Monday, September 18, 2017

ಭಗ್ನ ಪ್ರೇಮಿ ನಾನು...

ನಿನ್ನ ಬಾಡಿದ ಕಂಗಳ 
ನೋವಿನ ಸೆಳೆತದ
ಕಾಣದ ಗೆರೆಗಳ
ನೋಡಿದ ಕುರುಡ ನಾನು... ಕುರುಡ ನಾನು !!

ನಿನ್ನ ಪಡೆಯುವ ಆಸೆಗೆ
ಮಿಡುಯುವ ಹೃದಯದ
ಪ್ರತಿ ನಿಮಿಷದ ಬಿಡಿತವ
ಕೇಳಲಾರದ ಕಿವುಡ ನಾನು... ಕಿವುಡ ನಾನು !!

ನೀನಿಲ್ಲದ  ಸಂಪತ್ತಿಗೆ
ಹಗಲಿರುಳು ದುಡಿದು
ಕೊರಗಿ ಅನುಭವಿಸದೆ
ಒಡೆಯನಾದ ಬಡವ ನಾನು... ಬಡವ ನಾನು !!

ನಿನ್ನ ಪ್ರೀತಿಯ ಅರಿಯದೆ
ನನ್ನ ಭಾವನೆಯ ಹೇಳದೆ
ಸೋಲಿಗೆ ಹೆದರಿ ಮಾತಾಡದೆ
ತಲುಪಿದೆ ಜೀವನದ ಅಂತ್ಯದೆಡೆಗೆ... ನಾ ಅಂತ್ಯದೆಡೆಗೆ !!





No comments:

Post a Comment