Thursday, January 16, 2014
ಓ ಕೋಮಲೆ
ನಿನ್ನ ನಯನದ
ಕುಡಿ ನೋಟಕ್ಕೆ
ಹತನಾದ ದುಷ್ಯಂತ ನಾ !!

ಓ ಅಭಲೇ
ನಿನ್ನ ಧೈರ್ಯದ 
ಒಣ ಹಟಕ್ಕೆ
ಬೆರಗಾದ ಮಹಾತ್ಮ ನಾ !!

ಓ ಶ್ಯಾಮಲೆ
ನಿನ್ನ ಸುಂದರ 
ಮೈ ಮಾಟಕ್ಕೆ
ವರನಾದ ಮನ್ಮತ ನಾ  !!

ಓ ನಿರ್ಮಲೆ
ನಿನ್ನ ಮುಗ್ದ
ಮನ ಪುಟಕ್ಕೆ
ದಾಸನಾದ ಕಾಂತ ನಾ !!

ಓ ಚಂಚಲೆ
ನಿನ್ನ ಅಕಾಲಿಕ
ಚಿತ್ತ ಓಟಕ್ಕೆ
ಚಕಿತನಾದ ಪತಿಯೇ ನಾ !!

---ಶ್ರೀಧರ ಐತಾಳ ದೇವಳಿNo comments:

Post a Comment