ಉತ್ತರ ಧ್ರುವದಿಂದ ಹರಿಯುವ
ಗಂಗೆ ನಾಚಿದಂತಹ ಸೌಂದರ್ಯ
ಬಾನಲ್ಲಿ ಮಿನುಗುವ ಅನಂತ ನಕ್ಷತ್ರ
ಜ್ಯೋತಿಯು ನಿನಗೆ ಮಾತ್ರ ಸೀಮಿತ !!
ಹಿಮಾಲಯ ಪರ್ವತ ಶ್ರೇಣಿಯ
ಮರೆಮಾಡುವ ನಿನ್ನಯ ಕೇಶವೇಣಿ
ಮರೆಯಲಾಗದು ನಿನ್ನ ಅಮೃತವಾಣಿ
ಸ್ತಬ್ದನಾದೆನು ನಾನೊಬ್ಬ ಮೂಕಪ್ರಾಣಿ !!
ನಿನಗೆ ಕರೆಯಲಾರದಷ್ಟು ಹೆಸರು
ನನಗೆ ನಿನ್ನಲ್ಲೇ ಅಡಗಿದೆ ಜೀವಉಸಿರು
ನಿನ್ನದೋ ಬಲು ಪ್ರಶಾಂತತೆಯ ನಿಲುವು
ಅದಕೆಯೇನೋ ನಿನ್ನಲ್ಲರಳಿದೆ ನನ್ನ ಒಲವು !!
No comments:
Post a Comment