Wednesday, September 26, 2012

ಏನು ಗೊತ್ತು

ನಲಿವ ನವಿಲಿಗೇನು ಗೊತ್ತು 
ತನ್ನ ನೃತ್ಯ ನೋಡುವ ಮನಗಳ ಭಾವನೆ
ಕಚ್ಚುವ ಹಾವಿಗೇನು ಗೊತ್ತು
ತನ್ನ ಬಾಯಲ್ಲಿರುವ ವಿಷದ ಕಾರ್ಖಾನೆ !


ಹಾಡುವ ಕೋಗಿಲೆಗೇನು ಗೊತ್ತು
ತನ್ನ ಕಂಟದ ಇಂಪಾದ ಸ್ವರ ಸಂಪತ್ತು
ಓಡುವ ಜಿಂಕೆಗೇನು ಗೊತ್ತು
ತನ್ನ ಜಿಗಿತದಲ್ ಅಡಗಿರುವ ಗಮ್ಮತ್ತು  !


ಗರ್ಜಿಸುವ ಸಿಂಹಕ್ಕೆನು ಗೊತ್ತು
ತನ್ನ ಮನದಲ್ಲಿರುವ ಪ್ರೀತಿಯ ಸ್ವತ್ತು
ಜಿಗಿವ ಮೊಲಕ್ಕೆನು ಗೊತ್ತು
ತನ್ನ ಪ್ರಾಣಕ್ಕೆ ಆಗಲಿರುವ ಆಪತ್ತು  !


ಉಳುವ ರೈತನಿಗೇನು ಗೊತ್ತು
ತನ್ನ ಹೊಲದಲ್ಲಿರುವ ಖನಿಜ ಸಂಪತ್ತು
ಅಳುವ ಕಂದನಿಗೇನು ಗೊತ್ತು
ತನ್ನ ತಾಯಿಯ ಸ್ಪರ್ಶದ ಆ ಮುತ್ತು !!


ಗುಂಯಿಗುಡುವ ಜೇನಿಗೇನು ಗೊತ್ತು 
ತನ್ನ ತುಪ್ಪಕ್ಕಿರುವ ಕಾಸಿನ ಕಿಮ್ಮತ್ತು
ಇವೆಲ್ಲವೂ ಮೊದಲೇ ಗೊತ್ತಿದ್ದರೆ
ಜಗದ ನಿಯಮವೇ ತಲೆಕೆಳಗಾಗುತಿತ್ತು!!

No comments:

Post a Comment