Wednesday, March 27, 2013

ಜನುಮದಿನ


 
 
 
ಇನಿಯನ ಜೀವನದ ಪ್ರತಿ ಕ್ಷಣದಲಿ
ಸುಖದಲ್ಲಾಗಲಿ ದುಃಖದಲ್ಲಾಗಲಿ
ನಗುವಲ್ಲಾಗಲಿ ಅಳುವಲ್ಲಾಗಲಿ
ಪಾಲು ಪಡೆಯುವವಳು ನೀನಲ್ಲವೇ !!!

ಪತಿಯ ಬದುಕಿನ ಪ್ರತಿ ಹೆಜ್ಜೆಯಲಿ
ಜೊತೆಯಾಗಿ ಪ್ರಿಯ ಸಖಿಯಾಗಿ
ಹೆಗಲಾಗಿ ಬಾಳಿನ ಗುರಿಯಾಗಿ
ಕಾಲು ಇಟ್ಟವಳು ನೀನೆಯಲ್ಲವೇ !!!

ಕಷ್ಟಗಳು ಹನಿಯಾಗಿ ನಿನ್ನ ಕಣ್ಣಿನಲಿ
ಕಾಣಿಸದಾದವು ನನ್ನ ಮೆಚ್ಚಿಸಲು
ಹೇಳಲಾರದನು ಮರೆಯಾಗಿಸಲು
ಮೆತ್ತಗೆ ನಗುವವಳು ನೀನಲ್ಲವೇ !!!

ಸಂಸಾರದ ಜವಾಬ್ದಾರಿಯ ಹೊತ್ತು
ಸಂಬಂಧದ ಬೆಸುಗೆಯನು ಕೊಟ್ಟು
ಸಂತೋಷವ ಉಣಬಡಿಸುವ ನಿನಗೆ
ಮರಳಿ ಬರುತಲಿರಲಿ ಈ "ಜನುಮದಿನ" !!!

1 comment:

  1. 'ಹೆಗಲಾಗಿ ಬಾಳಿನ ಗುರಿಯಾಗಿ' ಮಿಡಿವ ಸಹಧರ್ಮಿಣಿಗೆ ನಾವು ಏನು ಕೊಟ್ಟರೂ ಸಾಲದು. ಅವರ ಜನ್ಮದಿನಕ್ಕೆ ನಮ್ಮ ಉಡುಗೊರೆ ಅವರು ಬಯಸಿದಂತಿರಲಿ.
    http://badari-poems.blogspot.in/

    ReplyDelete