Friday, February 7, 2014

ಮೋಡಗಳೇ







ಬಾನಲ್ಲಿ ತೇಲುವ ಮೋಡಗಳೇ
ಕೇಳಿರಿ ನನ್ನ ಕೋರಿಕೆ

ಸೊರಗಿಹಳು ನನ್ನ ಮಡದಿ
ಸೂರ್ಯನ ಬಿಸಿ ತಾಪಕ್ಕೆ 
ಚಲಿಸದಿರಿ ಕೆಲ ಸಮಯ
ನನ್ನಾಕೆ ಮನೆಯ ತಲುಪುತಿರಲು !!

ಬಾನಲ್ಲಿ ತೇಲುವ ಮೋಡಗಳೇ
ಕೇಳಿರಿ ನನ್ನ ಕೋರಿಕೆ

ಮರುಗುವಳು ನನ್ನ ಮಡದಿ
ಅಕಾಲಿಕ ಬದಲಾವಣೆಗೆ
ಸುರಿಯದಿರಿ ಗಾಳಿ ಮಳೆಯ
ನನ್ನಾಕೆ ಮನೆಯ ತಲುಪುತಿರಲು !!

ಬಾನಲ್ಲಿ ತೇಲುವ ಮೋಡಗಳೇ
ಕೇಳಿರಿ ನನ್ನ ಕೋರಿಕೆ

ಕೊರಗಿಹಳು ನನ್ನ ಮಡದಿ
ರಾತ್ರಿಯ ಬಾನ ಕಂಡು
ಮರೆಯಾಗಿಸದಿರಿ ಚಂದಿರನ
ನನ್ನಾಕೆ ಮನೆಯ ಮಹಡಿಯೇರಲು !!


---ಶ್ರೀಧರ ಐತಾಳ ದೇವಳಿ

2 comments:

  1. ಮೋಡಗಳಿಗೂ ದಿಲ್ ಇದೆ. ಅರ್ಥವಾಗುತ್ತೆ ಅದಕೂ ಗ್ಯಾರಂಟಿ

    ReplyDelete