ಕತ್ತಲೆಯಲ್ಲಿ ನಿನ್ನ ಬಿಂಬ
ಹುಡುಕುತಿರುವೆ ನಾ ಹುಂಬ !!
ನಿನ್ನ ಉಸಿರ ಬಿಸಿಗಾಳಿ
ಮರೆಯಾಗಿಸಿದೆ ಈ ತಂಗಾಳಿ
ಮಾತಿನ ಆ ಸವಿಯಿಂಪು
ಇರಲಾರದೆ ಇನ್ನೆಲ್ಲಿಯ ತಂಪು !!
ನೀನಿಲ್ಲದ ಈ ಹೊತ್ತು
ನನಗೆಲ್ಲಿದೆ ಇನ್ನು ಗಮ್ಮತ್ತು
ನನ್ನೊಳಗಿನ ಈ ಮನ
ಬರಸಿಹನು ನಿನಗಾಗಿ ಕವನ !!
ಮನದಾಳದ ಈ ನೋವು
ಮನದೊಡತಿಯ ನೆನಪಿನ ಕಾವು
ಮನೆಯೊಳಗಿನ ಆ ಮೌನ
ನೆನಪಿಸುತಿದೆ ನಿನ್ನಯ ನಿರ್ಗಮನ !!
ಕತ್ತಲೆಯಲ್ಲಿ ನಿನ್ನ ಬಿಂಬ
ಹುಡುಕುತಿರುವೆ ನಾ ಹುಂಬ !!
----ಶ್ರೀಧರ ಐತಾಳ ದೇವಳಿ
ಮಾರಾಯ್ರೇ ಕೇಳಿಲ್ಲವಾ ವಿರಹ ನೂರು ನೂರು ತರಹ ಅಂತಾ?
ReplyDeleteಹೌದು.. ವಿರಹ ಇದು ನಮ್ಮ ಹಣೆಬರಹ
ReplyDelete