ಅಂದು ನಿನ್ನ ನೋಟ ಕಂಡು
ನನ್ನಲ್ಲೇನೋ ಭಾವ ಸಿಂಚನ
ಒಂದೇ ಒಂದು ನಗುವ ಕಂಡು
ನನ್ನೋಳಗೆನೋ ರೋಮಾಂಚನ !!
ಒಮ್ಮೆ ನಿನ್ನ ಸವಿಮಾತ ಕೇಳಿ
ನಾನೇ ಮನಸೋತು ನಿಂತೆನು
ಹೆಮ್ಮೆ ಪಡುತ ನಿನ್ನಲ್ಲಿಗೆ ಬಂದು
ನೋಡಲು ನನ್ನೇ ನಾನು ಮರೆತೆನು !!
ನಲ್ಲೆ ನಿನ್ನ ಪಡೆಯ ಬಯಸಿ
ಹಲವು ವರುಷವೇ ಕಳೆದೆನು
ನಾನೇ ಯಾಕೆ ಸೋಲಲೆಂದು
ಮನದಿ ನೆನೆಯುತ ಕೊರಗುವೆನು !!
---ಶ್ರೀಧರ ಐತಾಳ ದೇವಳಿ
ವಿಧಿ ಬರಹ ಎಂತ ಘೋರ
ReplyDeleteಪ್ರೇಮಿಗಳು ದೂರ ದೂರ...
ಎನ್ನುತ್ತದೆ ಸಿನಿಮಾ ಕವಿ ವಾಣಿ!
ಈ ಕೊರಗು ನಿಮ್ಮದೂ ನಮ್ಮದೂ ಸಹ. :(
ಎಲ್ಲರಿಗೂ ಒಂದಲ್ಲ ಒಂದು ಪ್ರೇಮದ ಕೊರಗು ಇದ್ದೆ ಇರುತ್ತೆ...
ReplyDelete