Monday, January 13, 2014

ಪ್ರೇಮಪತ್ರ




ನನ್ನ ಒಲುಮೆಯ ಗೆಳತಿಯೇ ಇದ ಕೇಳು
ನಿನಗಾಗಿಯೆ ಬರೆದಿಹೆ ಈ ಸಾಲು
ಒಲವಿನಲಿ
ನಿನ್ನ ಬಯಕೆಯಲಿ
ತೊದಲುತ  ಬರೆದೆನು ಈ ಸಾಲು
ನನ್ನ ಒಲುಮೆಯ ಗೆಳತಿಯೇ ಇದ ಕೇಳು !!

ಹರುಷವ ನೋಡುವೆ ನಿನ್ನೊಳು ಎಂದಿಗೂ 
ನಿಮಿಷವೂ ನಿನ್ನನು ನೆನೆಯುವೆನು
ಜೊತೆಗಿರಲು
ನಿನ್ನ ಬಳಿಯಿರಲು
ಬಯಸುತ ಬರೆದೆನು ಈ ಸಾಲು
ನನ್ನ ಒಲುಮೆಯ ಗೆಳತಿಯೇ ಇದ ಕೇಳು !!

ತಾಯಾಗಿರುವೆ ನೀನಿಂದು ಮಮತೆಯಲಿ
ಮಗುವಾಗುವೆ ನಾನು ಪ್ರೀತಿಯಲಿ
ಮಲಗುತಲಿ
ನಿನ್ನ ಮಡಿಲಿನಲಿ
ಬದುಕಲು ಬರೆದೆನು ಈ ಸಾಲು
ನನ್ನ ಒಲುಮೆಯ ಗೆಳತಿಯೇ ಇದ ಕೇಳು !!

---ಶ್ರೀಧರ ಐತಾಳ ದೇವಳಿ

2 comments:

  1. 'ಬದುಕಲು ಬರೆದೆನು ಈ ಸಾಲು' ಎನ್ನುವ ಮಾತು ನಮ್ಮ ನಿಮ್ಮಂತಹ ಮದುವೆಯಾದವರಿಗೆ ಒಪ್ಪತಕ್ಕ ಮಾತು ಸಾರ್. ಪತ್ನಿ ಒಲಿಸಿಕೊಳ್ಳುವ ಶತಪ್ರಯತ್ನಗಳಲ್ಲಿ ಕಾವ್ಯವೂ ಒಂದು!

    ReplyDelete
  2. ಅದಕ್ಕೆ ಅಲ್ವೇ ಸ್ವಾಮಿ ಹಿಂದೆ ಹೇಳಿದ್ದು : " ಹೆಂಡತಿ ಒಲುಮೆಯ ಪಡೆಯದ ಗಂಡಿಗೆ ಎಂದೂ ಜಯವಿಲ್ಲ"

    ReplyDelete