ನಿನ್ನ ಅಂದಕ್ಕೆ ಸೆರೆಯಾದ
ಗಂಡ ನಾನು !!
ಹೆಜ್ಜೆಯ ಸಮ್ಮಿಲನವೋ
ಗೆಜ್ಜೆಯ ಸವಿ ಸಪ್ಪಳವೊ
ಲಜ್ಜೆಯ ಸಮ್ಮೊಹನವೋ
ಹೆಜ್ಜೇನಿನ ಸಿಹಿ ಸಂತುಲನವೋ !!
ನಿನ್ನ ಸೊಂಟಕ್ಕೆ ಬಲಿಯಾದ
ತುಂಟ ನಾನು !!
ನಡಿಗೆಯ ಮೋಹಕತೆಯೋ
ನಿನ್ನ ಮೇಲಿನ ಮಮತೆಯೋ
ನಿನ್ನಲ್ಲಡಗಿದ ಮಾದಕತೆಯೋ
ಸುರ-ಕನ್ನಿಕೆಯರ ಸಮಾನತೆಯೋ !!
ನಿನ್ನ ಕಂಠಕ್ಕೆ ಬಂದಿಯಾದ
ಕೈದಿ ನಾನು !!
ನಾಟ್ಯದ ಅರಗಿಣಿಯೋ
ಕಾಡುವ ಮೋಹಿನಿಯೋ
ಸೆಳೆಯುವ ಮುದ್ದಿನಮಣಿಯೋ
ಸೆರೆಹಿಡಿವ ಸಪ್ತ ಸ್ವರ ಮಾಧುರ್ಯವೋ !!
ಒಟ್ಟಾರೆ ಅಂದಕ್ಕೆ ಸೆರೆಯಾಗಿ
ಸೊಂಟಕ್ಕೆ ಬಲಿಯಾಗಿ
ಕಂಠಕ್ಕೆ ಬಂದಿಯಾದ
ತುಂಟ ಕೈದಿ ಗಂಡ ನಾನು !!
--ಶ್ರೀಧರ ಐತಾಳ ದೇವಳಿ
'ತುಂಟ ಕೈದಿ'ಗೆ ಆಜೀವ ಪರ್ಯಂತ ದಾಂಪತ್ಯ ಹೃದಯ - ಕಾರಾಗೃಹ ವಾಸ ವಿಧಿಸುತ್ತಿದ್ದೇವೆ. ಖುಷಿಯಾಗೇ ಅನುಭವಿಸಿರಿ.
ReplyDeleteಧನ್ಯವಾದ, ಈ ಶಿಕ್ಷೆ ನಮಗೆ ಬಲು ಇಷ್ಟ....
ReplyDelete