ಮರೆತರು ಮರೆಯಲಾಗದ ನೆನಪೊಂದು
ಮರೆತ ಮನಸನ್ನು ಕೊರೆದು
ಮರೆಯಲಾಗದಂತೆ ನೆನಪಿಸುತಿದೆಯಲ್ಲ !!
ಒಡಲಾಳದ ತಳದಲ್ಲಿ ಕಣ್ಮರೆಯಾಗಿದ್ದ
ನಿನ್ನ ಕುಡಿ ನೋಟವೊಂದು
ಕಡಲಿನಾಳದ ಮುತ್ತಿನಂತೆ ಮಿನುಗುತಿದೆಯಲ್ಲ !!
ಮಾತಿನ ಮರುಕ್ಷಣದಲಿ ನೆನಪೊಂದು
ನಿನ್ನ ಮಾತನ್ನೇ ನೆನಪಿಸಿ
ನನ್ನ ಅಸ್ತಿತ್ವವ ಮರೆಯಾಗಿಸುತಿದೆಯಲ್ಲ !!
ಮರೆತರು ಕರೆದರೂ ನೆನೆದರು ಎಂದೆಂದೂ
ಬರಲಾರದ ಊರಲ್ಲಿ ನೀನಿರುವೆ
ನಿನ್ನ ನೆನಪು ಮರೆಯಲಾರದಂತೆ ಬದುಕಲು
ನಾ ಅನುದಿನವು ಹವಣಿಸುತಲಿರುವೆ
ನೆನಪಲ್ಲಿ ಮನಸಲ್ಲಿ ಕನಸಲ್ಲಿ ನನ್ನ ಕಾಡುವ
ಆ ಸವಿಕ್ಷಣಗಳು ನನ್ನೊಂದಿಗೆ ಕೊನೆಯಾಗುವುದಲ್ಲ
ಎನ್ನುವ ಕೊರಗೆ ನನ್ನನಿಂದು ಕೊನೆಯಾಗಿಸುತಿದೆ !!
ನನ್ನ ಯಾವುದೋ ಕೊರಗು ನಿಮ್ಮಿಂದ ಕಾವ್ಯವಾದಾಗ ನಾನು ಕಣ್ಣೀರಾದೆ.
ReplyDeleteಇದು ನಮ್ಮೆಲ್ಲರ ಕೊರಗು... ಕಣ್ಣೀರಿಗೂ ಸಹಿಸಲಾರದು ಅದು ನಮ್ಮ ಕೊನೆ ಉಸಿರಿನ ತನಕ ಕಾಡುತ ಇರುವುದು....
ReplyDelete