ನನ್ನ ಕೆಲವು ಪ್ರಯತ್ನಗಳು ನಿಮ್ಮ ಮುಂದೆ ತೆರೆದಿಟ್ಟಿದ್ದೇನೆ. ತಿದ್ದಿ,ವಿಮರ್ಶಿಸಿ,ಪ್ರೋತ್ಸಾಹಿಸುವ ಕೆಲಸ ನಿಮ್ಮದು. ನಿಮ್ಮ ಈ ಗೆಳೆಯನಿಗಾಗಿ ಮಾಡುವಿರಿ ತಾನೇ ?
Sunday, January 27, 2013
Thursday, January 24, 2013
ಪ್ರಳಯ
ಪ್ರಳಯ ಎಂದರೆ ಇದೇ ಅಲ್ಲವೇ ಸ್ವಾಮೀ
ದಿನ ದಿನದ ಸಾವು
ಎಂದೂ ನಿಲ್ಲದ ನಿರಂತರ ಗೋಳು !!
ಕಾಶ್ಮೀರದ ಕಣಿವೆಯಲ್ಲಿ ಸಲ್ಲದ ಉಗ್ರರ ಉಪಟಳ
ಕಣ್ಣ ಮುಂದೆ ದಹನವಾಗುತಿದೆ ಯೋಧನ ಬಿಸಿದೇಹ
ಕಣ್ಣು ಮುಚ್ಚಿ ಕೂರುತಿದೆ ಸ್ವಾತಂತ್ರ್ಯ ಪಡೆದ ಸಶಕ್ತ ಭಾರತ ದೇಶ !! ಪ !!
ರಾಜ್ಯ ರಾಜ್ಯಗಳ ಮಧ್ಯೆ ಗಡಿ ಭೂಮಿಗಾಗಿ ಹಾರಾಟ
ನಿರಂತರ ಸಾಗುತಿದೆ ಕಾವೇರಿಯ ಕಾನೂನು ಕಾದಾಟ
ನಿತ್ಯ ನೀರಿಗಾಗಿ ಪರದಾಡುತಿದೆ ಬೆಂಗಳೂರಿಗನ ಜೀವನದ ಪುಟ !! ಪ !!
ಬೇಸಿಗೆ ಬಂತೆಂದರೆ ಬರಿದಾಗುವುದು ನಮ್ಮ ಆಣೆಕಟ್ಟು
ಮಳೆಗಾಲ ಬಂದರು ಬರಲಾಗದು ಹೊಸ ಮಳೆಯ ಹುಟ್ಟು
ಸತ್ಯ, ಅಂದು ನಿಂತೇ ಹೋಗುವುದು ಯಾಂತ್ರಿಕನ ಜೀವನದ ಗುಟ್ಟು !! ಪ !!
ಬೇಕೆ ಸ್ವಾಮೀ ಇತನ್ಮಧ್ಯೆ ಜಾತಿ ಮತಗಳಿಗಾಗಿ ಕಾದಾಟ
ರಾಜಕೀಯ, ಅಧಿಕಾರ, ಭಾಷೆ, ಪಂಥಗಳಿಗಾಗಿ ಹೊಡೆದಾಟ
ಎಂದೋ ನಿರ್ಧರಿಸಿಹನು ಅದಾಗಲೇ ವಿಧಿ ತಾನಾಡುವ ಕೋನೆಯ ಆಟ !!
ಪ್ರಳಯ ಎಂದರೆ ಇದೇ ಅಲ್ಲವೇ ಸ್ವಾಮೀ
ದಿನ ದಿನದ ಸಾವು
ಎಂದೂ ನಿಲ್ಲದ ನಿರಂತರ ಗೋಳು !!
Sunday, January 20, 2013
ಸೂರ್ಯ
ಸೂರ್ಯ ಕಾಂತಿಯ ರಮ್ಯ ಕಾಶಿ,
ಹೊಳೆಯುತಲಿದೆ ವನ ಸಸ್ಯ ರಾಶಿ,
ಚೈತನ್ಯದ ಝೇಂಕಾರಮಯ ಮೂರ್ತಿ
ಅಜರಾಮರವು ನಮ್ಮೀ ಬಾಸ್ಕರನ ಕೀರ್ತಿ !!
ಜಗವ ಬೆಳಗಿಪ ಸೂರ್ಯನಿಗೂ,
ಇರುಳ ಅರಸನಲ್ಲೇಕೋ ಮುನಿಸು,
ಬಿದಿಗೆ ಚಂದಿರನ ಸೌಂದರ್ಯಕೆ,
ರವಿಗೂ ತಾಳಲಾಗದ ಅಸೂಯೆ !!
ಮೂಡಣದ ದೊರೆಯ ಮನಸಿರಿಯೇ
ಅಮಾವಾಸ್ಯೆಗೆ ಕರಗುವುದು ನೀ ಸರಿಯೇ
ಬಾನ ಅಂಗಳದ ಈ ಮಧುರ ಸ್ನೇಹಕ್ಕೆ
ಪೂರ್ಣಿಮೆಯು ಮತ್ತೆ ಮತ್ತೆ ಬರಲಾರದೇ ?
Subscribe to:
Posts (Atom)
