Wednesday, October 16, 2013

ಹೇಳವ್ವಾ

 
 
ಹೇಳೇ ನನ್ನ ಹಡೆದವ್ವಾ
ನಿನ್ನಲೇನಿದೆ ಹೇಳವ್ವಾ
ನೋವಲು ನಲಿವಲು ನಿನ್ನದೇ ನೆನಪು
ಹೇಳೇ ನನ್ನ ಹಡೆದವ್ವಾ, ಹೇಳೇ ನನ್ನ ಹಡೆದವ್ವಾ !!

ನವಮಾಸ ನನ್ನ ಹೊತ್ತಿರುವೆ
ನರಕ ಯಾತನೆಯ ಪಟ್ಟಿರುವೆ
ಹರುಷದಿ ಜೀವವ ಕೊಟ್ಟಿರುವೆ
ಲಾಲಿಸಿ ಪಾಲಿಸಿ ಬೆಳೆಸಿರುವೆ !! ಪ !!

ಅದೆಷ್ಟೋ ರಾತ್ರಿ ನಾ ಅತ್ತಿರುವೆ
ನಿದ್ದೆಯಲ್ಲೂ ನಿನ್ನ ಬಲು ಕಾಡಿರುವೆ
ಅದೆಂತಹ ಕರುಣಾಮಯಿ ನೀನವ್ವ
ಹಾಲುಣಿಸಿ ಮಲಗಿಸಿರುವ ನನ್ನವ್ವ !! ಪ !!

ಯಾತನೆ ಪಡುವ ವಿಷಯವೇ ಬರಲಿ
ನಿನ್ನಲಿ ಚರ್ಚಿಸಿ ಮರೆಯುವೆನು
ನಿನ್ನಯ ಮೊಗದಿ ನಗುವನು ಕಂಡು
ಧೈರ್ಯದಿ ಗೆಲುವನು ಪಡೆಯುವೆನು !! ಪ !!

ಹೇಳೇ ನನ್ನ ಹಡೆದವ್ವಾ ನಿನ್ನಲೇನಿದೆ ಹೇಳವ್ವಾ !!

-- Sridhar Aithal D

2 comments:

  1. ಆಕೆಯಲ್ಲಿ ನೋವುಗಳ ಮರೆಸಿ - ನಲಿವನೇ ಹಂಚುವ conversion ಮನಸ್ಸಿದೆ!

    ReplyDelete
  2. ವಾವ್ ವಾವ್... ನಿಜ ನಿಜ, ಒಂದೇ ಸಾಲಲ್ಲಿ ಹೇಳಿದ್ರಿ ನೀವು... ಧನ್ಯವಾದ

    ReplyDelete