Tuesday, August 28, 2012

ಸದಾ

ಕನಸುಗಳ ಕಲ್ಪನೆಯ ಸುಳಿಯಲ್ಲಿ
ಆಸೆಗಳು ಆಗಸದ ತುದಿಯಲ್ಲಿ 
ಮನಸುಗಳು ನಮ್ಮಿಬ್ಬರ ಬಳಿಯಲ್ಲಿ 
ಸದಾ ಸುತ್ತಲಿ ಉಪಗ್ರಹದಂತೆ !
ಸಂತೋಷವು ಹೀಗೆ ಉಕ್ಕುತಲಿರಲಿ 
ಅಳುವು ಸುಳಿಯದಂತಾಗಲಿ 
ದಿನಗಳು ಉರುಳುತ್ತಲೇ ಬರಲಿ
ಬದುಕುವ ಆಕಾಶ ಭೂಮಿಯಂತೆ !!

 

Thursday, August 16, 2012

ನನ್ನ ನೋವಿನ ವಿಷಯ

ಏಕೆ ಕವಿದಿತ್ತೋ ಬಾನಲ್ಲಿ ಕಪ್ಪು ಕಾರ್ಮೋಡ,
ಮನಸಿನ ತುಂಬಾ ತು೦ಬಿತ್ತು ನೋವಿನ ದುಗುಡ,
ಅಪರಚಿತವಾಗಿತ್ತು ನನ್ನದೇ ಈ ಪುಟ್ಟ ಹೃದಯ,
ಹೇಳುವೆನು ನಾ ನಿಮಗೆ ನನ್ನ ನೋವಿನ ವಿಷಯ !!

ಒಂದು ಸಂಜೆ ನೋಡಿದ್ದೇ ಪ್ರೀತಿಯ ಶೃಂಗಾರ,
ನಮ್ಮಯ ಪ್ರೀತಿಗೆ ಈ ಗೆಳತಿಯೇ ಆಧಾರ,
ನಗುನಗುತ್ತ ಕುತಿದ್ದಳು ನನ್ನೊ೦ದಿಗ೦ದು, 
ಮಾತಿನಮಧ್ಯೆ ಹೇಳಿದ್ದಳು ಪ್ರಿಯ ನಾ ನಿನ್ನವಳೆ೦ದು !!

ಊರ ತು೦ಬಾ ಹಬ್ಬಿತ್ತು ನಮ್ಮದೆ ಗುಸುಗುಸು,
ಮನೆಗೆ ಬ೦ದಾಗ ತಿಳಿದಿತ್ತು ಆಕೆಯ ವಯಸ್ಸು,
ಹೆಚ್ಚು ಕಮ್ಮಿ ಇಟ್ಟಿದ್ದಳು ನನ್ನಲ್ಲೆ ಪೂರ್ಣಮನಸ್ಸು,
ಭಯದಿ೦ದ ಕೇಳಿದ್ದಳು ಪ್ರಿಯ ನೀನು ನನ್ನನ್ನೇ ವರಿಸು !!

ಕೇಳ ಹೂರಟಿದ್ದೆವು ನಾವೆಲ್ಲಾ ಅವಳ ಮನೆಗಿಂದು,
ಓಡಿ ಬರಬೇಕೆ ಕಪ್ಪು ಬೆಕ್ಕು ನಮ್ಮೆದುರಿಗಿಂದು,
ನಾಳೆ ಹೋಗಲು ಸೂಚಿಸಿದರು ಅಪಶಕುನವೆಂದು,
ಹೇಗೆ ಕಳೆಯಲಿ ನಾನೊಬ್ಬನೇ ಈ ಸಂಜೆ ಒಂದು!!

Sunday, August 12, 2012

ಬಡತನಅದು ಸುಮ್ಮನೆ ಹೇಳಿದರೆ ಮನುಜನಿಗೆ ಅರ್ಥವಾಗದು,
ನೊಂದು ಬಂದವನಿಗೆ ಅದನ್ನು ತಡೆದು ಕೊಳ್ಳಲಾಗದು,
ಹಸಿವು ಅರ್ಧ ಬೆಂದ ಜೀವನದಲ್ಲಿ ಉಸಿರಾಗುವುದು,
ಆಸೆಯೆಂಬ ಕನಸಿನ ಗೂಪುರವ ತನ್ನಲ್ಲೇ ಕಟ್ಟುವುದು !!

ಅದು ಬಂದಾಗ ರೋಗ ರುಜಿನವು ಕೂಡ ಅಂಜುವುದು,
ಸಾವು ನೋವುಗಳ ಜೊತೆ ಅನುದಿನ ಹೋರಾಡುವುದು,
ನೆಮ್ಮದಿ ಅದರ ಇರುವಿಕೆಗೆ ಕೊನೆಗೂ ತಿಳಿಯದಾಗದು,
ಮನಸೆಂಬ ನಾಕವನ್ನೇ ಎಂದೋ ದಾಟಿ ಬಂದಿರುವುದು !!   

ಧೈರ್ಯ ಸಾಹಸಗಳಿಗೆ ಅದುವೇ ಪ್ರಥಮ ಪಾಠಶಾಲೆ ,
ಪ್ರಯತ್ನಮಾಡಿ ಗೆದ್ದರೆ ಕಳೆಯುವುದು ಕಷ್ಟಗಳ ಸಂಕೋಲೆ,
ಸೋತವರು ಸೇರುವರು ಜನಸಾಮಾನ್ಯರ ಗುಂಪಿನಲ್ಲೇ,
ಕರೆಯೋ ಇದನ್ನ "ಬಡತನ" ಸಿರಿವಂತನಿಗೆ ಸಿಗದ ಓಲೆ !!

ಚಿನ್ನ

ನಿನ್ನ ಕರೆದೆ ಕನಕಾಂಬರಿ
ನೀ ಮುಡಿದ ಹೂವ ಕಂಡು
ನಿನ್ನ ಕರೆದೆ ಶ್ವೇತಾಂಬರಿ
ನಿನುಟ್ಟ ಸೀರೆಯ ಕಂಡು,

ನಿನ್ನ ಕರೆದೆ ನಯನಮನೋಹರಿ
ನಿನ್ನ ಆ ಕಣ್ಣುಗಳ ಕಂಡು
ನಿನ್ನ ಕರೆದೆ ಚಂದ್ರಚಕೋರಿ
ಚಂದ್ರನು ನಿನ್ನಲಿ ಸೋತಿದ್ದು ಕಂಡು,

ನಿನ್ನ ಕರೆದೆ ಸ್ವಪ್ನ ಸುಂದರಿ
ನೀ ತಂದ ಕನಸ ನೆನೆದು
ನಿನ್ನ ಕರೆದೆ ಮನೋಲ್ಲಾಸಿನಿ
ನೀ ತಂದ ಸಂತೋಷವ ನೆನೆದು,

ನಿನ್ನ ಕರೆದೆ ಭುವನ ಸುಂದರಿ 
ನಿನ್ನಲ್ಲಿಯ ಸೌಂದರ್ಯವ ನೆನೆದು
ಇನ್ನೇನು ನಾ ಕರೆಯಲಿ ನಿನ್ನ 
ಆಗಿರುವೆ ನೀನೆ ನನ್ನ ಬಾಳಿನ ಚಿನ್ನ !! 

ತಾಯೆ ನಿನ್ನ ಮಡಿಲಲಿಏನು ತಾಯೆ ನಿನ್ನ ಮಾಯೆ ಕಣ್ಣ ತೆರೆವ ಕ್ಷಣದಲಿ ತಾಯೆ ನಿನ್ನ ಮಡಿಲಲಿ

ಮನದ ಬಯಕೆ ತೀರಲಿ, ವರುಷ ಮತ್ತೆ ಮರಳಲಿ,
ಹರುಷ ತುಂಬಿ ಹಾಡಲಿ,ತಾಯೆ ನಿನ್ನ ಮಡಿಲಲಿ !!

ಕಮರಿದ ಆಸೆ ಮನಸಲಿ, ಕನಸಿನ ಕೂಸು ಕರುಳಲಿ,
ಚಿಗುರಿದ ಹೂವು ಅರಳಲಿ, ತಾಯೆ ನಿನ್ನ ಮಡಿಲಲಿ !!

ದ್ವೇಷ ಭಾವವು ತೊರೆಯಲಿ, ಸ್ನೇಹ ಹಸ್ತವು ಚಾಚಲಿ,
ಶಾಂತಿ ನೆಮ್ಮದಿ ಬೆಳೆಯಲಿ, ತಾಯೆ ನಿನ್ನ ಮಡಿಲಲಿ !!

ಅಹಂ ಕಾರವು ಅಳಿಯಲಿ, ದುಷ್ಟ ಶಕ್ತಿಯು ನಶಿಸಲಿ,
ಮಮತೆಯೊಂದೆ ಬಾನುಲಿ, ತಾಯೆ ನಿನ್ನ ಮಡಿಲಲಿ !!

ಸ್ವಾತಂತ್ರ್ಯವು ಮೊಳಗಲಿ, ವಿಜಯ ಪತಾಕೆ ಹಾರಲಿ,
ಗೆಲುವು ನಮ್ಮ ಬಳಿಯಲಿ, ತಾಯೆ ನಿನ್ನ ಮಡಿಲಲಿ!!

Friday, August 10, 2012

ಸಿಹಿ ನೆನಪು

ಗೆಳತಿ ನಿನಗೆ ನೆನಪಿದೆಯಾ
ಅಂದು ನಾನಾಡಿದ ತುಂಟ ಮಾತು
ತಟ್ಟನೆ ನಿನ್ನಲಿ ಉಂಟಾದ ನಾಚಿಕೆ
ಸಂಕೋಚದಲಿ ನೀ ಕೊಟ್ಟ ಒಪ್ಪಿಗೆ

ನಿನ್ನ ಕೋಮಲ ಹಸ್ತದಲ್ಲಿ
ನನ್ನ ಮೊದಲ ಮೃದುವಾದ ಸ್ಪರ್ಶ
ಕಣ್ಣು ರೆಪ್ಪೆ ಮುಚ್ಚಿದ ಆ ಸವಿನಿಮಿಷ
ಮೈಮರೆತು ಕಳೆದ ಅದೆಷ್ಟೋ ದಿವಸ

ಆತ್ಮೀಯತೆ ಪ್ರೀತಿಯಾದ ಅಮೃತ ಘಳಿಗೆ 
ಮಂದಹಾಸವನ್ನು ಬೀರುತ್ತ
ಮಧುರ ಹೀರುವ ಜೇನಂತೆ ನಾವು
ಒಬ್ಬರನ್ನೊಬ್ಬರು ಅಗಲದೆ ಕುಳಿತಿದ್ದೆವಲ್ಲಾ !!!

Thursday, August 9, 2012

ಓ ನನ್ನ ಮನಸೇ

ನನ್ನ ಅಂತರಂಗದ ಕೂಗು ಎಲ್ಲಿ ಕೇಳಿಸುವುದೋ,
ಭಾವ ತರಂಗಗಳಲ್ಲಿ ಯಾಕೆ ನುಸುಳುವುದೋ,
ಜೀವನಕ್ಕೆ ಹೊಸ ಅರ್ಥವ ಕಲ್ಪಿಸಲಿರುವುದೋ,
ಸ್ವಾರ್ಥ ಚಿಂತನೆಗೆ ತಿಲಾಂಜಲಿಯಾಗುವುದೋ ?

ವಿಚಾರ ವಿಮರ್ಶೆಗೆ ಸಿಲುಕಿಕೊಂಡಿರುವುದೇ,
ಆಚಾರ ಪದ್ದತಿಯನ್ನು ಮೀರಿ ನಿಂತಿರುವುದೇ,
ನೊಂದ ಜೀವಕೆ ಸಂತ್ವಾನವ ಸುರಿಸುತಲಿರುವುದೇ,
ಹೇಳು ನನ್ನ ಒಳಮನಸ್ಸೇ ಏನು ಸದಾ ಚಿಂತಿಸುತ್ತಲಿರುವೆ ?

ತುಂತುರು ಮಳೆಯಂತೆ ಹೊಯ್ಯುತಿರುವುದೇ,
ಅತ್ತರು ಕಾಣಿಸದಂತೆ ಮರೆಮಾಚುತಲಿರುವುದೇ,
ಸಪ್ತ ಸ್ವರಗಳಲ್ಲಿ ನಾದ ಹೊಮ್ಮಿ ವಿಲೀನವಾಗುವುದೇ,  
ಹೇಗೆ ನಿನ್ನ ನಾ ಅರಿಯಲಿ ಹೇಳು, "ಓ ನನ್ನ ಮನಸೇ" ?

ನಲ್ಲೆ

ಒಮ್ಮೆ ನಲ್ಲೆಯ ಬಳಿಯಲ್ಲಿ ಕೇಳಿದೆ
ಪ್ರಿಯೆ ನಿನಗೆ ಅದೆಷ್ಟು ಪ್ರೀತಿ ನನ್ನಲಿ
ಆಕೆ ಮೌನದಿ ಉತ್ತರಿಸಿದಳು
ದೇಹದಲ್ಲಿರುವ ರಕ್ತದ ಹನಿಗಳಷ್ಟು

ತಕ್ಷಣ ನನಗೂ ಪ್ರಶ್ನೆ ಕೇಳಿದಳು
ಪ್ರಿಯ ನೀನೆಂದು ವರಿಸುವೆ ನನ್ನ
ಆಗ ಯೋಚಿಸಿ ಉತ್ತರಿಸಿದೆ
ನಾವು ಮತ್ತೆ ಬೇಟಿಯಾಗುವ ಸುದಿನ

Thursday, August 2, 2012

ನಿದ್ದೆ

ನನಗೆ ನಿದ್ದೆ ಬಾರದಿದ್ದಾಗ
ಪಕ್ಕದವ ಗೊರಕೆ ಹೊಡೆಯುತಿದ್ದನಾಗ
ಕರ್ಕಶ ದ್ವನಿಯು ಗುಂಗುಡುತಿತ್ತು ಕಿವಿಯಲ್ಲಿ
ತಣ್ಣನೆ ತಂಪು ಬಂದಿತ್ತು ವಾತವರಣದಲ್ಲಿ !!

ನನಗೆ ಕನಸು ಬಿದ್ದಿತ್ತಾಗ
ಪಕ್ಕದವ ಸದ್ದಿಲ್ಲದೇ ತಿರುಗಿ ಮಲಗಿದ್ದಾಗ
ಕೊನೆಗೂ ನಿದ್ದೆ ಬಂದಿತು ನಿಮಿಷಾರ್ದದಲ್ಲಿ
ತಕ್ಷಣ ಎಚ್ಚರ ನೋಡಿದರೆ ಪಂಕ ನಿಂತಿತಲ್ಲಿ !!

ನನಗೆ ಸಹನೆ ಕಳೆದಿತ್ತಾಗ
ಕಿವಿಯ ಪಕ್ಕದಲ್ಲಿ ಸೊಳ್ಳೆ ಕೂಗಿದಾಗ
ಸಮಯ ನೋಡಹೋದೆ, ರಾತ್ರಿ ಕಳೆದಿತ್ತಲ್ಲಿ
ಸಣ್ಣಗೆ ಉಷಾಕಿರಣ ಮೂಡಿತ್ತು ಪೂರ್ವ ದಿಕ್ಕಿನಲ್ಲಿ !!

Wednesday, August 1, 2012

ನಗುಸುಂದರಿಯ ಸೌಂದರ್ಯವ ನೀನು ವ್ರದ್ದಿಸುವೆ,
ಆಪ್ತರಲ್ಲಿ ಆತ್ಮೀಯತೆಯ ನೀರೆಳೆದು ಬೆಳೆಸುವೆ,
ಮಡದಿಯಲ್ಲಿ ಪ್ರೀತಿಯ ನೀನು ಪ್ರಚೋದಿಸುವೆ,
ಶತ್ರುಗಳ ಹೃದಯದಲ್ಲೂ ನೀ ಮನೆ ಮಾಡಿರುವೆ !!

ಪ್ರತಿ ಆಗಮನದಲ್ಲೂ ಅಡಗಿದೆ ವಿವಿದ ವಿಶೇಷತೆ,
ಅಪರಿಚತರನ್ನು ಪರಿಚಯಿಸುವ ಶಕ್ತಿ ನಿನ್ನಲ್ಲಿದೆ,
ನೀ ಬಂದಾಗ ಅದೇನೋ ತಿಳಿಯಲಾಗದ ಆಕರ್ಷಣೆ,
ಅನಂತ ಆನಂದದಲ್ಲಿ ತೇಲಾಡಿದ ಬದಲಾವಣೆ !!

ಹಲವು ರೋಗಗಳಿಗೆ ಸಂಜೀವಿನಿ ನೀನಲ್ಲವೇ,
ಬಡವರ ಮನೆಯಲ್ಲೂ ಸಿಗುವ ಮನ್ವಂತರವೆ,
ಭಾಷೆ ಬಲ್ಲದವರ ಮಾತಿನ ಸೇತುವೆ ಆಗಿರುವೆ,
ಮನಸ್ಸು ತುಂಬಿದಾಗ ಕರೆಯದೆ ನೀ ಓಡಿಬರುವೆ!!

ನಗುವೇ ಅದಾವ ಗೂಡಿಂದ ನೀ ಬಂದಿರುವೆ?
ಅಂದದ ಚೆಲುವೆಯ ಮೊಗದಿ ಮಿನುಗುತಿರುವೆ,
ಮುದ್ದಿನ ಕಂದಮ್ಮನ ಮಾತಾಗಿ ಹೊಮ್ಮಿರುವೆ,
ನಿನ್ನ ಅರ್ಥೈಸಲಾಗದೆ ನಾನು ಸೋತಿರುವೆ !!