ನನ್ನವಳ ನಗುವಿನಲ್ಲಿ ಮೂಡಿತ್ತು
ಕೆನ್ನೆಯ ಗುಳಿ
ಕೆನ್ನೆಯ ತುಂಬೆಲ್ಲ ಮಿನುಗುತಿತ್ತು
ಕಾಂತಿಯ ಹಾವಳಿ !!
ನನ್ನಾಕೆಯ ಮಾತಿನಲಿ ತುಂಬಿತ್ತು
ಪ್ರೀತಿಯ ಮಳೆ
ಪ್ರೀತಿಯಲಿ ನನ್ನವಳ ಸೋಲಿಸಿತ್ತು
ಪ್ರೇಮದ ಕಳೆ !!
ನನ್ನರಸಿಯ ದೃಷ್ಟಿಯದು ಸೆಳೆದಿತ್ತು
ನನ್ನಯ ಹೃದಯ
ನನ್ನಲ್ಲಿರುವ ಆಸೆಯನು ಸ್ಪಂದಿಸಿತ್ತು
ನನ್ನವಳ ಹೃದಯ !!
---ಶ್ರೀಧರ ಐತಾಳ ದೇವಳಿ
ನಿಮ್ಮಿಬ್ಬರ ವಸ್ತ್ರ ವಿನ್ಯಾಸ ಮತ್ತು ಆ ಸಂತೃಪ್ತ ನಗೆ ಮನ ಸೆಳೆಯಿತು.
ReplyDeleteಅಂತೆಯೇ ತಮ್ಮ ಪ್ರೇಮ ಕವನವೂ.
ಧನ್ಯವಾದ ಕಣ್ರೀ
ReplyDelete