Tuesday, May 13, 2014

ನೋಟ




ಹಲವು ನೋಟವ ಕಂಡ ನನಗೆ
ನಿನ್ನ ಒಲವು ತಿಳಿಯಲಾರದೆ

ನಿನ್ನ ನಗುವ ನಯನದ ಹೊಳಪದು
ನಕ್ಕಾಗ ಸುಕೋಮಲ
ನೇತ್ರಗಳನು ಒಮ್ಮೆಲೇ
ನಾಚಿ ಮುದುಡಿಸಿದ
ತಾವರೆಯ ಎಸಳಿನಂತೆ
ಆಕರ್ಷಿಸುತಿವುದು ನನ್ನನೇ !!

ನೀ ನುಡಿದ ಮುತ್ತಿನ ಮಾತದುವೆ
ಸಪ್ತ ಲೋಕದಲ್ಲಿಯೂ
ಕೇಳರಿಯದ ಶಬ್ದಗಳೋ
ಎಂಬಂತೆ ಭಾಸವಾಗಿ
ನಿನ್ನ ಸಾಂಗತ್ಯವನ್ನು
ಮೊದಲು ಪಡೆಯ ಬಯಸಿದೆ !!

ಶ್ರೀಧರ ಐತಾಳ ದೇವಳಿ

1 comment:

  1. ಈ ಒಲವಿನೋತ್ಕಟತೆ ನೂರ್ಕಾಲ ವೃದ್ಧಿಸಲಿ.

    ReplyDelete