Tuesday, July 15, 2014

ನನ್ನ ಮಗಳೇ

ಚಿನ್ನಾ, ಆ ನಿನ್ನ ಪುಟ್ಟ ಕಣ್ಣುಗಳೆರಡು
ನನ್ನನೇ ಹುಡುಕುತಿವೆ ಅನಿಸುತಲಿದೆ
ಭಾವನೆಯ ಲೋಕದಲಿ ಪರವಶನಾಗಿ
ನಿನ್ನ ಬಳಿಯೇ ಇರಲು ಮನಸಾಗುತಿದೆ !!

ನಿನ್ನಯ ನೋಟಗಳ ನಡುವಿನ ಮುಗ್ದತೆ
ಜೊತೆಯಲಿ ಮಿನುಗುವ ಹೊಸ ಕಾಂತಿ
ನೋವು ನಲಿವುಗಳ ಅರಿಯದ ಭಾವ
ನಿನ್ನಲೇ ಆಕರ್ಷಿಸಿರುವುದು ನನ್ನ ಜೀವ !!

ಆ ನಿನ್ನಯ ಮಧುರ ನೆನಪುಗಳೇ ವಿನಃ
ಬೇರಾವ ವಿಷಯಗಳು ತಿಳಿಯಲಾರದು
ನೀ ಬಂದು ಕಳೆದಿಲ್ಲಾ ಇನ್ನೂ ತಿಂಗಳು
ಆಗಲೇ ನನ್ನ ಸೆಳೆದಿರುವೆ ನೀ ಮಗಳೇ !!

-- ಶ್ರೀಧರ ಐತಾಳ ದೇವಳಿ

1 comment:

  1. ಮಗಳೆಂಬ ದೇವತೆಯ ಮಾಯಾಲೋಕದಲ್ಲಿ ಮುಳುಗಿಹೋಗಿರುವ ಕವಿಯೇ, ಮುಂದೆ ಈ ಮಗಳೇ ತಮ್ಮ ತಾಯಿಯ ಮಮತೆಯನೂ ತೋರುವಳು ತಮ್ಮ ಇಳಿ ವಯಸಿನಲ್ಲಿ. :)

    ReplyDelete