Tuesday, April 9, 2013

ಉಗಾದಿ

ಯುಗಾದಿ ಅನ್ನಲೋ ಉಗಾದಿ ಎನ್ನಲೋ
ಹೊಸ ಸಂವತ್ಸರದ ಬುನಾದಿ ಎಂತಲೋ  !!

ಮನೆ ಮಂದಿಗೆಲ್ಲ ಬೇವು ಬೆಲ್ಲ
ಬೇವಿನ ನೋವು ಅಲ್ಲಿ ಕ್ಷಣಕಾಲ
ಬೆಲ್ಲದ ನಲಿವು ಇರಲಿ ಚಿರಕಾಲ
ಹಾರೈಸುವುದು ಈ ಪರ್ವಕಾಲ !!

ಕಳೆದ ನಂದನದ ಶ್ರೇಯಸ್ಸು
ಬರುವ ವಿಜಯದಲ್ಲಿ ಹುಮ್ಮಸ್ಸು
ವೃದ್ಧಿಸಲಿ ನಿಮ್ಮೆಲ್ಲರ ಆಯುಸ್ಸು
ಸರ್ವರಿಗೊ ಉಗಾದಿಯ 'ವಿಶ್'ಸ್ಸು !!!

ಯುಗಾದಿ ಅನ್ನಲೋ ಉಗಾದಿ ಎನ್ನಲೋ
ಹೊಸ ಸಂವತ್ಸರದ ಬುನಾದಿ ಎಂತಲೋ  !!

1 comment:

  1. ಉಗಾದಿ ಸ್ವಾಗತ ಗೀತೆ ಮೆಚ್ಚುಗೆಯಾಯಿತು. ಹೊಸ ಸಂವತ್ಸರ ಹೊಸ ಹುರುಪನ್ನು ಹೊತ್ತುತರಲಿ.
    http://badari-poems.blogspot.in

    ReplyDelete