ್ತೆ ಮೆಚ್ಚಿಸಲು..
ಮರೆಯಲಾರದ ಆತುರಗಳ ಸಂಕೊಲೆಗಳವು..
ಒಂದರ ಮೇಲೊಂದು ಸುಂದರ ಕಲ್ಪನೆಗಳವು..

ಇನ್ನಾದರೂ ತಿಳಿಯದೆ ನಿನಗೆ ನನ್ನ ಆರ್ತನಾದ
ಪ್ರೇಮ ದೀಕ್ಷೆಯ ಬಿಕ್ಷುಕನ ಮನದಾಳದ ವಾದ
ಮಧುರ ಕಲ್ಪನೆಗೂ ಮಿಗಿಲಾದ ವಾಗ್ವಾದ
ಇಬ್ಬರಿಗೂ ನಿಲುಕದ ಸ್ವಾದ ಅದು ನಿರ್ವಿವಾದ

ಸರಿಯಾಗಿ ಪರೀಕ್ಷಿಸಿದ ಮೇಲಾದರೂ ಹೇಳು
ನಿನ್ನ ವಿನಃ ಇನ್ನಾರು ಕೊಡುವರು ಹೊಸ ಬಾಳು
ಕೊನೆಯಾಗಲಿ ನಮ್ಮಿಬ್ಬರ ಮನೆಯ ಗೋಳು
ಅಷ್ಟೇ ಹೇಳಿರಲು ನಾಚಿ ನೀರಾದಳಿವಳು ನನ್ನವಳು...

:-Sridhar Aithal D

Monday, June 18, 2012

ವರ್ಣನೆ

ಮುಗುಳ್ನಗು ನಿನ್ನ ಆಸ್ತಿ...
ಪ್ರೀತಿಯಲ್ಲಿ ನಾನೇ ಜಾಸ್ತಿ...
ಮನಸಿನಲ್ಲಿ ನಿಂದೆ ಕುಸ್ತಿ...
ಹೇಳೋದ್ರಲ್ಲೇ... ಒಂಥರಾ ಮಸ್ತಿ !!!

ಮಾತಿನಲ್ಲಿ ನೀನೆ ಮಹಾರಾಣಿ...
ಕನಸಿನಲ್ಲಿ ಬಂದ ತಾರಾಮಣಿ...
ಕರೆಯುವರು ನಿನ್ನ ಓ ತರುಣಿ...
ಆದರೆ ನೀ ನನ್ನ ರಮಣಿ,ಕಣ್ಮಣಿ !!!

ಮಳೆಗಾಲದಲ್ಲೆಲ್ಲಾ ನೀನೆ ಹನಿ...
ಮನೆಯಲ್ಲೆಲ್ಲಾ ನಿಂದೆ ದ್ವನಿ...
ಮರೆಯಬೇಡ ನನ್ನನು ನೀ...
ಮರುಭೂಮಿಯಲ್ಲಿ ಬಿದ್ದ ಇಬ್ಬನಿ !!!

Sunday, June 17, 2012

ಭಕ್ಷ್ಯ

ಶನಿವಾರದ ಸಂಪಿಗೆ ಇಂದ್ಯಾಕೆ ಸಪ್ಪಗೆ.
ಕೊಡು ನೀ ಒಪ್ಪಿಗೆ ತಂದಿರುವೆ ಸಜ್ಜಿಗೆ,
ಹೇಳಲು ಹಲವುಬಗೆ ಕೊಂಡಿರುವೆ ಒಟ್ಟಿಗೆ,
ಸಾಕು ಅಂತನ್ನದೆ ತಿನ್ನು ನೀ ತೆಪ್ಪಗೆ....

ಬೂಂದಿ ಕಾಳು, ಕಡ್ಲೆ ಕಾಳು ಎಲ್ಲವನ್ನು ತಿನ್ನುವೆ,
ರಾಗಿ ರೊಟ್ಟಿ ಗಟ್ಟಿ ಚಟ್ನಿ ಬೆಣ್ಣೆಯೊಂದಿಗೆ ಮುಕ್ಕುವೆ,
ಬೆಲ್ಲ ಹಾಕಿ ನೀರು ಕುಡಿದು ಮತ್ತೆ ರುಚಿಯ ಸವಿಯುವೆ,
ಒಂದು ಊಟ ತಿಂದು ನೋಡ ಮತ್ತೆ ಏನು ಹೇಳದೆ...

ಅನ್ನ ಸಾರು ಮಾಡುವಳು ನನ್ನವಳು ಮಂಜುಳಾ,
ದೊಣ್ಣೆ ಮೆಣಸು ತಿನ್ನಲು ಹಾಕುವಳು ಹಪ್ಪಳ,
ಅಬ್ಬಬ್ಬ ಹಲವುಬಗೆ ಮಾಡುವಳು ಒಬ್ಬಳೇ,
ಇಂತವಳು ಬದುಕಲಿ ಚಿರಕಾಲೆ ಸುಮಂಗಲೆ...

ಮೋಹ ಎನ್ನುವ ಮಾಯೆ

ಅಮ್ಮನ ಪ್ರೀತಿಗೆ ಕೊನೆಯಿಲ್ಲಾ...
ಅಕ್ಕನ ಅಕ್ಕರೆ ಸುಳ್ಳಲ್ಲ...
ಅಪ್ಪನ ಆಸೆರೆ ನಮಗೆಲ್ಲ..
ಕೊಟ್ಟ ಮಾತು ಮರೆತಿಲ್ಲ...

ಪ್ರೇಮ ಪಾಶವು ಬಿಗಿಯಿತಲ್ಲಾ....
ಇದು ಹೆತ್ತ ತಾಯಿಗೆ ಸಮನಲ್ಲ..
ಹೊತ್ತ ತಂದೆಗೆ ಮಿಗಿಲಿಲ್ಲ...
ಕೆಟ್ಟ ಬುದ್ದಿಯು ನನಗಿಲ್ಲ…

... ಇದು ನಮ್ಮ ನಿಮ್ಮಯ ಕಥೆಯಲ್ಲಾ...
ಹದಿ ಹರೆಯದ ಆಕರ್ಷಣೆಯು ಸರಿಯಲ್ಲ...
ಬದುಕಿ ಬಾಳುವುದೇ ಗೊತ್ತಿಲ್ಲ..
ಆತ್ಮ ಹತ್ಯೆಯೇ ಇದಕೆ ಕೊನೆಯಲ್ಲಾ...