ಪ್ರಿಯೇ ನಿನಗಾಗಿ ಬರೆದಿದ್ದೆ
ನಾನೊಂದು "ಪ್ರೇಮಕವಿತೆ"ಯ
ತಾಳೆಗರಿಯ ಮೇಲೊಂದು
ತಾಳಲಾರದ ಮೇಲೊಂದು
ತಾಳ್ಮೆಯರಿತ ಮೇಲೊಂದು
ತಾಳೆ ನೋಡಿ ಮತ್ತೊಂದು !!
ತಾಳೆಗರಿಯ ಮೇಲೆ ಬರೆದಿದ್ದು
ತರುಣನ ತಲೆಯಲ್ಲಿ ಬಂದ
ಆಸೆಗಳ ಚಪಲ !
ತಾಳಲಾರದ ಮೇಲೆ ಬರೆದಿದ್ದು
ಯೌವನದ ಬಿಸಿಯನ್ನು ತಂದ
ಮಾನಸಿಕ ಚಂಚಲ !
ತಾಳ್ಮೆಯರಿತ ಮೇಲೆ ಬರೆದಿದ್ದು
ಮಧ್ಯಮ ವಯಸ್ಸಿನಲ್ಲಿ ಕಂಡ
ಸಾಮಾನ್ಯ ಕುತೂಹಲ !
ತಾಳೆ ನೋಡಿದ ಮೇಲೆ ಬರೆದಿದ್ದು
ಜಾತಕ ಹೊಂದಾಣಿಕೆ ನಂತರದ
ಮದುವೆಯ ಕಂಕಣಬಲ !
ಪ್ರಿಯೇ ನಿನಗಾಗಿ ಬರೆದಿದ್ದೆ
ನಾನೊಂದು "ಪ್ರೇಮಕವಿತೆ"ಯ !!
---ಶ್ರೀಧರ ಐತಾಳ ದೇವಳಿ
ಹೋಯ್ ಮಾರಾಯ್ರೇ 'ತಾಳ' ಉತ್ಸವ ರಸವತ್ತಾಗಿದೆ.
ReplyDeleteಧನ್ಯವಾದ.. ಎಷ್ಟಂದ್ರು ನಾವು ಐ"ತಾಳ" ರಲ್ಲವೇ
ReplyDelete