ಬರೆಸಿದ್ದ ನೂರಾರು
ಕವನವ
ಎಷ್ಟೇ ಅರ್ಥ ಬಿಡಿಸಿ
ನೋಡಿದರೂ
ತಿಳಿಯಲಾಗದು ಯನ್ನ
ಒಡಲಿನ ನೋವ !!
ಬರೆದ ಅಕ್ಷರಗಳಲಿ
ಮಿನುಗುತಿತ್ತು
ಬರಿ ವರ್ಣನೆಯ ಪದ
ಪುಂಜಗಳು
ನೈಜ ಬದುಕಿನಲಿ ಸುತ್ತಿಕೊಂಡಿತ್ತು
ಹತ್ತು ಹಲವು ಕಷ್ಟ
ಕಾರ್ಪಣ್ಯಗಳು !!
ಮನಸು ಸದಾ ಮಿಡಿಯುತಿತ್ತು
ಇಂದಲ್ಲ ನಾಳೆಯ ಬದಲಾವಣೆಗೆ
ಕನಸಾದರೂ ನನಸಾಗುವುದೆಂಬ
ಹುಚ್ಚು ಆಸೆಯ ಬೆನ್ನಲ್ಲಿ
ಹೊತ್ತು !!
ಭಾವನೆಯ ಪ್ರಪಂಚವೇ
ಹಾಗೆ
ಅಲ್ಲಿ ಯಾರು ಅಂಕುಶಹಾಕುವವರಿಲ್ಲ
ನಿರ್ಧಾರಕೆ ಜಗವೇ
ತಲೆಬಾಗುತಿತ್ತು
ನಿತ್ಯ ನೂತನ ವಿಷಯ
ತುಂಬಿಕೊಂಡಿತ್ತು !!
ಆದರೆ ಕಾಲಿ ಹೊಟ್ಟೆಯು
ಕಾಲಿಯೇ ಆಗಿತ್ತು
ನಾಳೆಯ ಬದುಕಿನ ಆಸೆಯ
ಮರೆತಿತ್ತು
ಚಿಗುರಿದ ಕನಸನು
ಅಕ್ಷರದಿ ಹೊಂದಿಸಿತ್ತು
ತನ್ನೆಯ ಪಾಲಿಗೆ
ಬರಿ ಹೆಸರನು ಪಡೆದಿತ್ತು !!
--Sridhar

ನಮ್ಮಳ ಒಡಲಾಳದ ಕವಿಗೆ ಗೌರವಿಸಿದ ನಿಮಗೆ ಶರಣು.
ReplyDelete