Thursday, January 30, 2014

ನೀ ನಗುತಿರಲು





ಮೋಡದ ಮರೆಯಲ್ಲಿ ಅಡಗಿದ
ನೀ ನಿಂತಿರಲು
ಅರಳ ಬೇಕಂದೇನಿಲ್ಲ ಚಂದಿರ
ನೀ ನಗುತಿರಲು !!

ಬರೀ ಬೆಳಕಿಲ್ಲದ ರಾತ್ರಿಗಳು
ನೀ ಬರದಿರಲು
ಸುಳಿಯ ಬೇಕಾಗಿಲ್ಲ ತಾರೆಗಳು
ನೀ ಬಂದಿರಲು !!

ಅಮಾವಾಸ್ಯೆಯ ಕತ್ತಲೆಯಲ್ಲೂ
ನೀ ಮಿನುಗುತಿರಲು
ಇರುಳೆ ಇಷ್ಟವಾಗುತಿದೆ ನನಗೆ
ನೀ ಬಳಿಯಿರಲು !!

-- ಶ್ರೀಧರ ಐತಾಳ ದೇವಳಿ

2 comments:

  1. ಈ ಒಲುಮೆಯನ್ನು ಬದುಕೆಲ್ಲ ಕಾಯ್ದುಕೊಳ್ಳಿರಿ. ಸುಖ ದಾಂಪತ್ಯವು ನಿಮ್ಮದಾಗಿರಲಿ. ಅರವತ್ತನೇ ಮದುವೆ ವಾರ್ಷಿಕೋತ್ಸವದಲ್ಲಿ ಭೇಟಿಯಾಗೋಣ. :)

    ReplyDelete
  2. ಖಂಡಿತಾ... ನಿಮ್ಮೆಲ್ಲರ ಆಶೀರ್ವಾದ ಬಲವೊಂದಿದ್ದರೆ ಸಾಕು...

    ReplyDelete