Friday, December 6, 2013

ಓ ಕನಸೇ ನೀ ಎಷ್ಟೊಂದು ಸುಂದರ




"ಓ ಕನಸೇ ನೀ ಎಷ್ಟೊಂದು ಸುಂದರ"

ರಾತ್ರಿ ನಿದ್ರೆಯಲ್ಲಿ ಬಂದು
ಮನಕೆ ಮುದ ನೀಡುವೆ
ಬೆಳಿಗ್ಗೆ ನಿನ್ನ ನೆನೆಯಲು
ನೀ ಮರತೆ ಹೋಗಿರುವೆ
ಓ ಕನಸೇ ನೀ ಎಷ್ಟೊಂದು ಸುಂದರ !!


ಮಕ್ಕಳ ಸವಿ ನಿದ್ರೆಯಲ್ಲೂ
ನೀ ತಪ್ಪದೆ ಬರುವಿಯಂತೆ
ಕುಶಿಯಕೊಟ್ಟು ನೀ ನಗಿಸುವೆ
ಕಂದನ ಮುಕವನು ಅರಳಿಸುವೆ
ಓ ಕನಸೇ ನೀ ಎಷ್ಟೊಂದು ಸುಂದರ !!


ಕನಸಲಿ ಆಶಾ ಗೋಪುರ ಕಟ್ಟಿ
ಕ್ಷಣಿಕ ಸಾಧನೆಗೆ ಗೆಲ್ಲಿಸಿರುವೆ
ಕನಸಲ್ಲಾದರೂ ತೃಪ್ತಿ ಕೊಡುವೆ
ಮನಕೆ ಕೊಂಚ ತಂಪನೀಯುವೆ
ಓ ಕನಸೇ ನೀ ಎಷ್ಟೊಂದು ಸುಂದರ !!


ಒಮ್ಮೆ ಬಂದ ಕನಸು ಮತ್ತೆ ಬಾರದು
ನಮ್ಮ ಆಪ್ತರನ್ನು ಎಂದೂ ಮರೆಯದು
ಭಯಾನಕವಾದರೆ ಮೊಟಕಾಗುವುದು
ಸೋಗಸಾದರೆ ದೀರ್ಘವಾಗಿರುವುದು
ಓ ಕನಸೇ ನೀ ಎಷ್ಟೊಂದು ಸುಂದರ !!

ಶ್ರೀಧರ ಐತಾಳ ದೇವಳಿ

1 comment:

  1. ಸವಿಗನಸಿನ ಅಮಲು ದಿನಪೂರ ಸಕ್ಕರೆ ಸಕ್ಕರೆ. ಅವು ಎಂತ ಮೊಂಡನ್ನೂ ಮೆತ್ತೆಯಾಗಿಸಿ ನಗಿಸಿಬಿಡುತ್ತವೆ ಮೆಲ್ಲನೆ.

    ReplyDelete