Monday, March 3, 2014

ಮರೆಯದ ವಿಮಾನಯಾನ


ನೀ ಸಾಗುತಿರಲು ಮುಂದೆ ಮುಂದೆ 
ನನಗೇನೋ ದುಗುಡ ಕಾಡುತಲಿತ್ತು
ಸಾಗರದಾಚೆಗೆ ದಾಟುತಿರಲು ಪಯಣ
ಅಧಿಕವಾಗುತಲಿತ್ತು ದುಗುಡದ ಪ್ರಮಾಣ  !!

ಕಿಟಕಿಯ ಕಿಂಡಿಯಲಿ ರಮಣೀಯ ದ್ರಶ್ಯ
ಸುತ್ತಲೂ ಬೆಳ್ಳಿ ಮೋಡಗಳ ಸೌಂದರ್ಯ
ಗಗನಸಖಿಗಳು ಅಲ್ಲಿ ತಂಪನೀಯುತಿದ್ದರು 
ಆದರೂ ನನ್ನ ಬಿಡದು ಅದೇನೋ ದುಗುಡ  !!

ಚಿತ್ರ ವಿಚಿತ್ರವಾದ ಯೋಚನೆಗಳು ಮನದಲ್ಲಿ
ನಿದ್ರೆಯೂ ಬಾರದೆ ಕಾಡಿಸುತಲಿತ್ತು ನನಗಲ್ಲಿ
ಕೊಂಚ ನೆಮ್ಮದಿಯು ಬಂದಿತು ಈ ಚಿಂತೆಯಲ್ಲಿ
ಮಾಡಲು ಮತ್ತೆ ಹೋಗೆನು ಎನ್ನುವ ಶಪಥದಲ್ಲಿ  !!

---ಶ್ರೀಧರ ಐತಾಳ ದೇವಳಿ

2 comments:

  1. ನನಗೂ ಮೊದಲ ವಿಮಾನ ಯಾನವು ಸ್ವರ್ಗಾರೋಹಣಕ್ಕೆ ಸಿಂಪಲ್ಲು ದಾರಿಯೇ ಅನಿಸಿದ್ದಿದೆ

    ReplyDelete
  2. ಇಲ್ಲಿ ಅವರೋಹಣ ಆಗತ್ತೋ ಇಲ್ವೋ ಅಂತ ಭಯ ಆಗಿತ್ತು ಹವಾಮಾನದ ವೈಪರುತ್ಯದಿಂದ

    ReplyDelete