Tuesday, June 3, 2014

ನೆನಪಿದೆಯಾ

ನೆನಪಿದೆಯಾ ಗೆಳತಿ
ನಾನಂದು ಬಿಗಿದಪ್ಪಿ ಮುದ್ದಿಸಿದ ಕ್ಷಣವ ?

ಶುಭ್ರ ಸುಕೋಮಲೆಯಾದ ನೀನು
ಅಂದು ಮುಸ್ಸಂಜೆಯ ತಂಗಾಳಿಯಲಿ
ಸೂರ್ಯನ ಕಾಂತಿಯನ್ನು ಮಬ್ಬಾಗಿಸಿ
ಬೆಳದಿಂಗಳ ಬೆಳಕನ್ನು ಮರೆಯಾಗಿಸಿ
ಗೆಳೆಯನ ಪುಟ್ಟ ಹೃದಯದಿ ಪ್ರೀತಿಯ
ಸ್ವಾಗತಿಸುವಂತೆ ಹೊಳೆಯುತ್ತಿದ್ದೆ ಅಲ್ಲಿ  !!

ನಿನ್ನ ಮಧುರ ಮಾತಿಗೆ ಪುಳಕಿತನಾಗಿ
ನನ್ನೇ ನಾನು ಮರೆತು ಸೋತುಹೋಗಿ
ನಿನ್ನನೊಮ್ಮೆ ನಾ ಬಾಹುವಿನಲಿ ಬಂದಿಸಲು
ಹಲವು ದೇವರ ಹರಕೆಹೊತ್ತು ಕಾಯುತಿರಲು 
ಅದೇನೋ ಮಿಂಚಿನ ಸಂಚಲನ ನನ್ನೊಳಗೆ
ತಿಳಿಯದೆ ನನ್ನನು ನಿನ್ನ ಬಳಿ ಕರೆತಂದಿತ್ತು  !!

ಕೆಂಡದಿಂದ ತೆಗೆದ ಕಬ್ಬಿಣದ ಸಲಾಕೆಯಂತೆ
ದೇಹವು ನಿನ್ನ ಪ್ರೀತಿ ಬಯಸಿ ಕುದಿಯುತಿತ್ತು
ಮುಗ್ಧ ನಗುವ ಬೀರುತ ನಿನ್ನ ಮುಖಾರವಿಂದ
ಹಲವಾರು ಆಸೆಯನ್ನು ನನ್ನಲಿ ಕೆರಳಿಸಿರಲು
ಆಜನ್ಮ ಜೋಡಿ ನಮ್ಮದೆನ್ನುವಂತೆ ನಾ ಬಾಗಿ
ನಿನ್ನ ಬಿಗಿದಪ್ಪಿ ಮುದ್ದಿಸಿ ಚುಂಬಿಸಿ ಬಿಟ್ಟೆನಲ್ಲ !!

ನಿನ್ನ ಸ್ಪರ್ಶದ ಆ ಘಳಿಗೆ ದೇಹದ ರೋಮವನ್ನೆಲ್ಲಾ
ಒಮ್ಮೆಲೇ ಜುಮ್ಮೆಂದು ರೋಮಾಂಚನಗೊಳಿಸಿರಲು
ಅಮ್ಮಾ.. ಅದೆಂತಹಾ ಬಿಸಿ ಉಸಿರೇ ನಿನ್ನದು ಗೆಳತಿ
ನನ್ನ ದೇಹವನ್ನೆಲ್ಲಾ ಒಮ್ಮೆಲೇ ಬೇವರಾಗಿಸಿ ಬಿಟ್ಟಿತು
ಪ್ರಮಾದವಾಗಿದೆ ಎಂದು ನಾ ನೊಂದು ಮರುಗಿರಲು
ನೀ ಒಪ್ಪಿಗೆಯ ನಗುವ ಸೂಚಿಸಿ ಮರೆಯಾಗಿಬಿಟ್ಟೆಯಲ್ಲ !!

ನೆನಪಿದೆಯಾ ಗೆಳತಿ.... ನಿನಗೆ ನೆನಪಿದೆಯಾ ?

--ಶ್ರೀಧರ ಐತಾಳ ದೇವಳಿ

2 comments:

  1. ರಸಿಕ ಕಾವ್ಯ ಪಂಡಿತೋತ್ತಮ ಐತಾಳೇಶ್ವರ.
    ಏನೋ ನೆನಪಾಗಿ, ನಮಗೂ:
    ನನ್ನ ದೇಹವನ್ನೆಲ್ಲಾ ಒಮ್ಮೆಲೇ ಬೇವರಾಗಿಸಿ ಬಿಟ್ಟಿತು

    ReplyDelete
  2. ನಿಮ್ಮ ಮೆಚ್ಚುಗೆಯ 3 ಸಾಲುಗಳಿಗಾಗಿ
    ನಾ ಕಾದು ಕುಳಿತಿದ್ದೆ ಅಂದರೆ ತಪ್ಪಾಗಲಾರದು... ಧನ್ಯವಾದ

    ReplyDelete