Thursday, January 16, 2014

ಒಂದಾನೊಂದು ಪ್ರೇಮಕವಿತೆ
ಪ್ರಿಯೇ ನಿನಗಾಗಿ ಬರೆದಿದ್ದೆ
ನಾನೊಂದು "ಪ್ರೇಮಕವಿತೆ"ಯ

ತಾಳೆಗರಿಯ ಮೇಲೊಂದು
ತಾಳಲಾರದ ಮೇಲೊಂದು
ತಾಳ್ಮೆಯರಿತ ಮೇಲೊಂದು
ತಾಳೆ ನೋಡಿ ಮತ್ತೊಂದು !!

ತಾಳೆಗರಿಯ ಮೇಲೆ ಬರೆದಿದ್ದು
ತರುಣನ ತಲೆಯಲ್ಲಿ ಬಂದ
ಆಸೆಗಳ ಚಪಲ !

ತಾಳಲಾರದ ಮೇಲೆ ಬರೆದಿದ್ದು
ಯೌವನದ ಬಿಸಿಯನ್ನು ತಂದ
ಮಾನಸಿಕ ಚಂಚಲ !

ತಾಳ್ಮೆಯರಿತ ಮೇಲೆ ಬರೆದಿದ್ದು
ಮಧ್ಯಮ ವಯಸ್ಸಿನಲ್ಲಿ ಕಂಡ
ಸಾಮಾನ್ಯ ಕುತೂಹಲ !

ತಾಳೆ ನೋಡಿದ ಮೇಲೆ ಬರೆದಿದ್ದು
ಜಾತಕ ಹೊಂದಾಣಿಕೆ ನಂತರದ
ಮದುವೆಯ ಕಂಕಣಬಲ !

ಪ್ರಿಯೇ ನಿನಗಾಗಿ ಬರೆದಿದ್ದೆ
ನಾನೊಂದು "ಪ್ರೇಮಕವಿತೆ"ಯ  !!

---ಶ್ರೀಧರ ಐತಾಳ ದೇವಳಿ

2 comments:

  1. ಹೋಯ್ ಮಾರಾಯ್ರೇ 'ತಾಳ' ಉತ್ಸವ ರಸವತ್ತಾಗಿದೆ.

    ReplyDelete
  2. ಧನ್ಯವಾದ.. ಎಷ್ಟಂದ್ರು ನಾವು ಐ"ತಾಳ" ರಲ್ಲವೇ

    ReplyDelete