Wednesday, December 4, 2013

ಎನಿತು ಭಾಗ್ಯ ತಾಯೆ ನಿನದು







ತಾನು ಹೆತ್ತ ಮಗುವಲ್ಲದಿದ್ದರು
ಎದೆ ಹಾಲು ಉಣಿಸುವ ಭಾಗ್ಯ
ನಿನ್ನದಾಯಿತಲ್ಲೇ ಯಶೋದೆ...
ಎನಿತು ಭಾಗ್ಯ ತಾಯೆ ನಿನದು ?

ಮೂರು ಲೋಕದ ಒಡೆಯನಿಗೆ
ನಿನ್ನ ಕೈಯಾರೆ ತುತ್ತು ತೆತ್ತಿರುವೆ
ಗೊಲ್ಲ ಕೇರಿಯ ಬೆಣ್ಣೆಯಿತ್ತಿರುವೆ 
ಎನಿತು ಭಾಗ್ಯ ತಾಯೆ ನಿನದು ?

ತೊಟ್ಟಿಲ ಕಂದನ ಲೀಲೆಯ ಕಂಡೆ 
ಬಾಯೊಳು ಸಮಸ್ತ ಲೋಕವ ಕಂಡೆ
ದೇವರ ದೇವನ ಮಮತೆಯ ತಾಯಿ 
ಎನಿತು ಭಾಗ್ಯ ತಾಯೆ ನಿನದು ?

ಪುರುಷ ಸಿಂಹನ ತೊಳಲಿ ಆಡಿಸಿ
ವಿರಾಟ ರೂಪವ ಕಣ್ಣಲಿ ನೊಡಲು
ಹಲವು ಜನ್ಮದ ಪುಣ್ಯವು ಸಾಲದು 
ಎನಿತು ಭಾಗ್ಯ ತಾಯೆ ನಿನದು ? 

ಯಶೋದೆ...
ಎನಿತು ಭಾಗ್ಯ ತಾಯೆ ನಿನದು?

--Sridhar Aithal Devali

1 comment:

  1. ಪ್ರಾರ್ಥನಾ ಶ್ಲೋಕದಲಿ ಇಬ್ಬರು ತಾಯಂದಿರ ನೆನೆವುವಲ್ಲಾ ಅದೇ ಗೋಪಾಲನ ಗಿರಿಮೆ.

    ReplyDelete