Friday, March 22, 2013

ಮತದಾನ

ಮತ್ತೇ ಬಂದಿದೆ ಸಾರ್ವತ್ರಿಕ ಮತದಾನ
ಪುಂಡ ಪುಕಾರಿಗಳಿಗದುವೆ ಬಲಪ್ರದರ್ಶನ
ಜಿದ್ದಾ ಜಿದ್ದಿನ ಹೋರಾಟಕ್ಕಾಗಿ ಕ್ಷಣಗಣನ !!!

ಪಕ್ಷದಿಂದ ಪಕ್ಷಕ್ಕೆ ಜಿಗಿವುದು ಸರ್ವೇಸಾಮಾನ್ಯ
ಕರಡು ನೀತಿ ಸಂಹಿತೆ ಹೇಳಲು ಮಾತ್ರ ಸೀಮಿತ
ಅಶ್ವ ಕರೀದಿಗೆ ಬೇಕಿಲ್ಲ ಕಿಂಚಿತ್ತೂ ಮೌಲ್ಯ ಮಾಪನ !!!

ಅಪ್ಪನಿಂದ ಮಗನಿಗೆ ಸಿಗುವುದು ಪಕ್ಷದ ಹಸ್ತಾಂತರ 
ಕಣ್ಣುಮುಚ್ಚಿ ಬೆಂಬಲಿಸುವುದು ಮೂಡ ಕಾರ್ಯಕರ್ತಾರ
ಇನ್ನೆಲ್ಲಿ ಸಾಗುವುದು ಇಂತಹ ನಮ್ಮ ರಾಜಕೀಯ ಭವಿಷ್ಯ !!!

ಜಾತಿ ಜಾತಿಗಳಿಗೊಂದು ಪಕ್ಷ ಇದನ್ನ ಕೇಳುವವರಾರು
ಹೆಂಡ ಸರಾಯಿ ಕೊಟ್ಟರೆ ಸಾಕು ಮರೆಯಲಾರರಿವರು ?
ಮುಂದೆ ಏಷ್ಟೇ ದುಡ್ಡು ಕೊಳ್ಳೆಹೊಡೆದರು ಕೊರಗುವವರಾರು  !!!

ಮಂತ್ರಿಗಿರಿಗಾಗಿ ನಡೆಯುವುದು ಒಳಗೊಳಗೆ ಕರಾಮತ್ತು
ಮಠಾಧಿಪತಿಗಳು ಸಹ ಹಿಡಿಯುವರು ನೀಚರ ವಕಾಲತ್ತು
ದುಡ್ಡು ಜಾಸ್ತಿ ಇದ್ದರೆ ಸಾಕು ಒಲಿಯುವುದು ಅಪ್ಪನಮನೆಯ ಸ್ವತ್ತು !!!


2 comments:

  1. "ಅಪ್ಪನಮನೆಯ ಸ್ವತ್ತು !!!" ಎಂದು ಪ್ರಶ್ನಿಸುವ ನಿಮ್ಮ ರಾಜಕೀಯ ವಿಡಂಬನಾತ್ಮಕ ಕವನವೂ ನನಗೆ ತುಂಬಾ ನೆಚ್ಚಿಗೆಯಾಯಿತು.

    http://badari-poems.blogspot.in

    ReplyDelete
  2. ಪ್ರೋತ್ಸಾಹದ ನುಡಿಗೆ ನಾನು ಅಬಾರಿ. ನಿಮ್ಮಂತವರ ಸಲಹೆ ನನಗೆ ಶ್ರೀರಕ್ಷೆ

    ReplyDelete