Thursday, September 12, 2013

ಯೋಚಿಸು ಮನುಜ

ನಾ ಬರೆದ ಕಾದಂಬರಿಯ
ಅಂತಿಮ ಪುಟದ ಕೊನೆಯ ಅಕ್ಷರಕೆ
ಮರೆಯಾಗುವ ಕಥೆಯ ಮೇಲಿನ ಮೋಹ

ನೀ ಮುಡಿದ ಮಲ್ಲಿಗೆಯ
ಬಾಡಿದ ಪುಷ್ಪದ ಪ್ರತಿ ಎಸಳಿಗೂ ...

ನಾಳೆ ಕಸದ ಪಾಲಾಗುವ ನೋವಿನ ಬಾವ

ಪರರ ಮೆಚ್ಚಿಸಲು ಶೃಂಗಾರ
ಸೌಂದರ್ಯ ವೃದ್ದಿಸಲು ಬೆಳ್ಳಿ ಬಂಗಾರ
ಕಾಲ ಬಂದಾಗ ನಡುಗುವುದು ಈ ಮರುಳು ದೇಹ

ಮೂರು ದಿನದ ಬಾಳ್ವೆಗೆ ಬಡಿದಾಟ
ದ್ವೇಷ ಅಸೂಯೆಗಳ ಜೊತೆ ಹೊಡೆದಾಟ
ಯೋಚಿಸು ಮನುಜ ನೀ ಸದಾ ಸವೆಯುತ್ತಿರುವ ಜೀವ
ಇಂದಲ್ಲ ನಾಳೆಗೆ ನಿನಗೂ ಕೊನೆ ಬರೆದಿಹನು ನೋಡು ಆ ದೇವ !!
 
 

2 comments:

  1. 'ಅಹಂ' - ಮನುಜನಿಗೆ ಕಡೆಯವರೆಗೂ ಕಟ್ಟಿಕೊಂಡೇ ಇರುವ ಶತ್ರು!

    ReplyDelete
  2. ಅದೇನು ನಿಜ, ಆದರೆ ಒಮ್ಮೆ ಆ ಶತ್ರು ಬಂದರೆ ಬಿಡೋದೇ ಇಲ್ಲ ಅಂತಾನೆ.

    ReplyDelete